ಸರಳವಾಗಿ ಎರಡು ದಿನದಲ್ಲೇ SSLC ಪರೀಕ್ಷೆ ನಡೆಯುವುದು ಹಾಗೂ ಫಲಿತಾಂಶ ಹೇಗೆ?; ಇಲ್ಲಿದೆ ಮಾಹಿತಿ!

ಎಸ್​ಎಸ್​ಎಲ್​ಸಿ ಪರೀಕ್ಷೆ ವಿಧ್ಯಾರ್ಥಿಗಳಿಗೂ ಗ್ರೇಡ್ ರೀತಿಯಲ್ಲಿ ಫಲಿತಾಂಶ ಆಗಸ್ಟ್ ತಿಂಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಪರೀಕ್ಷೆ ಕುರಿತು ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ರೂಪ್ಸಾ, ಕ್ಯಾಮ್ಸ್, ಖಾಸಗಿ ಶಾಲೆಗಳ ಒಕ್ಕೂಟ ಸ್ಚಾಗತ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು - ಅಂತೂ ಇಂತೂ ಎಸ್ ಎಸ್ ಎಲ್ ಸಿ, ಪಿಯುಸಿ  ಪರೀಕ್ಷೆ ನಿರ್ಧಾರ ಕೊನೆಗೂ ಹೊರಗೆ ಬಿದ್ದಿದೆ. ಪಿಯುಸಿ ಪರೀಕ್ಷೆ ಬೇಡ ಆದ್ರೆ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನ ಸರಳವಾಗಿ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದರ. ಹಾಗಾದರೆ ಎಸ್ ಎಸ್ ಎಲ್ ಪರೀಕ್ಷೆ ಹೇಗೆ ನಡೆಯುತ್ತೆ? ಪಿಯುಸಿ ಫಲಿತಾಂಶ ಹೇಗೆ ಕೊಡುತ್ತಾರೆ? ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೇಂದ್ರ ಸರ್ಕಾರ ಸಿಬಿಎಸ್​ಸಿ ಹಾಗೂ ಐಸಿಎಸ್​ಸಿ ಪರೀಕ್ಷೆ ರದ್ದುಗೊಳಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆ ಬಗ್ಗೆ ನಿರ್ಧಾರವನ್ನ ತೆಗೆದುಕೊಂಡಿರಲಿಲ್ಲ. ಇದೀಗ ಕೆಲವು ದಿನಗಳ ಕಾಲ ಕಾದು ಶಿಕ್ಷಣ ತಜ್ಞರು, ಪೋಷಕರ ಸಲಹೆ ಪಡೆದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಸುದ್ದಿಗೋಷ್ಟಿ ನಡೆಸಿ ತಮ್ಮ ನಿರ್ಧಾರವನ್ನ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವು ಸಹ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದೆ. ಮೊದಲ ಪಿಯುಸಿ ಪರೀಕ್ಷೆಯ ಫಲಿತಾಂಶ ಆಧಾರವಾಗಿ ಇಟ್ಟಿಕೊಂಡು ಗ್ರೇಡ್  ರೀತಿಯಲ್ಲಿ ಫಲಿತಾಂಶವನ್ನ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಯಾರಾದರು ವಿದ್ಯಾರ್ಥಿಗಳು ಅಸಮಾಧಾನಗೊಂಡು, ಫಲಿತಾಂಶದ ಬಗ್ಗೆ ಪ್ರಶ್ನೆ ಮಾಡಿದ್ರೆ ಪುನರ್ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಪಿಯು ಪರೀಕ್ಷೆ ನಡೆಸಿದ್ರೆ 12 ದಿನ ಬೇಕಾಗುತ್ತದೆ. ಸದ್ಯದ ಕೊರೋನದ ಸಂಕಷ್ಟದಲ್ಲಿ ಪರೀಕ್ಷೆ ನಡೆಸುವುದು ಅಸಾಧ್ಯ. ಈ ಹಿನ್ನೆಲೆ ಪಿಯುಸಿ ಪರೀಕ್ಷೆಯನ್ನ ರದ್ದು ಪಡಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಸಾಹಸವನ್ನ ಶಿಕ್ಷಣ ಇಲಾಖೆ ಮೈಮೇಲೆ ಇಳೆದುಕೊಂಡಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಜುಲೈ ಮೂರನೇ ವಾರದಲ್ಲಿ ಎರಡು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ದಿನ ಮೂರು ಭಾಷೆಗಳಾದ ಕನ್ನಡ ಇಂಗ್ಲೀಷ್ ಹಿಂದಿ ಎರಡನೇ ದಿನ ಸಮಾಜ, ವಿಜ್ಞಾನ, ಗಣಿತ ಸರಳೀಕರಿಸಿದ ಪರೀಕ್ಷೆ ಜರುಗುತ್ತದೆ. ತಲಾ ಒಂದು ವಿಷಯಕ್ಕೆ 40 ಅಂಕದಂತೆ ಮೂರು ವಿಷಯಗಳ ಒಳಗೊಂಡ ಒಟ್ಟು  120 ಅಂಕಗಳನ್ನ ಒಳಗೊಂಡ ಪ್ರಶ್ನೆ ಪತ್ರಿಕ ಇರಲಿದೆ. ಬಹು ಆಯ್ಕೆಯ ಪ್ರಶ್ನೆಗಳು ಇರಲಿದ್ದು, ಪ್ರಶ್ಬೆ ಪತ್ರಿಕೆಯ ಮಾದಾರಿಯನ್ನ ಮುಂಚಿತವಾಗಿ ವಿಧ್ಯಾರ್ಥಿಗಳಿಗೆ ನೀಡಲಾಗಿತ್ತದೆ‌ .

ಇದನ್ನೂ ಓದಿ: Pinarayi Vijayan: ಬಜೆಟ್​ನಲ್ಲಿ 20,000 ಕೋಟಿ ವಿಶೇಷ ಕೋವಿಡ್​ ಪ್ಯಾಕೇಜ್ ಘೋಷಿಸಿದ ಕೇರಳ ಸರ್ಕಾರ!

ಪರೀಕ್ಷೆ ನಡೆಯುವ 20 ದಿನಗಳ ಮುಂಚಿತವಾಗಿ ಘೋಷಣೆ ಮಾಡುತ್ತದೆ. ಈ ಭಾರಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ಅಂದರೆ  6 ಸಾವಿರಕ್ಕು ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದ್ದು ,  ಒಂದು ಕೊಠಡಿಯಲ್ಲಿ 10 ರಿಂದ 12 ಮಕ್ಕಳಿಗೆ ವಿಧ್ಯಾರ್ಥಿಗಳಿಗೆ ಮಾತ್ರ ಅವಕಾಶ. ಆರು ಅಡಿ ಸಮಾಜಿಕ ಅಂತರ ಪರೀಕ್ಷಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಿದ್ದು, ಯಾವುದೇ ವಿಧ್ಯಾರ್ಥಿಗಳನ್ನ ಫೇಲ್ ಮಾಡುವುದಿಲ್ಲ.ಈ ಬಾರಿ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಇರುವುದಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ಸರಳವಾಗಿ ಇರುತ್ತದೆ.

ಇನ್ನು  ವಿಧ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಬೇಡಿ ಎಂದು ಶಿಕ್ಷಷ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ರು. ಆದ್ರೆ ಎಸ್ ಎಸ್ ಎಲ್ ಪರೀಕ್ಷೆ ನಡೆಸುವ ಬಗ್ಗೆ ಇನ್ನು ಗೊಂದಲಗಳು ಮುಂದುವರಿದಿವೆ. ಈ ಬಾರಿಯು ರಿಪಿಟರ್ಸ್ ವಿಧ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಕೊರೋನಾ ಸ್ಥಿತಿಗತಿ ನೋಡಿಕೊಂಡು ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.

ಇದನ್ನೂ ಓದಿ: Juhi Chawla: ಪ್ರಚಾರಕ್ಕಾಗಿ ಅರ್ಜಿ ಹಾಕಬೇಡಿ; 5ಜಿ ವಿರೋಧಿಸಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಎಸ್​ಎಸ್​ಎಲ್​ಸಿ ಪರೀಕ್ಷೆ ವಿಧ್ಯಾರ್ಥಿಗಳಿಗೂ ಗ್ರೇಡ್ ರೀತಿಯಲ್ಲಿ ಫಲಿತಾಂಶ ಆಗಸ್ಟ್ ತಿಂಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಪರೀಕ್ಷೆ ಕುರಿತು ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ರೂಪ್ಸಾ, ಕ್ಯಾಮ್ಸ್, ಖಾಸಗಿ ಶಾಲೆಗಳ ಒಕ್ಕೂಟ ಸ್ಚಾಗತ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆ  ಹೇಗೆ ನಡೆಸುತ್ತಾರೆ ಎನ್ನುವ ಗೊಂದಲ ಹೆಚ್ಚಿವೆ. ಕೇಂದ್ರ ಸರ್ಕಾರದ ರೀತಿ ರಾಜ್ಯ ಸರ್ಕಾರ ಪಿಯುಸಿ ಪರೀಕ್ಷೆ ನಡೆಸದೇ ಇರಲು ನಿರ್ಧಾರ ತೆಗೆದುಕೊಂಡಿದ್ದರೂ, ಎಸ್ ಎಸ್ ಎಲ್ ಸಿ ವಿಚಾರದಲ್ಲಿ ಸರಳವಾಗಿಯಾದ್ರು ಪರೀಕ್ಷೆ ನಡೆಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾರೆ.

ಆದರೆ, ಇದಕ್ಕೆ ಕೊರೋನಾದ ಸ್ಥಿತಿಗತಿ ಹಾಗೂ ಮೂರನೇ ಕೊರೋನಾ ಅಲೆಯ ಗುಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನ ರದ್ದು ಮಾಡುವುದಕ್ಕೆ ದಾರಿ ಮಾಡಿಕೊಡುತ್ತದೋ ಕಾದು ನೋಡಬೇಕಿದೆ
Published by:MAshok Kumar
First published: