SSLC Result: ನಾಳೆ SSLC ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ

ನಾಳೆ SSLC ಫಲಿತಾಂಶ ಪ್ರಕಟಗೊಳ್ಳಲಿದ್ದು, ಈ ಕುರಿತು ನಾಳೆ 12.30ಕ್ಕೆ ಸಚಿವ ಬಿ.ಸಿ ನಾಗೇಶ್​​ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಅಧಿಕೃತ ವೆಬ್​ಸೈಟ್​ಗಳಲ್ಲಿ ಮಧ್ಯಾಹ್ನ 1 ಗಂಟೆ ಬಳಿಕ ಫಲಿತಾಂಶ ಬಿಡುಗಡೆಯಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 18):  ನಾಳೆ SSLC ಫಲಿತಾಂಶ ಪ್ರಕಟವಾಗಲಿದೆ.  ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಚಿವ ಬಿ.ಸಿ ನಾಗೇಶ್​  ಅವರು ನಾಳೆ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಘೋಷಣೆ ಮಾಡಲಿದ್ದಾರೆ.  SSLC ಬೋರ್ಡ್​ ಕೂಡ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದೆ.  ವಿದ್ಯಾರ್ಥಿಗಳಿಗೆ ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರಲಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳ ನಂಬರ್ ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಬರಲಿದೆ.  ವಿದ್ಯಾರ್ಥಿಗಳು  ಫಲಿತಾಂಶವನ್ನು  https://sslc.karnataka.gov.in/ ಅಥವಾ https://karresults.nic.in/ ಗೆ ಭೇಟಿ ನೀಡಿ  ಚೆಕ್‌ ಮಾಡಬಹುದಾಗಿದೆ. 

 ನಾಳೆ SSLC ಫಲಿತಾಂಶ ಪ್ರಕಟ
 ಮೌಲ್ಯಮಾಪನ  ನಿರೀಕ್ಷೆಗಿಂತ ತಡವಾಗಿ ಪೂರ್ಣಗೊಂಡಿದೆ. ಬಳಿಕ ಮೌಲ್ಯಮಾಪನದಲ್ಲಿ ಸಣ್ಣ ಪುಟ್ಟ ದೋಷಗಳು, ಕಣ್ತಪ್ಪುಗಳಿದ್ದಲ್ಲಿ ಅವುಗಳನ್ನು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಈ ಬಾರಿ SSLC ಫಲಿತಾಂಶ ಪ್ರಕಟನೆ ತಡವಾಗಿದೆ.

 SSLC 10 ನೇ ಫಲಿತಾಂಶ 2022: ಪರಿಶೀಲಿಸಲು ಕ್ರಮಗಳು

ಹಂತ 1. ಅಧಿಕೃತ ವೆಬ್‌ಸೈಟ್ KSEEB - sslc.karnataka.gov.in ಗೆ ಹೋಗಿ

ಹಂತ 2. ಮುಖಪುಟದಲ್ಲಿ SSLC 10 ನೇ ಪರೀಕ್ಷೆಯ ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 3. ಲಾಗಿನ್ ID ನಮೂದಿಸಿ- ನೋಂದಣಿ ಸಂಖ್ಯೆ/ ರೋಲ್ ಸಂಖ್ಯೆ ಹಾಕಿ

ಹಂತ 4. ನಿಮ್ಮ SSLC  ಫಲಿತಾಂಶ  ಸ್ಕ್ರೀನ್​ ಮೇಲೆ ಕಾಣಿಸುತ್ತದೆ

ಹಂತ 5.  ಡೌನ್‌ಲೋಡ್ ಮಾಡಿ ಮತ್ತು ಹೆಚ್ಚಿನ ಮಾಹಿತಿಗಾಗಿ  ಪ್ರಿಂಟ್ ಔಟ್ ತೆಗೆದುಕೊಳ್ಳಿ

ಇದನ್ನೂ ಓದಿ: Heavy Rain: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ತತ್ತರಿಸಿದ ಬೆಂಗಳೂರು! ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಹೊರಬೀಳಲಿದೆ 8.73 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಏಪ್ರಿಲ್ 11 ರಂದು ಮುಕ್ತಾಯಗೊಂಡಿದ್ದು,  ಈ ಬಾರಿ ರಾಜ್ಯದ ಒಟ್ಟು 15,387 ಶಾಲೆಗಳ 8.73 ಲಕ್ಷ ವಿದ್ಯಾರ್ಥಿಗಳು  SSLC ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3,446 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದಾರೆ. ನಾಳೆ SSLC ಫಲಿತಾಂಶ ಹೊರಬೀಳಲಿದೆ.

ಈ ಬಾರಿ ವಿದ್ಯಾರ್ಥಿಗಳಿಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್​

SSLC ಪೇಲ್‌ ಕಡಿಮೆ ಮಾಡಲು 10%  ಗ್ರೇಸ್ ಮಾರ್ಕ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.  SSLC ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ 3 ವಿಷಯದಲ್ಲಿ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸ್‌ ಮಾಡಲು ಸರ್ಕಾರ ತೀರ್ಮಾನಿಸಿದೆ.

ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಗ್ರೇಸ್​  ಮಾರ್ಕ್ಸ್​ಗಳನ್ನು  ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ.

ಯಾರಿಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್?










ಗ್ರೇಸ್ ಮಾರ್ಕ್ಸ್ ಹಂಚಿಕೆ ಮಾಡುವುದು ಹೇಗೆ?

ಕನ್ನಡ ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ.10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ. ಆದರೆ, ಈ ಗ್ರೇಸ್‌ ಅಂಕಗಳನ್ನುಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.



Published by:Pavana HS
First published: