SSLC Exam 2020: ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್​ ಹಸಿರು ನಿಶಾನೆ; ನಿಗದಿತ ದಿನಾಂಕದಂದೇ ನಡೆಯಲಿದೆ ಎಕ್ಸಾಮ್​

ಜೂ. 25 ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ SSLC ಪರೀಕ್ಷೆ  ನಿಗದಿ ಆಗಿದೆ. ಆದರೆ, ಈಗ ಕೊರೋನಾ ವೈರಸ್​ ಉಲ್ಬಣಗೊಳ್ಳುತ್ತಿದ್ದು, ಇಂಥ ಸಮಯದಲ್ಲಿ ಪರೀಕ್ಷೆ ನಡೆಸುವುದು ಬೇಡ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ.17): ರಾಜ್ಯದಲ್ಲಿ ಕೊರೋನಾ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಿತ್ಯ ಸೋಂಕಿತರು ಹಾಗೂ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಸಂದರ್ಭದಲ್ಲಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ನಡೆಸುವುದು ಬೇಡ ಎಂದು ಸಲ್ಲಿಕೆ ಆಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದ್ದು, ಈ ಮೂಲಕ ರಾಜ್ಯ ಹೈಕೋರ್ಟ್​ ಆದೇಶವನ್ನೇ ಎತ್ತಿ ಹಿಡಿದಿದೆ. ಹೀಗಾಗಿ ನಿಗದಿತ ಸಮಯದಲ್ಲೇ ಪರೀಕ್ಷೆ ನಡೆಯಲಿದೆ. 

ಜೂ. 25 ರಿಂದ ಜುಲೈ 4ರವರೆಗೆ ರಾಜ್ಯದಲ್ಲಿ SSLC ಪರೀಕ್ಷೆ  ನಿಗದಿ ಆಗಿದೆ. ಆದರೆ, ಈಗ ಕೊರೋನಾ ವೈರಸ್​ ಉಲ್ಬಣಗೊಳ್ಳುತ್ತಿದ್ದು, ಇಂಥ ಸಮಯದಲ್ಲಿ ಪರೀಕ್ಷೆ ನಡೆಸುವುದು ಬೇಡ ಎಂದು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾ. ನಾಗೇಶ್ವರ್ ರಾವ್ ನೇತೃತ್ವದ ತ್ರಿ ಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿತ್ತು.

ಹೈಕೋರ್ಟ್​ನಲ್ಲಿ ಅರ್ಜಿ ವಜಾಗೊಂಡಿದ್ದರಿಂದ ರಾಜಶ್ರೀ ನಾಗರಾಜ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು, ಆದರೆ, ಈಗ ಅಲ್ಲಿಯೂ ಈ ಅರ್ಜಿ ವಜಾಗೊಂಡಿದ್ದು, ಈ ಮೂಲಕ ಜೂ.25ರಿಂದಲೇ ಪರೀಕ್ಷೆಗಳು ನಡೆಯಲಿವೆ.

ಎಸ್​ಎಸ್​ಎಲ್​ಸಿ ವೇಳಾಪಟ್ಟಿ ಇಲ್ಲಿದೆ:

  • ಜೂನ್ 25 - ಗುರುವಾರ -ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ - ಬೆಳಗ್ಗೆ- 10.30ರಿಂದ ಮಧ್ಯಾಹ್ನ 1.30ರವರೆಗೆ

  • ಜೂನ್ 26- ಶುಕ್ರವಾರ- ಕೋರ್ ಸಬ್ಜೆಕ್​- ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಆ್ಯಂಡ್ ಎಲೆಕ್ಟ್ರಿಕಲ್

  • ಇಂಜಿನಿಯರಿಂಗ್ ಟು (ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45), ಇಂಜಿನಿಯರಿಂಗ್ ಗ್ರಾಫಿಕ್ಸ್ ಟು (ಮಧ್ಯಾಹ್ನ

  • 2ರಿಂದ ಸಂಜೆ 5.15ರವರೆಗೆ), ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (ಬೆಳಗ್ಗೆ 10.30ರಿಂದ

  • ಮಧ್ಯಾಹ್ನ 1.45), ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ - ಬೆಳಗ್ಗೆ 10.30ರಿಂದ 1.45

  • ಜೂನ್ 27- ಶನಿವಾರ - ಗಣಿತ, ಸಮಾಜಶಾಸ್ತ್ರ, - ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45

  • ಜೂನ್ 29- ಸೋಮವಾರ- ವಿಜ್ಞಾನ, ರಾಜ್ಯಶಾಸ್ತ್ರ(ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45) ಕರ್ನಾಟಕ

  • ಹಿಂದೂಸ್ತಾನಿ ಸಂಗೀತ- (ಮಧ್ಯಾಹ್ನ 2ರಿಂದ ಸಂಜೆ 5.15)

  • ಜುಲೈ- 1 ಬುಧವಾರ- ಸಮಾಜ ವಿಜ್ಞಾನ - ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45

  • ಜುಲೈ 2 - ಗುರುವಾರ- ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್,

  • ಸಂಸ್ಕೃತ - ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45

  • ಜುಲೈ- 3 ಶುಕ್ರವಾರ ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಆರೇಬಿಕ್, ಪರ್ಶಿಯನ್, ಉರ್ದು, ಸಂಸ್ಕೃತ,

  • ಕೊಂಕಣಿ, ತುಳು - ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30

  • ಜುಲೈ 4- ಜೆಟಿಎಸ್ (JTS) ಅಭ್ಯರ್ಥಿಗಳಿಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ


 
First published: