• Home
  • »
  • News
  • »
  • state
  • »
  • SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರೆಡಿ ಆಗ್ತಾ ಇದ್ದೀರಾ? ಹಾಗಾದ್ರೆ ಬೆಂಗಳೂರು ಆಕಾಶವಾಣಿಯಲ್ಲಿ ಪಾಠ ಕೇಳಿ!

SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರೆಡಿ ಆಗ್ತಾ ಇದ್ದೀರಾ? ಹಾಗಾದ್ರೆ ಬೆಂಗಳೂರು ಆಕಾಶವಾಣಿಯಲ್ಲಿ ಪಾಠ ಕೇಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾದಿಂದ ಕ್ಲಾಸ್ ಸರಿಯಾಗಿ ನಡೆದೇ ಇಲ್ಲ, ಮಕ್ಕಳು ಶಾಲೆಗೆ ಸರಿಯಾಗಿ ಹೋಗೋದಕ್ಕೇ ಆಗಿಲ್ಲ, ಇನ್ನು ಎಕ್ಸಾಂಗೆ ಹೇಗೆ ಓದಿಕೊಳ್ತಾರೆ, ಕಠಿಣವಾಗಿರುವ ಪಾಠಗಳನ್ನು ಹೇಗೆ ಕಲೀತಾರೆ ಅಂತ ಟೆನ್ಶನ್ ಇದ್ರೆ ಅದನ್ನ ಬಿಟ್ಹಾಕಿ. ನಿಮ್ಮ ಮಕ್ಕಳಿಗೆ ರೆಡಿಯೋ ಕೇಳೋದಕ್ಕೆ ಹೇಳಿ! ಅರೇ ಇದೇನಪ್ಪಾ, ಓದೋದನ್ನು ಬಿಟ್ಟು ರೆಡಿಯೋ ಕೇಳೋದಾ? ಹಾಗಾದ್ರೆ ಎಕ್ಸಾಂ ಪಾಸ್ ಆಗೋದು ಹೇಗೆ ಸ್ವಾಮಿ ಅಂತಾ ಕೇಳ್ತೀರಾ? ಗೊಂದಲ ಬೇಡ, ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ…

ಮುಂದೆ ಓದಿ ...
  • Share this:

ಬೆಂಗಳೂರು: ನೀವು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗೆ (Exam) ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಾ (Students)? ಅಥವಾ ನಿಮ್ಮ ಮನೆಯಲ್ಲಿ ಮಕ್ಕಳು 10ನೇ ತರಗತಿ (10th Standard) ಪರೀಕ್ಷೆಗೆ ಸಿದ್ಧರಾಗುತ್ತಾ ಇದ್ದಾರಾ? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇ ಬೇಕು. ಯಾಕೆಂದ್ರೆ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಖುಷಿ ಕೊಡುವ ಸುದ್ದಿಯೊಂದು ಇಲ್ಲಿದೆ. ಕೊರೋನಾದಿಂದ (Corona) ಕ್ಲಾಸ್ (Class) ಸರಿಯಾಗಿ ನಡೆದೇ ಇಲ್ಲ, ಮಕ್ಕಳು ಶಾಲೆಗೆ (School) ಸರಿಯಾಗಿ ಹೋಗೋದಕ್ಕೇ ಆಗಿಲ್ಲ, ಇನ್ನು ಎಕ್ಸಾಂಗೆ ಹೇಗೆ ಓದಿಕೊಳ್ತಾರೆ, ಕಠಿಣವಾಗಿರುವ ಪಾಠಗಳನ್ನು ಹೇಗೆ ಕಲೀತಾರೆ ಅಂತ ಟೆನ್ಶನ್ (Tension) ಇದ್ರೆ ಅದನ್ನ ಬಿಟ್ಹಾಕಿ. ನಿಮ್ಮ ಮಕ್ಕಳಿಗೆ ರೆಡಿಯೋ (Radio) ಕೇಳೋದಕ್ಕೆ ಹೇಳಿ! ಅರೇ ಇದೇನಪ್ಪಾ, ಓದೋದನ್ನು ಬಿಟ್ಟು ರೆಡಿಯೋ ಕೇಳೋದಾ? ಹಾಗಾದ್ರೆ ಎಕ್ಸಾಂ ಪಾಸ್ ಆಗೋದು ಹೇಗೆ ಸ್ವಾಮಿ ಅಂತಾ ಕೇಳ್ತೀರಾ? ಗೊಂದಲ ಬೇಡ, ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ…


ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಮುಹೂರ್ತ


ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2022ನೇ ಸಾಲಿನ 10ನೇ ತರಗತಿ ಪರೀಕ್ಷೆಯನ್ನು ಮಾರ್ಚ್‌/ಏಪ್ರಿಲ್‌ ನಲ್ಲಿ ನಡೆಸಲು ಈಗಾಗಲೇ ನಿರ್ಧರಿಸಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾರ್ಚ್‌ 28 ರಿಂದ ಏಪ್ರಿಲ್‌ 11, 2022 ರವರೆಗೆ ಪರೀಕ್ಷೆ ನಡೆಯಲಿದೆ.


ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಪಾಠ


ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ‘ಎಸ್ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತಾ ಸರಣಿ’ಯನ್ನು ಪ್ರಸಾರ ಮಾಡಲಾಗುತ್ತಿದೆ. ಬೆಂಗಳೂರು ಆಕಾಶವಾಣಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳ ಅನುಕೂಲಕ್ಕಾಗಿ ಪರೀಕ್ಷೆ ಸಿದ್ಧತೆ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಅನುಕೂಲವನ್ನು ಉಚಿತವಾಗಿ ಸದುಪಯೋಗಪಡಿಸಿಕೊಳ್ಳಬಹುದಾಗಿದೆ.


ಇದನ್ನೂ ಓದಿ: CBSE 10th Results ಪ್ರಕಟ; ವಿದ್ಯಾರ್ಥಿಗಳೇ, ಅಂಕಗಳನ್ನು ಹೀಗೆ ಚೆಕ್ ಮಾಡಿ


‘ಎಸ್ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತಾ ಸರಣಿ’ಯಲ್ಲಿ ಏನೇನು ಇರುತ್ತೆ?


‘ಎಸ್ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತಾ ಸರಣಿ’ಯಲ್ಲಿ ಪಾಠದ ಜೊತೆಗೆ ಇನ್ನೂ ಹಲವಾರು ವಿಚಾರ ಕುರಿತು ತಿಳಿಸಿಕೊಡಲಾಗುತ್ತದೆ. ವಿದ್ಯಾರ್ಥಿಗಳು ಯಾವ ವಿಷಯಗಳಿಗೆ ಹೇಗೆ ಸಿದ್ಧರಾಗಬೇಕು, ಉತ್ತರ ಬರೆಯುವ ಉತ್ತಮ ಕ್ರಮ ಯಾವುವು, ಪರೀಕ್ಷೆಗೆ ಸಿದ್ಧತೆ ನಡೆಸುವ ಸಮಯದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕರು ಹಾಗೂ ನುರಿತ ತಜ್ಞರು ವಿವರವಾದ ಮಾಹಿತಿ ನೀಡಲಿದ್ದಾರೆ.


ಇನ್ನೂ 4 ವಿಷಯಗಳ ಸರಣಿ ಬಾಕಿ


ಈಗಾಗಲೇ ಹಿಂದಿ, ಕನ್ನಡ, ವಿಜ್ಞಾನ, ಗಣಿತ ಭಾಗ 1ರ ಪರೀಕ್ಷೆ ಸಿದ್ಧತೆ ಸರಣಿ ಮುಗಿದಿದೆ. ಆದರೆ ಇನ್ನು ನಾಲ್ಕು ವಿಷಯಗಳ ಸಿದ್ಧತೆ ಸರಣಿ ಜತೆಗೆ ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆ, ಪರೀಕ್ಷೆ ಬರೆಯುವ ಕಾರ್ಯಕ್ರಮ, ಪರೀಕ್ಷಾ ಮಂಡಳಿಯ ನಿರ್ದೇಶಕರ ಮಾಹಿತಿ, ಮೊರಾಜಿ ದೇಸಾಯಿ ವಸತಿ ಶಾಲೆಗಳ ಮುಖ್ಯಸ್ಥರಿಂದ ಪ್ರಮುಖ ಮಾಹಿತಿಗಳ ಸರಣಿ ಇದೆ. ವಿದ್ಯಾರ್ಥಿಗಳು ಬೆಂಗಳೂರು ಆಕಾಶವಾಣಿಯಲ್ಲಿ ಕೇಳಬಹುದು.


ಯೂ ಟ್ಯೂಬ್ ಚಾನೆಲ್‌ನಲ್ಲೂ ವೀಕ್ಷಿಸಲು ಅವಕಾಶ


ಇನ್ನು ರೆಡಿಯೋಧಲ್ಲಿ ಪಾಠ ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳು ಬೆಂಗಳೂರು ಆಕಾಶವಾಣಿ ಕೇಂದ್ರದ ಯೂಟ್ಯೂಬ್ ಚಾನಲ್‌ನಲ್ಲೂ ಈ ಪರೀಕ್ಷೆ ಸಿದ್ಧತೆ ಸರಣಿಗಳನ್ನು ಕೇಳಬಹುದು. ಇದರ ಲಿಂಕ್ ಇಲ್ಲಿದೆ. All India Radio Bengaluru - https://www.youtube.com/channel/UCGuxl6IDLwfVadPtWQzVE_g


'ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತಾ ಸರಣಿ' ಪ್ರಸಾರ ವೇಳಾಪಟ್ಟಿ


ಸೋಮವಾರದಿಂದ ಶುಕ್ರವಾರದ ವರೆಗೆ ಮಧ್ಯಾಹ್ನ 2.35 ರಿಂದ 3 ಗಂಟೆವರೆಗೆ ಎಸ್ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತಾ ಸರಣಿ ಪ್ರಸಾರವಾಗಲಿದೆ. ಈಗಾಗಲೇ ಮಾರ್ಚ್ 7ರಂದು ಹಿಂದಿ, ಮಾರ್ಚ್ 8ರಂದು ಕನ್ನಡ, ಮಾರ್ಚ್ 9ರಂದು ವಿಜ್ಞಾನ ಭಾಗ 1, 10ರಂದು ವಿಜ್ಞಾನ ಭಾಗ 2, ಮಾರ್ಚ್ 11ರಂದು ಗಣಿತ ಭಾಗ 1 ಪ್ರಸಾರವಾಗಿದೆ.


ಇದನ್ನೂ ಓದಿ: PhD ಇಲ್ಲದೇ ಪ್ರಾಧ್ಯಾಪಕರಾಗಬಹುದು! ವಿವಿಗಳಲ್ಲಿ ಹೊಸಹುದ್ದೆ ಸೃಷ್ಟಿ! ಸಿಹಿಸುದ್ದಿ ನೀಡಿದ UGC


ಇಂದಿನಿಂದ ಮತ್ತೆ ಶುರುವಾಗಲಿದೆ ಪಾಠ


ಇನ್ನು ಇಂದು ಮಧ್ಯಾಹ್ನ 2.35ರಿಂದ 3 ಗಂಟೆವರೆಗೆ ಗಣಿತ ಭಾಗ 2, ನಾಳೆ ಸಮಾಜ ವಿಜ್ಞಾನ ಭಾಗ 1, ಮಾರ್ಚ್ 16ಕ್ಕೆ ಸಮಾಜ ವಿಜ್ಞಾನ ಭಾಗ 2, ಮಾರ್ಚ್ 17ಕ್ಕೆ ಇಂಗ್ಲಿಷ್, ಮಾರ್ಚ್ 18ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮಾನಸಿಕ ಸಿದ್ಧತೆ, ಮಾರ್ಚ್ 21ರಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಿಂದ ಪರೀಕ್ಷಾ ಮಾಹಿತಿ, ಮಾರ್ಚ್ 23ರಂದು ಪರೀಕ್ಷೆ ಬರೆಯುವ ಕ್ರಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮುಖ್ಯಸ್ಥರಿಂದ ವಿಶೇಷ ಮಾಹಿತಿ ದೊರೆಯಲಿದೆ.

Published by:Annappa Achari
First published: