ಬೆಂಗಳೂರು(ಜೂ.17): ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಲಾಂಜಲಿ ಇಟ್ಟಿರುವ ಶಿಕ್ಷಣ ಇಲಾಖೆ, ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ತಿದೆ. ಕೊರೋನಾ ಇಳಿಮುಖವಾಗ್ತಿರುವ ನಡುವೆ ಶಿಕ್ಷಣ ಇಲಾಖೆ ತನ್ನ ವೆಬ್ಸೈಟ್ ನಲ್ಲಿ ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆಪತ್ರಿಕೆಗಳು ರಿಲೀಸ್ ಮಾಡಿದೆ. ಈ ನಡುವೆ ಪಿಯುಸಿ ರಿಪೀಟರ್ಸ್ ಪರೀಕ್ಷೆ ನಡೆಸುವ ಕುರಿತು ಪಿಯು ಬೋರ್ಡ್ ಸಮಿತಿ ರಚನೆ ಮಾಡಿದೆ. ಕೊರೋನಾ ಸಂಕಷ್ಟದಲ್ಲಿ ಹೊಸದಾಗಿ ಶೈಕ್ಷಣಿಕ ಚಟುವಟಿಕೆ ಜರುಗುತ್ತಿವೆ. ಕಳೆದೊಂದು ವಾರದಿಂದ ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ. ಶೈಕ್ಷಣಿಕ ಚಟುವಟಿಕೆ ಈಗಾಗಲೇ ಆರಂಭವಾಗಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗುತ್ತಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಜುಲೈ 3ನೇ ವಾರ ಪರೀಕ್ಷೆ ಫಿಕ್ಸ್ ಮಾಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. 20 ದಿನಗಳ ಮುಂಚೆ ಘೋಷಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಅದರಂತೆ ಈ ತಿಂಗಳ ಕೊನೆಯ ವಾರದಲ್ಲಿ ಪರೀಕ್ಷಾ ದಿನಾಂಕ ಘೋಷಣೆ ಸಾಧ್ಯತೆಯಿದೆ. ಈಗಾಗಲೇ ಎಸ್ ಎಸ್ ಎಲ್ಸಿ ಮಾದರಿ ಪ್ರಶ್ನೆಪತ್ರಿಕೆಯೂ ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ..!
www.sslc.Karnataka.gov.in ನಲ್ಲಿ ಬಹುಆಯ್ಕೆಯ ಮೊದಲ ದಿನ ಮೂರು ವಿಷಯಗಳನ್ನು ಒಳಗೊಂಡ ಪ್ರಶ್ನೆಪತ್ರಿಕೆ ಪ್ರಕಟ ಮಾಡಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಒಂದು ಪ್ರಶ್ನೆಪತ್ರಿಕೆಯಲ್ಲಿ ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆಪತ್ರಿಕೆ, ಮೂರು ಗಂಟೆಗಳ ಕಾಲ ಜರುಗುವ ಮಾದರಿ ಪ್ರಕಟಿಸಿದೆ. ಉತ್ತರಗಳನ್ನು ಓ ಎಂ ಆರ್ ಶೀಟ್ ನಲ್ಲಿ ನಮೂದಿಸುವ ಮಾದರಿಯನ್ನು ಪ್ರಶ್ನೆಪತ್ರಿಕೆಯೊಂದಿಗೆ ಪ್ರಕಟಿಸಿದೆ.
ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆಪತ್ರಿಕೆ ಪ್ರಕಟ ಮಾಡಲಿದೆ. ಪ್ರಶ್ನೆಪತ್ರಿಕೆ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ಸೂಚನೆ ನೀಡಿದೆ. ಶಿಕ್ಷಕರಿಗೂ ಈ ಕುರಿತು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸುತ್ತಾರೆ.
ಇದನ್ನೂ ಓದಿ:Bengaluru Unlock: ಆಟೋ-ಟ್ಯಾಕ್ಸಿ ಚಾಲಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಅನ್ಲಾಕ್ ಕಂಡೀಷನ್ಸ್ ಹಾಕಿದ BBMP
ಇನ್ನು ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಪರೀಕ್ಷೆ ನಡೆಸುವ ವಿಚಾರವಾಗಿ ಪಿಯು ಪರೀಕ್ಷಾ ಮಂಡಳಿ ನೂತನ ಸಮಿತಿಯೊಂದನ್ನು ರಚಿಸಿದೆ. ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಎಂದು ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಗುರುವಾರ ಅಂದರೆ ನಾಳೆವರೆಗೆ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ನೀಡದಂತೆ ತಡೆ ನೀಡಿತ್ತು.
ಈ ಹಿನ್ನೆಲೆ ಶಿಕ್ಷಣ ಇಲಾಖೆ ನಾಳೆ ಕೋರ್ಟ್ ಗೆ ಈ ಕುರಿತು ಮಾಹಿತಿ ನೀಡಲಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಅಂಕ ನೀಡುವ ಸಲುವಾಗಿ ಹಾಗೂ ರಿಪೀಟರ್ಸ್ ಗೆ ಪರೀಕ್ಷೆ ವಿಚಾರವಾಗಿ 12 ಜನರ ಸಮಿತಿ ರಚಿಸಲಾಗಿದೆ. ಈ 12 ಜನರ ಸಮಿತಿಯ ವಾರದಿಯನ್ನ ಸರ್ಕಾರಕ್ಕೆ ನೀಡಲಾಗುತ್ತೆ. ಈ ವಾರದ ಒಳಗೆ 12 ಜನರ ಸಮಿತಿ ವರದಿ ನೀಡುವ ಸಾಧ್ಯತೆ ಇದೆ. ಸಮಿತಿಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಕೋರ್ಟ್ ಉತ್ತರಿಸಲು ಇನ್ನಷ್ಟು ದಿನ ಕಾಲಾವಕಾಶ ಕೇಳಲು ಪಿಯು ಮಂಡಳಿ ನಿರ್ಧರಿಸಿದಂತಿದೆ. ಸಮಿತಿಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ತೇವೆ. ಈ ವಿಚಾರವನ್ನೇ ನಾಳೆ ಕೋರ್ಟ್ ಗೆ ತಿಳಿಸುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಆರ್ ಪ್ರತಿಕ್ರಿಯೆ ನೀಡುತ್ತಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಬಾರಿ ಜುಲೈ 3ನೇ ವಾರದಲ್ಲಿ ಜರುಗುವುದು ಬಹುತೇಕ ಖಚಿತವಾಗಿದೆ. ಪಿಯುಸಿ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ರಿಪೀಟರ್ಸ್ ತಕರಾರು ಕೋರ್ಟ್ ನಲ್ಲಿದೆ. ಇದರಿಂದ ಹೊರಬರಲು ಶಿಕ್ಷಣ ಇಲಾಖೆ ಇದೀಗ ಸಮಿತಿ ರಚಿಸಿ ವರದಿಗಾಗಿ ಕಾಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ