news18-kannada Updated:March 1, 2021, 9:12 PM IST
ಶಿಕ್ಷಣ ಸಚಿವ ಸುರೇಶ್ ಕುಮಾರ್
ಧಾರವಾಡ (ಮಾ. 1): ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜೂ. 21 ರಿಂದ ಜು.5 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಕೋರ್ಸ್ ಪಠ್ಯ ವಿಷಯಗಳಿಗೆ ಒಂದು ದಿನ ವಿರಾಮವಿದೆ. ಜು. 15 ರಿಂದ ಪುನಃ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿ ಆರಂಭಗೊಳ್ಳಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ತಿಳಿಸಿದ್ದಾರೆ. ಪ್ರಸಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸ್ವಲ್ಪ ಭಿನ್ನವಾಗಿರಲಿದೆ ಜನವರಿಯಲ್ಲಿ ತರಗತಿ ಆರಂಭವಾದ ಹಿನ್ನೆಲೆ ಮಕ್ಕಳಿಗೆ ಹೊರೆ-ಒತ್ತಡ ಆಗದಂತೆ ಪರೀಕ್ಷೆಗೆ ಪಠ್ಯವನ್ನು ನಿಗದಿಪಡಿಸಲಾಗಿದೆ. ಮಕ್ಕಳು ಆತಂಕದ ಬದಲು ಆನಂದಿಂದದ ಪರೀಕ್ಷೆ ಬರೆಯಲು ತಯಾರಿ ನಡೆಸಲಾಗಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
- ಜೂ21-ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ,
- ಜೂ. 24-ಗಣಿತ,
- ಜೂ.28-ವಿಜ್ಞಾನ,
- ಜೂ.30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,
- ಜು2-ದ್ವಿತೀಯ ಭಾಷೆ ಇಂಗ್ಲಿಷ್/ಕನ್ನಡ, ಜು.೫-ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
- ಜು. 5ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ
ಬಳಿಕ ಮಾತನಾಡಿದ ಶಿಕ್ಷಣ ಸಚಿವರು ಬೆಳಗಾವಿ ವಿಭಾಗದ ಉಪನಿರ್ದೇಶಕರ (ಡಿಡಿಪಿಐ) ಜತೆಗೆ ಚರ್ಚಿಸಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಮಾಡಲಾಗಿದೆ. ಮಕ್ಕಳ ಹಾಜರಾತಿ ಹೇಗಿದೆ. ಕಳೆದ ಭಾರಿ 34 ನೇ ಸ್ಥಾನದ ಹಾವೇರಿ ಜಿಲ್ಲೆ ಫಲಿತಾಂಶ ಸುಧಾರಣಾ ಕ್ರಮ, ಹತ್ತಾರು ವಿಷಯಗಳ ಬಗ್ಗೆ ಚರ್ಚಿಸಿ, ಉತ್ತಮ ಅಂಶ ಅಳವಡಿಕೆಗೆ ಸೂಚಿಸಿದೆ ಎಂದರು.
ರಾಜ್ಯದಲ್ಲಿ 1.50 ಲಕ್ಷ ಮಕ್ಕಳು ಸರ್ಕಾರಿ ಶಾಲೆಗೆ ಬಂದಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಸರ್ಕಾರಿ 8 ಸಾವಿರ ಮಕ್ಕಳ ಹಾಜರಾತಿ ಇದೆ. ಮಕ್ಕಳ ಹಿತದೃಷ್ಟಿಯಿಂದ ಬೆಳಗಾವಿ ವಿಭಾಗದ ಪ್ರತಿಯೊಬ್ಬ ಅಧಿಕಾರಿಗಳು 2 ಶಾಲೆಗಳನ್ನು ದತ್ತು ಪಡೆದು, ಬೋಧನೆ ಮಾಡುವಂತೆ ಸೂಚನೆ ನೀಡಿದ್ದಾಗಿ ಹೇಳಿದರು.
ಎಲ್ಲ ತಾಲೂಕಿನ ಮುಖ್ಯ ಶಿಕ್ಷಕರ ಕಾರ್ಯಾಗಾರ ನಡೆಸಿ, ಉತ್ತಮ ಬೋಧನಾ ಪ್ರಯೋಗವನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಏ.2ರಿಂದ ಪುನಃ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎರಡ್ಮೂರು ಜಿಲ್ಲೆಯನ್ನು ಸೇರಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆ ತಯಾರಿ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ಇದನ್ನು ಓದಿ: ದಂಡಕ್ಕೆ ಪಟ್ಟು ಹಿಡಿದ ಟ್ರಾಫಿಕ್ ಪೊಲೀಸ್; ಮಾಂಗಲ್ಯ ಸರ ಮಾರಲು ಮುಂದಾದ ಮಹಿಳೆ
ಕೋವಿಡ್ನಿಂದ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರಿದೆ. 1-5ನೇ ತರಗತಿ ಆರಂಭದ ಬಗ್ಗೆ ಪಾಲಕರಿಂದ ಒತ್ತಡ ಬಂದಿದೆ. ಆದರೆ, ಕರ್ನಾಟಕ ಸೇರಿ, 6 ರಾಜ್ಯಗಳಲ್ಲಿ ಕೋವಿಡ್ 2ನೇ ಅಲೆಯ ಸೋಂಕಿನ ಪ್ರಮಾಣ ಹೆಚ್ಚಿದೆ. ಎರಡು ವಾರ ಕಾದುನೋಡಿ ಆರಂಭ ಮಾಡುವುದಾಗಿ ತಿಳಿಸಿದರು.
ಬೆಳಗಾವಿ ವಿಭಾಗ ಮಟ್ಟದ 'ಶಿಕ್ಷಣ ಸ್ಪಂದನ'ದಲ್ಲಿ 2940 ಅಹವಾಲು ಸಲ್ಲಿಲ್ಪಟ್ಟಿದ್ದು, ಈ ಪೈಕಿ 2485 ಬಿಇಓ ಹಂತದಲ್ಲಿ, 182 ಡಿಡಿಪಿಐ(ಆಡಳಿತ) ಹಂತದಲ್ಲಿ, ಏಳು ಆಯಕ್ತರ ಹಂತದಲ್ಲಿ ಒಟ್ಟು 2674 ಅರ್ಜಿ ಇತ್ಯರ್ಥಪಡಿಸಿದೆ. 266 ಅರ್ಜಿ ಬಾಕಿ ಉಳಿದಿವೆ. ಪಿಯುಸಿ ವಿಭಾಗದ 90 ಅಹವಾಲು ಬಂದಿವೆ. ಮೊದಲೇ 36 ಡಿಡಿಪಿಯು ಹಂತದಲ್ಲಿ, 5 ಅಹವಾಲು ಶಿಕ್ಷಣ ಸ್ಪಂದನದಲ್ಲಿ ಇತ್ಯರ್ಥಪಡಿಸಿ ಸೂಕ್ತ ಪರಿಹಾರ ಸೂಚಿಸಿದೆ.
ಖಾಸಗಿ ಶಾಲೆ ಶುಲ್ಕ ವಿಚಾರದಲ್ಲಿ ಮಧ್ಯೆ ಪ್ರವೇಶಕ್ಕೆ ಆಸಕ್ತಿ ಇರಲಿಲ್ಲ. ಇದು ಆಡಳಿತ ಮಂಡಳಿ-ಪಾಲಕರ ನಡುವಿನ ವಿಷಯ. ಆದರೆ, ರಾಜ್ಯದ್ಯಂತ ದೂರ ಬಂದ ಹಿನ್ನಲೆ ಆಡಳಿತ ಮಂಡಳಿ-ಪಾಲಕರ ಸಭೆ ನಡೆಸಿದಾಗ ಶೇ.25 ರ ವಿನಾಯತಿಗೆ ಆಡಳಿತ ಮಂಡಳಿ, ಶೇ.40 ರ ವಿನಾಯತಿಗೆ ಪಾಲಕರು ಒತ್ತಾಯಿಸಿದ್ದು, ಅಂತಿಮವಾಗಿ ಶೇ.30 ರಷ್ಟು ವಿನಾಯತಿಗೆ ಆದೇಶಿಸಿತು. ಇದನ್ನು ಪ್ರಶ್ನಿಸಿ ಕೆಲ ಆಡಳಿತ ಮಂಡಳಿ ಹೈಕೋರ್ಟ್ ಮೇಟ್ಟಿಲೇರಿವೆ. ಕೋರ್ಟ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದರು.
(ವರದಿ: ಮಂಜುನಾಥ ಯಡಳ್ಳಿ)
Published by:
Seema R
First published:
March 1, 2021, 9:12 PM IST