• Home
  • »
  • News
  • »
  • state
  • »
  • SSLC Exam 2023: ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ‌ಪ್ರಕಟ; ಯಾವ ದಿನ? ಯಾವ ಪರೀಕ್ಷೆ?

SSLC Exam 2023: ಎಸ್​ಎಸ್​ಎಲ್​ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ‌ಪ್ರಕಟ; ಯಾವ ದಿನ? ಯಾವ ಪರೀಕ್ಷೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಸ್ಎಸ್ಎಲ್‌ಸಿ ಬೋರ್ಡ್ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. 

  • News18 Kannada
  • Last Updated :
  • Karnataka, India
  • Share this:

2022-23ನೇ ಸಾಲಿನ ಎಸ್ಎಸ್ಎಲ್‌ಸಿ (SSLC Exam) ಪರೀಕ್ಷೆಗೆ  ಅಂತಿಮ ವೇಳಾಪಟ್ಟಿ (Time Table) ಬಿಡುಗಡೆ ಮಾಡಲಾಗಿದೆ. ಎಸ್ಎಸ್ಎಲ್‌ಸಿ ಬೋರ್ಡ್ ವೇಳಾಪಟ್ಟಿ ಪ್ರಕಟ ಮಾಡಿದೆ. ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.  ವೇಳಾಪಟ್ಟಿ  ಪ್ರಕಾರ ಯಾವ ದಿನ ಯಾವ ಪರೀಕ್ಷೆ (Exam) ನಡೆಯುತ್ತದೆ ಎನ್ನುವ ಮಾಹಿತಿ ಇಲ್ಲಿದೆ.  ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ವೇಳಾಪಟ್ಟಿ ಬಿಡುಗಡೆ ಮಾಡಿದೆ.


SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ


ಮಾರ್ಚ 31- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್


ಏಪ್ರಿಲ್ 04- ಗಣಿತ, ಸಮಾಜ ಶಾಸ್ತ್ರ


ಏಪ್ರಿಲ್ 06 - ದ್ವಿತೀಯ ಭಾಷೆ
ಇಂಗ್ಲಿಷ್, ಕನ್ನಡ


ಏಪ್ರಿಲ್ 08- ಅರ್ಥಶಾಸ್ತ್ರ


ಏಪ್ರಿಲ್ 10- ವಿಜ್ಞಾನ, ರಾಜ್ಯಶಾಸ್ತ್ರ


ಏಪ್ರಿಲ್ 12- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ


ಏಪ್ರಿಲ್ 15- ಸಮಾಜ ವಿಜ್ಞಾನ


ಸಚಿವ ಬಿ.ಸಿ ನಾಗೇಶ್ ಟ್ವೀಟ್​


ಪರೀಕ್ಷೆಯ ಅಧಿಕೃತ ಮಾಹಿತಿಯನ್ನು ಸಚಿವ ಬಿ.ಸಿ ನಾಗೇಶ್ ಅವರು ಟ್ಟೀಟ್​ ಮಾಡಿದ್ದಾರೆ​



ಕೆಲ ದಿನಗಳ ಹಿಂದಷ್ಟೇ ಪಿಯುಸಿ ಪರೀಕ್ಷೆ ವೇಳಾಪಟ್ಟಿ


ವಿದ್ಯಾರ್ಥಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ದ್ವಿತೀಯ ಪಿಯು (2nd PUC Exam) ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ.  2023 ಮಾರ್ಚ್ 9 ರಿಂದ 29 ರವರೆಗೆ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು  ಶಿಕ್ಷಣ (Education) ಇಲಾಖೆ  ಇದೀಗ ಪ್ರಕಟಿಸಿದೆ. ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು (Final Time Table) ನೀವು ಅಧಿಕೃತ ವೆಬ್​ಸೈಟ್​ನಲ್ಲಿ ಪಡೆಯಬಹುದು. ಅಧಿಕೃತ ವೆಬ್​ಸೈಟ್​ಗೆ  ಭೇಟಿ ನೀಡಲು ನೀವು ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.


ವೇಳಾಪಟ್ಟಿ ವಿವರ ಹೀಗಿದೆ


2023 ಮಾರ್ಚ್ 09 ಕನ್ನಡ


ಮಾರ್ಚ್ 11 ಗಣಿತ, ಶಿಕ್ಷಣ


ಮಾರ್ಚ್ 13 ಅರ್ಥಶಾಸ್ತ್ರ


ಮಾರ್ಚ್ 14 ರಸಯಾನಶಾಸ್ತ್ರ, ಮನಶಾಸ್ತ್ರ, ಕರ್ನಾಟಕ ಸಂಗೀತ , ಹಿಂದುಸ್ತಾನಿ ಸಂಗೀತ ಮತ್ತು ಮೂಲಗಣಿತ


ಮಾರ್ಚ್ 15 , ಪ್ರಥಮ ಭಾಷೆ ಪರೀಕ್ಷೆ
ತ‌ಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್


ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅಧಿಕಾರಿ ಬಿ ಸಿ ನಾಗೇಶ್​ ಈ ಕುರಿತು ಟ್ವೀಟ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಪಿಯುಸಿ ವಿದ್ಯಾರ್ಥಿಗಳಿಗೆ MCQ ಮಾದರಿ ಪ್ರಶ್ನೆ ಪತ್ರಿಕೆ!


ಪಿಯುಸಿ (PUC) ವಿದ್ಯಾರ್ಥಿಗಳಿಗೆ ಈಗಾಗಲೇ ವೇಳಾಪಟ್ಟಿ ಬಿಡುಗಡೆಯಾಗಿದ್ದು ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಈ ವರ್ಷ ಪ್ರಶ್ನೆ ಪತ್ರಿಕೆ (Question Paper) ಯಾವ ಮಾದರಿಯಲ್ಲಿ ಬರಲಿದೆ ಎಂದು ತಿಳಿದುಕೊಂಡು ನಂತರ ಅಭ್ಯಾಸ ಮಾಡಿದರೆ ಅವರಿಗೆ ಇನ್ನೂ ಹೆಚ್ಚಿನ ಅಂಕ (Score) ಗಳಿಸಲು ಸಹಕಾರಿಯಾಗುತ್ತದೆ. ಆ ಕಾರಣ ಇಲ್ಲಿ ಪ್ರಶ್ನೆ ಪತ್ರಿಕೆ ಯಾವ ಮಾದರಿಯಲ್ಲಿರಲಿದೆ ಎಂದು ತಿಳಿಸಲಾಗಿತ್ತಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ. ಪ್ರತಿ ವರ್ಷವೂ ಲಿಖಿತ ರೂಪದಲ್ಲಿ ಪ್ರಶ್ನೆಗಳಿಗೆ ಉತ್ತರ ಬರೆಯುವ ಮೂಲಕ ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ಬಾರಿ ದೀರ್ಘ ಉತ್ತರಗಳೊಟ್ಟಿಗೆ ಬಹು ಆಯ್ಕೆಯ (Multiple Choice Questions) ಪ್ರಶ್ನೆಗಳನ್ನೂ ಸಹ ಇಡುವುದಾಗಿ ಶಿಕ್ಷಣ ಸಚಿವರು ತಿಳಿಸಿದ್ದಾರೆ.


ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ಪಿಯುಸಿ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ


ರಾಜ್ಯ ಸರ್ಕಾರವು 15-20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು (MCQ) ಪರಿಚಯಿಸುವುದರೊಂದಿಗೆ ಪೂರ್ವ-ವಿಶ್ವವಿದ್ಯಾಲಯ (PU) ಪರೀಕ್ಷಾ ವ್ಯವಸ್ಥೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು