ಚಿಕ್ಕೋಡಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಸಾಧನೆಗೆ ಅಡ್ಡಿಯಾಗದ ಅಂಧತ್ವ

ಇನ್ನು ತಮ್ಮ ಮಗಳ ಸಾಧನೆ ಕೊಂಡಾಡಿರುವ ಪೋಷಕರು ಮಗಳ ಐಎಎಸ್ ಕನಸನ್ನು ತಂದೆ ಬಾಹುಬಲಿ ತೆರೆದಿಟ್ಟಿದ್ದಾರೆ. ಸಾಕಷ್ಟು ಕಷ್ಟಗಳು ಬಂದರೂ ಮಗಳಿಗೆ ವಿಧ್ಯಾಭ್ಯಾಸ ಕೊಡಿಸಿದ್ದೇವೆ. ಮಗಳು ಐಎಎಸ್‌ ಆಗುವ ಇಂಗಿತ ತೋರಿದ್ದಾಳೆ. ಈಗಾಗಲೇ ಮಂಗಳೂರಿನ ಕಾಲೇಜಿನಲ್ಲಿ ದಾಖಲಾತಿ ಮಾಡಿಸಿದ್ದೇನೆ. ಎಷ್ಟೆ ಕಷ್ಟ ಆಗಲಿ ಮಗಳಿಗೆ ಐಎಎಸ್‌ ಓದಿಸುತ್ತೇನೆ ಅಂತಾರೆ ತಂದೆ ಬಾಹುಬಲಿ.

ವಿದ್ಯಾರ್ಥಿನಿ ಅಪೂರ್ವ

ವಿದ್ಯಾರ್ಥಿನಿ ಅಪೂರ್ವ

  • Share this:
ಚಿಕ್ಕೋಡಿ(ಸೆ.08): ಕಣ್ಣು ಕಿವಿ, ಮೂಗು, ಬಾಯಿ ನೆಟ್ಟಗಿರೋರೆ ಸಾಧಿಸೋದಿರ್ಲಿ ಸಾಧನೆಯ ಹಾದಿಯನ್ನ ತುಳಿಯೋಕು ಸಹ ಆಗೊಲ್ಲ. ಆದರೆ ಇಲ್ಲೊಬ್ಬಳು ವಿಶೇಷ ಚೇತನ ವಿದ್ಯಾರ್ಥಿನಿ ಎಲ್ಲವೂ ಸರಿಯಾಗಿರೋರಿಗೆ ತನ್ನ ಸಾಧನೆಯ ಮುಖೇನ ಸವಾಲು ಹಾಕಿದ್ದಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಆದ ತಪ್ಪಿಗೆ ಠಕ್ಕರ್ ಕೊಟ್ಟ ವಿಶೇಷಚೇತನೆ, ರಾಜ್ಯದಲ್ಲೆ ಅತೀ ಹೆಚ್ಚು ಅಂಕಗಳಿಸೋ ಮೂಲಕ ರಾಜ್ಯದ ಅಂಧ ವಿದ್ಯಾರ್ಥಿಗಳಲ್ಲೆ ಅತೀ ಹೆಚ್ಚು ಅಂಕ ಗಳಿಸಿ ತನ್ನೂರಿಗೆ ಕೀರ್ತಿ ತಂದಿದ್ದಾಳೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಬಾಹುಬಲಿ ಟೋಪಗಿ ಮತ್ತು ರೋಹಿಣಿ ಟೋಪಗಿಯವರ ಮೂರನೇ ಮಗಳು ಅಪೂರ್ವ. ಟೋಪಗಿ ಸಾಧನೆ ಮಾಡಿದ ವಿಧ್ಯಾರ್ಥಿನಿ. ಹುಟ್ಟನಿಂದಲೇ ಅಂಧಳಾಗಿರುವ ಈಕೆ ಈಗ ರಾಜ್ಯದ ಅಂಧ ವಿದ್ಯಾರ್ಥಿಗಳು ಮನಸು ಮಾಡಿದ್ರೆ ಏನೆಲ್ಲ ಸಾಧಿಸಬಹದು ಎನ್ನುವುದಕ್ಕೆ ಸಾಕ್ಷೀಯಾಗಿದ್ದಾಳೆ.  ಹುಟ್ಟಿನಿಂದಲೂ ಸಹ ಜಗವನ್ನೆ ಕಾಣದ ಈಕೆ ಈಗ ತನ್ನ ಸಾಧನೆ ಮುಖೇನ ಈಡಿ ಜಗತ್ತೆ ತನ್ನತ್ತ ನೋಡುವಂತೆ ಮಾಡಿದ್ದಾಳೆ.

International Literacy Day 2020: ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ; ಭಾರತದ ಸಾಕ್ಷರತೆ ಪ್ರಮಾಣ ಶೇ.77.7

ಹೌದು, ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆಯಾಗಿ ಅಪೂರ್ವಾಗೆ 603 ಅಂಕಗಳು ಬಂದರೂ ಸಹ ಅಪೂರ್ಪ ಮನಸ್ಸಿನಲ್ಲಿ ಹುಟ್ಟಿದ ಮತ್ತು ಕಾಡಿದ ಪ್ರಶ್ನೆಗಳಿಂದಾಗಿ ಅಪೂರ್ವ ಮರುಮೌಲ್ಯಮಾಪನದ ಮೊರೆ ಹೋಗಿದ್ದಳು. ಸದ್ಯ ಮರು ಮೌಲ್ಯಮಾಪನವಾಗಿ ಫಲಿತಾಂಶ ಮತ್ತೆ ಅಪೂರ್ವ ಕೈ ಸೇರಿದ್ದು ಕನ್ನಡ-125 ಅಂಕ, ಇಂಗ್ಲಿಷ್​ 96 ಅಂಕ, ಹಿಂದಿ- 98 ಅಂಕ, ಅರ್ಥಶಾಸ್ತ್ರ-100 ಅಂಕ, ರಾಜ್ಯಶಾಸ್ತ್ರ-100 ಅಂಕ, ಸಮಾಜ ವಿಜ್ಞಾನ-98 ಅಂಕಗಳನ್ನು ಗಳಿಸುವುದರ ಮೂಲಕ 625ಕ್ಕೆ 617 ಅಂಕಗಳನ್ನು ಪಡೆದು ರಾಜ್ಯದ ಅಂಧ ವಿದ್ಯಾರ್ಥಿಗಳಲ್ಲೆ ಮೊದಲಿಗಳಾಗಿ ಅಪೂರ್ವ ಅಪೂರ್ವ ಸಾಧನೆ ಮಾಡಿದ್ದಾಳೆ.

ಇನ್ನು ತಮ್ಮ ಮಗಳ ಸಾಧನೆ ಕೊಂಡಾಡಿರುವ ಪೋಷಕರು ಮಗಳ ಐಎಎಸ್ ಕನಸನ್ನು ತಂದೆ ಬಾಹುಬಲಿ ತೆರೆದಿಟ್ಟಿದ್ದಾರೆ. ಸಾಕಷ್ಟು ಕಷ್ಟಗಳು ಬಂದರೂ ಮಗಳಿಗೆ ವಿಧ್ಯಾಭ್ಯಾಸ ಕೊಡಿಸಿದ್ದೇವೆ. ಮಗಳು ಐಎಎಸ್‌ ಆಗುವ ಇಂಗಿತ ತೋರಿದ್ದಾಳೆ. ಈಗಾಗಲೇ ಮಂಗಳೂರಿನ ಕಾಲೇಜಿನಲ್ಲಿ ದಾಖಲಾತಿ ಮಾಡಿಸಿದ್ದೇನೆ. ಎಷ್ಟೆ ಕಷ್ಟ ಆಗಲಿ ಮಗಳಿಗೆ ಐಎಎಸ್‌ ಓದಿಸುತ್ತೇನೆ ಅಂತಾರೆ ತಂದೆ ಬಾಹುಬಲಿ.

ಒಟ್ಟಿನಲ್ಲಿ ಸಾಧನೆ ಮಾಡುವ ಛಲ ಆತ್ಮವಿಶ್ವಾಸವಿದ್ದರೆ  ಏನು ಬೇಕಾದರೂ ಸಹ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಅಪೂರ್ವ ಒಂದು ಸ್ಪಷ್ಟ ನಿದರ್ಶನ ಎಂದರೆ ತಪ್ಪಾಗಲಾರದು. ಕಣ್ಣಿದ್ದವರೇ ಸಾಧಿಸೋಕೆ ಪರದಾಡುವ ಪರಿಸ್ಥಿತಿ ಇರುವ ಈ ಕಾಲದಲ್ಲಿ ವಿಶೇಷ ಚೇತನಳಾದರೂ ಸಹ ಅಪೂರ್ವ ಸಾಧಿಸಿರುವ ಪರಿ ನಿಜಕ್ಕೂ ಅಪೂರ್ವವೇ ಸರಿ.
Published by:Latha CG
First published: