ಬೆಂಗಳೂರು(ಜೂ.06): ಕೊರೋನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ಶಿಕ್ಷಣ ಇಲಾಖೆ, ಗ್ರೇಡಿಂಗ್ ಆಧಾರದ ಮೇಲೆ ಫಲಿತಾಂಶ ನೀಡಲು ನಿರ್ಧರಿಸಿದೆ. ಇದಕ್ಕೆ ಪ್ರಥಮ ಪಿಯುಸಿ ಅಂಕಗಳ ಜೊತೆಗೆ ಎಸ್ಎಸ್ಎಲ್ಸಿ ಮಾರ್ಕ್ಸ್ನ್ನೂ ಪರಿಗಣಿಸಿ ಜೂನ್ ಅಂತ್ಯದಲ್ಲಿ ರಿಸಲ್ಟ್ ನೀಡಲಾಗುತ್ತದೆ. ಇದು ಫ್ರೆಶರ್ಗಳ ವಿಚಾರ. ಆದರೆ ಈಗ ಸೆಕೆಂಡ್ ಪಿಯು ರಿಪೀಟರ್ಸ್ಗೆ ಹೊಸ ಟೆನ್ಶನ್ ಶುರುವಾಗಿದೆ. ಯಾಕೆಂದರೆ ಈಗ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ಪರೀಕ್ಷೆ ನಡೆಸಲು ಮುಂದಾಗಿದೆ.
ಇದು ರಿಪೀಟರ್ಸ್ಗೆ ಹೊಸ ತಲೆನೋವು ಶುರುವಾಗಲು ಕಾರಣವಾಗಿದೆ. ಶಿಕ್ಷಣ ಇಲಾಖೆಯ ನಿರ್ಧಾರದಿಂದ ಫ್ರೆಶರ್ಸ್ಗೊಂದು ನ್ಯಾಯ, ರಿಪೀಟರ್ಸ್ಗೆ ಒಂದು ನ್ಯಾಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶಿಕ್ಷಣ ಇಲಾಖೆ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತೆ ಎನ್ನಲಾಗುತ್ತಿದೆ.
ಕೊರೋನಾ 3ನೇ ಅಲೆ ಆಗಸ್ಟ್ , ಸೆಪ್ಟೆಂಬರ್ ನಲ್ಲಿ ಅಪ್ಪಳಿಸುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ ಡೋಂಟ್ ಕೇರ್ ಎನ್ನುತ್ತಿರುವ ಶಿಕ್ಷಣ ಇಲಾಖೆ ರಿಪೀಟರ್ಸ್ಗೆ ಎಕ್ಸಾಂ ಮಾಡಲು ಮುಂದಾಗಿದೆ. ಇದರ ಜೊತೆಗೆ 93 ಸಾವಿರ ವಿದ್ಯಾರ್ಥಿಗಳ ಜೀವದ ಜೊತೆ ಪಿಯು ಬೋರ್ಡ್ ಚೆಲ್ಲಾಟ ಆಡುತ್ತಿದೆ.
ಇದನ್ನೂ ಓದಿ:Rohini Sindhuri: ಟ್ರಾನ್ಸ್ಫರ್ ಕ್ಯಾನ್ಸಲ್ ಮಾಡುವಂತೆ ರೋಹಿಣಿ ಸಿಂಧೂರಿ ಮನವಿ; ಬಿಲ್ಕುಲ್ ಆಗಲ್ಲ ಎಂದ ಸಿಎಂ
ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆಲ್ಲಾ ಪರೀಕ್ಷೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಸೋಂಕು ಹೆಚ್ಚಾದ್ರೆ ಪರೀಕ್ಷೆ ಹೇಗೆ ನಡೆಸಬೇಕು ಅಂತಲೂ ಪಿಯು ಬೋರ್ಡ್ ಪ್ಲ್ಯಾನ್ ಮಾಡಿಕೊಂಡಿದೆ.
ಹಾಗಿದ್ರೆ, ಪಿಯು ರಿಪೀಟರ್ಸ್ ಪರೀಕ್ಷೆಗೆ ಬೋರ್ಡ್ ಮಾಡಿಕೊಂಡಿರುವ ಪ್ಲ್ಯಾನ್ ಏನು ಅಂತೀರಾ? ಒಂದು ವೇಳೆ ಸೋಂಕು ಹೆಚ್ಚಾದ್ರೆ ಪ್ರಶ್ನೆಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲಾಗುತ್ತದೆ. 100 ಗರಿಷ್ಠ ಅಂಕವನ್ನ 50 ಅಂಕಗಳಿಕೆ ಇಳಿಸಲು ಪ್ಲ್ಯಾನ್ ಮಾಡಲಾಗಿದೆ. 50 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಆ 50 ಅಂಕಗಳನ್ನ ಡಬಲ್ ಮಾಡಿ ಫಲಿತಾಂಶ ನೀಡಲಾಗುತ್ತೆ.
ಸಾಧ್ಯವಾದ್ರೆ 5 ಅಂಕ ಗ್ರೇಸ್ ಮಾರ್ಕ್ಸ್ ನೀಡಲು ಪಿಯು ಬೋರ್ಡ್ ಚಿಂತನೆ ನಡೆಸಿದೆ.
ಈಗಿರುವ 3 ಗಂಟೆಯ ಪರೀಕ್ಷೆಯ ಅವಧಿಯನ್ನು ಕಡಿತ ಮಾಡಲಾಗುತ್ತದೆ. 1 ಗಂಟೆ ಬದಲು 30 ನಿಮಿಷಕ್ಕೆ ಇಳಿಸಲು ಪ್ಲ್ಯಾನ್ ಮಾಡಲಾಗಿದೆ. ಒಂದು ಬೆಂಚಿಗೆ ಒಬ್ಬರಂತೆ, ಒಂದು ಕೊಠಡಿಯಲ್ಲಿ 8-10 ವಿದ್ಯಾರ್ಥಿಗಳ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ:CM BS Yediyurappa: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಖಚಿತ?; ರಾಜೀನಾಮೆಗೆ ಸಿದ್ಧ ಎಂದ ಸಿಎಂ ಯಡಿಯೂರಪ್ಪ!
ಇನ್ನು, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲದ ಕಾರಣ, ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮಾನದಂಡ ಎನ್ನಲಾಗುತ್ತಿದೆ. ಈ ಮೊದಲು ಶೇ.50 ರಷ್ಟು ಪಿಯುಸಿ ಅಂಕ ಹಾಗೂ ಶೇ.50ರಷ್ಟು ಸಿಇಟಿ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಎಕ್ಸಾಂ ನಡೆಯದ ಕಾರಣ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮುಖ್ಯ ಮಾನದಂಡ ಆಗುತ್ತದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ