ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬೆನ್ನಿಗೆ ನಿಂತ ಶ್ರೀಶೈಲ ಜಗದ್ಗುರು: ಶೋಕಾಸ್ ನೋಟಿಸ್​​​ ವಾಪಸ್​​​ ಪಡೆಯುವಂತೆ ಮೋದಿಗೆ ಪತ್ರ

ಯತ್ನಾಳ್​​ರ ಹೇಳಿಕೆ ಬಿಜೆಪಿಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಈಗಾಗಲೇ ಪರಿಹಾರ ವಿಚಾರವಾಗಿ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವ್ಯತಿರಿಕ್ತ ಭಾವನೆ ಉಂಟಾಗಿದೆ. ಈ ನಡುವೆ ಸ್ವಪಕ್ಷೀಯರೇ ಈ ರೀತಿಯಾಗಿ ಹೇಳಿಕೆ ಯತ್ನಾಳ್​​ ನೀಡಿದ್ದರ ಸುತ್ತ ಭಾರೀ ಚರ್ಚೆ ನಡೆದಿತ್ತು.

ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್

  • Share this:
    ಬೆಂಗಳೂರು(ಅ.13): ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​​​ಗೆ ಬಿಜೆಪಿ ಹೈಕಮಾಂಡ್ ನೀಡಿರುವ ಶೋಕಾಸ್ ನೊಟೀಸ್ ವಾಪಸ್ಸು ಪಡೆಯುವಂತೆ ಶ್ರೀಶೈಲ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

    ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕದ ಅರ್ಧ ಭಾಗ ಮುಳುಗಡೆಯಾಗಿತ್ತು. ನೆರೆ ಸಂತ್ರರಿಗೆ ಪರಿಹಾರ ಬಿಡುಗಡೆ ಮಾಡುವಂತೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ​ಧ್ವನಿ ಎತ್ತಿದ್ದರು. ಕರ್ನಾಟಕದ ಜನತೆ ಪರವಾಗಿ ಯತ್ನಾಳ್ ಮಾತಾಡಿದ್ದಾರೆ. ಅದಕ್ಕಾಗಿ ಬಿಜೆಪಿ ಹೈಕಮಾಂಡ್​​ ಶಾಸಕರಿಗೆ ಶೋಕಾಸ್​ ನೋಟಿಸ್​​ ನೀಡಿದೆ. ಯತ್ನಾಳ್ ಬಿಜೆಪಿಯ ದಕ್ಷ ನಾಯಕ. ಇವರ ಧ್ವನಿಗೆ ನಾವೂ ಬೆಂಬಲ ನೀಡಿದ್ದೇವೆ. ಹೀಗಾಗಿ ಕೂಡಲೇ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕು. ಒಂದು ವೇಳೆ ಯತ್ನಾಳ್ ಮಾತಿನಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕೆಂದು ಶ್ರೀಶೈಲ ಜಗದ್ಗುರು ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

    ಈ ಹಿಂದೆ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ರಾಜ್ಯದ 25 ಸಂಸದರು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ಸ್ವಪದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​​ಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

    ಇದು ಪ್ರಜಾತಂತ್ರ ದೇಶ. ಇಲ್ಲಿ ಯಾರೂ ಯಾರಿಗೂ ಭಯಪಡಬಾರದು. ಪ್ರಧಾನಿ ಮೋದಿ ಯಾರನ್ನೂ ಹೆದರಿಸುವವರಲ್ಲ. ಗುಜರಾತ್ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ. ಸಂಸದರು ಮೌನ ವಹಿಸುವುದು ಸರಿಯಲ್ಲ. ಒಬ್ಬರು ಹುಬ್ಬಳ್ಳಿ, ಮತ್ತೊಬ್ಬರು ಬೆಂಗಳೂರು. ಹೀಗೆ ಒಬ್ಬೊಬ್ಬರು ಒಂದೊಂದು ಕಡೆ ಇದ್ದೀರಿ. ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿಗೊಳಿಸಿ," ಎಂದು ಯತ್ನಾಳ್​​ ಆಗ್ರಹಿಸಿದ್ದರು.

    ಇದನ್ನೂ ಓದಿ: ಯತ್ನಾಳ್​ಗೆ ಬಿಜೆಪಿ ನೀಡಿರುವ ಶೋಕಾಸ್ ನೊಟೀಸ್​ ಹಿಂಪಡೆಯುವಂತೆ ಬಿಎಸ್​ವೈ ಗೆ ಮನವಿ ಸಲ್ಲಿಸಿದ ಕೂಡಲ ಸಂಗಮ ಶ್ರೀ

    ಇಂದು ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಅನಂತಕುಮಾರ್​​​ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ. ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನು ಹೇಗೆ ಭೇಟಿ ಮಾಡಿಸುತ್ತಾರೆ? ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ, ಪ್ರಧಾನಿಯವರ ಭೇಟಿಗೆ ಅವಕಾಶ ಕೊಡಿಸಲಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಎಂದು ಒತ್ತಾಯಿಸಿದ್ದರು.

    ಯತ್ನಾಳ್​​ರ ಹೇಳಿಕೆ ಬಿಜೆಪಿಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಈಗಾಗಲೇ ಪರಿಹಾರ ವಿಚಾರವಾಗಿ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವ್ಯತಿರಿಕ್ತ ಭಾವನೆ ಉಂಟಾಗಿದೆ. ಈ ನಡುವೆ ಸ್ವಪಕ್ಷೀಯರೇ ಈ ರೀತಿಯಾಗಿ ಹೇಳಿಕೆ ಯತ್ನಾಳ್​​ ನೀಡಿದ್ದರ ಸುತ್ತ ಭಾರೀ ಚರ್ಚೆ ನಡೆದಿತ್ತು.
    ----------
    First published: