Srirangapatna: ಶ್ರೀರಂಗಪಟ್ಟಣ ಮಸೀದಿ ವಿವಾದಕ್ಕೆ ಮತ್ತೆ ಜೀವ, ಮುಸ್ಲಿಮರಿಂದ ನಾಳೆ ಬೃಹತ್ ಜಾಥಾ

ಮತ್ತೆ ಶ್ರೀರಂಗಪಟ್ಟಣ ಮಸೀದಿ ವಿವಾದ ಭುಗಿಲೆದ್ದಿದೆ. ಈ ಹಿಂದೆ ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ನಡೆಸಿದ್ದವು. ಈಗ ಮುಸ್ಲಿಮರ ಸರದಿ. ವಿವಾದಿತ ಸ್ಥಳ ಶ್ರೀರಂಗಪಟ್ಟಣದಲ್ಲಿ ನಾಳೆ ಟಿಪ್ಪು ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ.

ನಾಳೆ ಮುಸ್ಲಿಮರಿಂದ ಟಿಪ್ಪು ಜಾಥಾ

ನಾಳೆ ಮುಸ್ಲಿಮರಿಂದ ಟಿಪ್ಪು ಜಾಥಾ

  • Share this:
ಮಂಡ್ಯ (ಆಗಸ್ಟ್​ 06): ಮಂಡ್ಯದ ಶ್ರೀರಂಗಪಟ್ಟಣದಲ್ಲಿರೋ (Srirangapatna) ಜಾಮಿಯಾ ಮಸೀದಿ (Masjid) ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಕರ್ನಾಟಕ (Karnataka) ಕಳೆದ ಐದಾರು ತಿಂಗಳಿಂದ ಕೋಮುಗಲಭೆ (Communal violence), ಗಲಾಟೆ, ವಿವಾದಗಳಿಂದ ಸುದ್ದಿಯಾಗ್ತಾನೇ ಇದೆ. ಜನರ ನೆಮ್ಮದಿಯೂ ಹಾಳಾಗಿದೆ. ಈಗ ಕೊಂಚ ತಣ್ಣಗಾಯ್ತು ಅಂತಿರೋವಾಗಲೇ, ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಮತ್ತೆ ಆರಂಭವಾದಂತೆ ಕಾಣುತ್ತಿದೆ. ಶ್ರೀರಂಗಪಟ್ಟಣದಲ್ಲಿರೋದು ಜಾಮಿಯಾ ಮಸೀದಿ ಅಲ್ಲ, ಅದು ಹನುಮಾನ್ ಮಂದಿರ (Hanuman Temple) ಅಂತ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ಬಗ್ಗೆ ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣ ಜಾಥಾ ಕೂಡ ನಡೆಸಿತ್ತು. ಈಗ ಮುಸ್ಲಿಮರು ಕೂಡ ಜಾಥಾಕ್ಕೆ ನಿರ್ಧರಿಸಿದ್ದಾರೆ. ನಾಳೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು (Tipu Sultan) ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ.

ಕಾಶಿಯ ಜ್ಞಾನವಾಪಿ ಮಸೀದಿ ವಿವಾದ ಆರಂಭವಾದ ಬೆನ್ನಲ್ಲೇ ಮಂಡ್ಯದ ಶ್ರೀರಂಗಪಟ್ಟಣ ಮಸೀದಿ ವಿವಾದ ಎದ್ದಿತ್ತು. ಹಿಂದೂ ಸಂಘಟನೆಗಳು ಅದು ದೇವಸ್ಥಾನ ಅಂತಾ ವಾದಿಸಿದ್ರೆ, ಇತ್ತ ಮುಸ್ಲಿಂ ಸಂಘಟನೆಗಳು ಅಲ್ಲಿರೋದು ಮಸೀದಿಯೇ ಅಂತಾ ಹೇಳಿತ್ತು. ಈ ಬಗ್ಗೆ ವಾದ-ವಿವಾದವೂ ನಿಲ್ಲುತ್ತಿಲ್ಲ.

ಮುಸ್ಲಿಮರಿಂದ ನಾಳೆ ಟಿಪ್ಪು ಜಾಥಾ

ಮತ್ತೆ ಶ್ರೀರಂಗಪಟ್ಟಣ ಮಸೀದಿ ವಿವಾದ ಭುಗಿಲೆದ್ದಿದೆ. ಜೂನ್ 4ರಂದು ಹಿಂದೂ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ನಡೆಸಿದ್ದರು. ಈಗ ಮುಸ್ಲಿಮರ ಸರದಿ. ವಿವಾದಿತ ಸ್ಥಳ ಶ್ರೀರಂಗಪಟ್ಟಣದಲ್ಲಿ ನಾಳೆ ಟಿಪ್ಪು ಐತಿಹಾಸಿಕ ಅನಾವರಣ ಜಾಥಾ ನಡೆಯಲಿದೆ. ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Srirangapatna Masjid controversy tomorrow Muslim Rally High alert
ಶ್ರೀರಂಗಪಟ್ಟಣದ ಜಾ ಮಿಯಾ ಮಸೀದಿ


ಎಲ್ಲೆಲ್ಲಿ ನಡೆಯಲಿದೆ ಟಿಪ್ಪು ಜಾಥಾ?

ಟಿಪ್ಪು ಸುಲ್ತಾನ್ ಹಿಂದೂ ವಿರೋಧಿ, ದೇಗುಲಗಳನ್ನು ನಾಶ ಮಾಡಿ ಶ್ರೀರಂಗಪಟ್ಟಣ ಮಸೀದಿಯನ್ನು ನಿರ್ಮಿಸಿದ್ದ ಅಂತಾ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಇದಕ್ಕೆ ಟಕ್ಕರ್ ಎಂಬಂತೆ ನಾಳೆ ಟಿಪ್ಪು ಸುಲ್ತಾನ್ ಸಾಧನೆ, ಯುದ್ಧ, ಇತಿಹಾಸ ಹೇಳುವ ಜಾಥಾ ನಡೆಯಲಿದೆ. ಶ್ರೀರಂಗಪಟ್ಟಣದ ದರಿಯಾ ದೌಲತ್​ನಿಂದ ಗುಂಬಜ್​ವರೆಗೆ ರ್ಯಾಲಿ ನಡೆಯಲಿದೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ; ದೆಹಲಿ ಪ್ರವಾಸ ರದ್ದು

ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ನಾಳೆ ನಡೆಯಲಿರೋ ಟಿಪ್ಪು ಸುಲ್ತಾನ್ ಐತಿಹಾಸಿಕ ಅನಾವರಣ ಜಾಥಾದಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಮುಸ್ಲಿಮರು ಸೇರುವ ಸಾಧ್ಯತೆ ಇದೆ. ಹಾಗಾಗಿ ಶ್ರೀರಂಗಪಟ್ಟಣ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಕರ್ನಾಟಕ ಟಿಪ್ಪು ಸುಲ್ತಾನ್ ಸೌಹಾರ್ದ ವೇದಿಕೆ ಮನವಿ ಮಾಡಿದೆ.

ಶ್ರೀರಂಗಪಟ್ಟಣ ಚಲೋಗೆ ಟಕ್ಕರ್!

ಜಾಮಿಯಾ ಮಸೀದಿ ಇದ್ದ ಸ್ಥಳದಲ್ಲಿ ಮೂಡಲಬಾಗಿಲು ಆಂಜನೇಯ ದೇವಾಲಯವಿತ್ತು ಎಂದು ಆರೋಪಿಸಿರುವ ಹಿಂದೂ ಸಂಘಟನೆ ಮುಖಂಡರು ಜೂ.4ರಂದು ಶ್ರೀರಂಗಪಟ್ಟಣ ಚಲೋ ನಡೆಸಿದ್ದರು. ಇದಕ್ಕೆ ಪೊಲೀಸ್ ಇಲಾಖೆ ತಡೆಯೊಡ್ಡಿತ್ತು. ಈಗ ಅದಕ್ಕೆ ಟಕ್ಕರ್ ಎಂಬಂತೆ ಟಿಪ್ಪು ಜಾಥಾ ನಡೆಸಲಾಗ್ತಿದೆ ಎನ್ನಲಾಗಿದೆ.

ಇದನ್ನೂ ಓದಿ:  ಒಮ್ಮೆ ಮಗು ಬಿಟ್ಟು ಬಂದಿದ್ದಳು, ನಿನ್ನೆ ಮಹಡಿಯಿಂದ ಎಸೆದು ಕೊಂದಳು! ಪಾಪಿ ತಾಯಿಯ ಪಾಪದ ಕೃತ್ಯ ಬೆಳಕಿಗೆ

ಹಿಂದೂಗಳ ಆರೋಪವೇನು?

1659ರಲ್ಲಿ ವಿಜಯನಗರದ ಸಾಮ್ರಾಜ್ಯವಿತ್ತು. ದೊಡ್ಡ ದೇವರಾಜ ಒಡೆಯರ್ ಅವಧಿಯಲ್ಲಿ ದೇವಸ್ಥಾನ ಕಟ್ಟಲಾಗಿದೆ. ಬಾಗಿಲುವೆಂಕಟರಮಣ ದೇವಸ್ಥಾನ ಅಂತಾ ಹೆಸರು ಇತ್ತು. ವೆಂಕಟೇಶ್ವರಸ್ವಾಮಿ, ಆಂಜನೇಯಸ್ವಾಮಿ ಅಲ್ಲಿನ ಮುಖ್ಯ ದೇವರು. 1784ರಲ್ಲಿ ಟಿಪ್ಪು ಈ ದೇವಸ್ಥಾನ ಕೆಡವಿ ಅಲ್ಲಿ ಮಸೀದಿ ಕಟ್ಟಿದ್ದಾನೆ ಎಂದು ಆರೋಪಿಸ್ತಿದೆ.

ಮುಸ್ಲಿಮರ ವಾದವೇನು?

ಶತ್ರುಗಳಿಗೆ ಗೊತ್ತಾಗದಿರಲಿ ಎಂದು ಮಸೀದಿ ರೂಪದಲ್ಲಿ ವಾಚ್ ಟವರ್ ನಿರ್ಮಾಣ ಮಾಡಲಾಗಿತ್ತು. ಟಿಪ್ಪು ದೇವಸ್ಥಾನ ನಾಶ ಮಾಡಲಿಲ್ಲ. ಅಲ್ಲಿದ್ದ ದೇವಸ್ಥಾನವನ್ನು ಸ್ಥಳಾಂತರ ಮಾಡಿದ್ದ. ಶ್ರೀರಂಗಪಟ್ಟಣದ ಕ್ಷಣಾಂಬಿಕಾ ದೇವಿ ದೇಗುಲದ ಆವರಣದೊಳಗೆ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಆಗಿದೆ. ನಾಶ ಮಾಡುವ ಉದ್ದೇಶ ಇದ್ದಿದ್ದರೆ ಮೂರ್ತಿಯನ್ನು ಯಾಕೆ ಸ್ಥಳಾಂತರ ಮಾಡುತ್ತಿದ್ದ ಅನ್ನೋದು ಮುಸ್ಲಿಮರ ವಾದ.
Published by:Thara Kemmara
First published: