• Home
  • »
  • News
  • »
  • state
  • »
  • Srirangapatna | Jamia Masjid: ಹಸಿರು ಬಾವುಟ ಕಿತ್ತ ಪ್ರಕರಣ; ಮುಸ್ಲಿಮರ ಪರವಾಗಿ ಪೊಲೀಸರ ಬೆದರಿಕೆ ಆರೋಪ, ಎಫ್​ಐಆರ್ ದಾಖಲು

Srirangapatna | Jamia Masjid: ಹಸಿರು ಬಾವುಟ ಕಿತ್ತ ಪ್ರಕರಣ; ಮುಸ್ಲಿಮರ ಪರವಾಗಿ ಪೊಲೀಸರ ಬೆದರಿಕೆ ಆರೋಪ, ಎಫ್​ಐಆರ್ ದಾಖಲು

ಠಾಣೆ ಮುಂದೆ ‘ಕೇಸರಿ’ ಪ್ರತಿಭಟನೆ

ಠಾಣೆ ಮುಂದೆ ‘ಕೇಸರಿ’ ಪ್ರತಿಭಟನೆ

ಇನ್ನು ಡಿಸೆಂಬರ್‌ 4ರಂದು ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಬಾಲಕನೊಬ್ಬ ಹಸಿರು ಬಾವುಟ ಕಿತ್ತು ಹಾಕಿ, ಕೇಸರಿ ಬಾವುಟ ಹಾಕಿದ್ದ. ಅಮಾಯಕ ಬಾಲಕನಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.

  • Share this:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (Srirangapatna, Mandya) ಕೋಮು ಸಂಘರ್ಷ (Communal Clash) ಉಂಟಾಗಿದೆ. ಟಿಪ್ಪು ಜಾಮಿಯಾ ಮಸೀದಿಗೆ (Jamia Mosque) ನುಗ್ಗಲು ಹಿಂದೂ ಸಂಘಟನೆಗಳ ಯತ್ನಿಸಿದ್ದರು. ಹಿಂದೂ ಸಂಘಟನೆಗಳ (Hindu Organization) ಮಸೀದಿ ಪ್ರವೇಶವನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತನಿಗೆ (ಬಾಲಕ) (Hindu Activist) ಪೊಲೀಸರು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ್ದ ಪೊಲೀಸರ ವಜಾಕ್ಕೆ ಆಗ್ರಹಿಸಿ, ಹಿಂದೂ ಸಂಘಟನೆ ಕಾರ್ಯಕರ್ತರು ಶ್ರೀರಂಗಪಟ್ಟಣ ಪೊಲೀಸ್‌ ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರತಿಭಟನೆಗೆ ಮಣಿದಿರುವ ಇಲಾಖೆ ಏಳು ಜನರ ವಿರುದ್ಧ ಎಫ್​ಐಆರ್ (FIR Filed) ದಾಖಲಿಸಿದೆ.  


ತಡರಾತ್ರಿ ಏಳು ಪೊಲೀಸರ ವಿರುದ್ಧ FIR ದಾಖಲಾಗಿದೆ. ಉಮೇಶ್, ಪ್ರಕಾಶ್, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.


ಮುಸ್ಲಿಮರ ಪರವಾಗಿ ಬೆದರಿಕೆ ಹಾಕಿರೋ ಆರೋಪ


ಎರಡು ದಿನಗಳ ಹಿಂದೆ ತಡರಾತ್ರಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದ ಈ 7 ಜನ ಪೊಲೀಸರು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ಠಾಣೆಗೆ ಕರೆತಂದಾಗ ಮುಸ್ಲಿಮರ ಪರವಾಗಿ ಬೆದರಿಕೆ ಹಾಕಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.


ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ


ವಿಶ್ವದಲ್ಲಿ 53 ಮುಸ್ಲಿಂ ರಾಷ್ಟ್ರಗಳಿವೆ, ನಿನ್ನ ರುಂಡ ಮುಂಡ ಕತ್ತರಿಸುತ್ತಾರೆಂದು ಪೊಲೀಸರು ಯುವಕನನ್ನು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಬೆದರಿಕೆ ಹಿನ್ನೆಲೆ ಶನಿವಾರ ಬೆಳಗ್ಗಿನಿಂದ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು.


Srirangapatna Jamia Masjid Controversy hindu activist protest fir filed against seven police mrq
ಹಿಂದೂ ಕಾರ್ಯಕರ್ತರ ಪ್ರತಿಭಟನೆ


ಜಾಮಿಯಾ ಮಸೀದಿ ಒಳಗೆ ನುಗ್ಗಲು ಯತ್ನ


ಶನಿವಾರ ರಾತ್ರಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ ಜಾಮಿಯ ಮಸೀದಿ ಬಳಿ ಪ್ರತಿಭಟನಾಕಾರರು ತೆರಳಿದ್ದರು. ಈ ವೇಳೆ ಜಾಮೀಯ ಮಸೀದಿ ಒಳ ನುಗ್ಗಲು ಯತ್ನಿಸಿದ್ದರು. ನಂತರ ಪೊಲೀಸ್ ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ಸಹ ಏರ್ಪಟ್ಟಿತ್ತು. ನಂತರ ಜಾಮೀಯ ಮಸೀದಿ ಬಳಿ ಪ್ರತಿಭಟನೆ ಮುಂದುವರಿಸಲಾಗಿತ್ತು.


ಎಫ್ಐಆರ್ ಬೆನ್ನಲ್ಲೇ ಪ್ರತಿಭಟನೆ ಕೈ ಬಿಟ್ಟ ಕಾರ್ಯಕರ್ತರು


ತಡರಾತ್ರಿ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸ್ ಇಲಾಖೆ 7 ಜನ ಪೊಲೀಸರ ವಿರುದ್ಧ ಎಫ್​ಐಆರ್ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದೆ. ಎಫ್​ಐಆರ್ ದಾಖಲಾದ ಹಿನ್ನೆಲೆ ಹಿಂದುಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟಿದ್ದಾರೆ.


ಇದನ್ನೂ ಓದಿ:  Nippani: ನಿಪ್ಪಾಣಿ ನಗರಸಭೆ ಕಟ್ಟಡದ ಮೇಲಿನ MES ಭಗವಾ ಧ್ವಜ ತೆರವಿಗೆ ಆಗ್ರಹ


ಇನ್ನು ಡಿಸೆಂಬರ್‌ 4ರಂದು ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಬಾಲಕನೊಬ್ಬ ಹಸಿರು ಬಾವುಟ ಕಿತ್ತು ಹಾಕಿ, ಕೇಸರಿ ಬಾವುಟ ಹಾಕಿದ್ದ. ಅಮಾಯಕ ಬಾಲಕನಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ರು.


Srirangapatna Jamia Masjid Controversy hindu activist protest fir filed against seven police mrq
ಹಸಿರು ಬಾವುಟ ತೆಗೆಯುತ್ತಿರೋದು


ದೀವಟಿಗೆ ಸಲಾಂ ತಡೆ


ದೇಗುಲಗಳಲ್ಲಿ ಟಿಪ್ಪು ಸುಲ್ತಾನ ಆರಂಭಿಸಿದ್ದ ದೀವಟಿಗೆ ಸಲಾಂಗೆ ಬ್ರೇಕ್​ ಬಿದ್ದಿದೆ. ಇನ್ಮುಂದೆ ದೀವಟಿಗೆ ಸಲಾಂ ನಡೆಸದಂತೆ ದೇಗುಲಗಳಿಗೆ ರಾಜ್ಯ ಧಾರ್ಮಿಕ ಪರಿಷತ್ ಸುತ್ತೋಲೆ ಹೊರಡಿಸಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಪುತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ದೀವಟಿಗೆ ಸಲಾಂ ನಡೆಯುತ್ತಿತ್ತು.


ರಾಜ್ಯವನ್ನಾಳುವ ರಾಜನ ಪರವಾಗಿ ಸಂಧ್ಯಾಕಾಲದಲ್ಲಿ ಈ ಪೂಜೆ ನೆರವೇರಿಸಲಾಗ್ತಿತ್ತು. ಆದ್ದರಿಂದ ಇನ್ಮುಂದೆ ಮೇಲುಕೋಟೆಯಲ್ಲೂ ಸಲಾಂ ಆರತಿ ಬದಲು ದೀವಟಿಗೆ ನಮಸ್ಕಾರ ಪೂಜೆ  ನಡೆಯುತ್ತೆ. ಸಲಾಂ ಅನ್ನೋ ಪದವನ್ನ ತೆಗೆದು ಹಾಕಲಾಗಿದೆ.


ಇದನ್ನೂ ಓದಿ:  Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ


ಸಲಾಂ ಆರತಿ ಬದಲಾವಣೆ ಆಗಲೇಬೇಕು, ನಮ್ಮ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಮುಖ್ಯ. ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಅದ ಸಲಾಂ ಆರತಿ ಬದಲಾಯಿಸಬೇಕು ಅಂತ ಮಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ರು.

Published by:Mahmadrafik K
First published: