Jamboo Savari 2021: ಈ ಬಾರಿ ಜಂಬೂ ಸವಾರಿ ನೋಡಬೇಕು ಅಂದ್ರೆ ಶ್ರೀರಂಗಪಟ್ಟಣ ದಸರಾಗೆ ಬನ್ನಿ..!

ಮೈಸೂರು ದಸರಾ ದಂತೆಯೆ ಶ್ರೀರಂಗಪಟ್ಟಣದಲ್ಲಿ ಕೂಡ ಅಂಬಾರಿಯನ್ನ ಹೊತ್ತು ಅಭಿಮನ್ಯು ಹೆಜ್ಜೆ ಹಾಕಲಿದೆ. ಶ್ರೀರಂಗಪಟ್ಟಣದ ಬನ್ನಿ ಮಂಟಪದಿಂದ ಹೊರಟು ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಶ್ರೀರಂಗನಾಥ್ ಸ್ವಾಮಿ ದೇವಾಲಯದ ಆವರಣದಲ್ಲಿನ ಶ್ರೀರಂಗ ವೇದಿಕೆಯನ್ನ ತಲುಪಲಿದೆ.

ಶ್ರೀರಂಗಪಟ್ಟಣ ದಸರಾ

ಶ್ರೀರಂಗಪಟ್ಟಣ ದಸರಾ

 • Share this:
  ಮಂಡ್ಯ(ಅ.09): ದಸರಾ(Mysuru Dasara 2021) ಅಂದ್ರೆ ನಮಗೆಲ್ಲಾ ಥಟ್ ಅಂತ ನೆನಪಾಗೋದು ಜಂಬೂ ಸವಾರಿ(Jamboo savari). ಆದ್ರೆ ಕೊರೋನಾ(COVID-19) ಹಿನ್ನೆಲೆ ಕಳೆದ ವರ್ಷದಿಂದ ಮೈಸೂರು ದಸರಾವನ್ನ ಸರಳವಾಗಿ ಆಚರಣೆ ಮಾಡಲಾಗ್ತಿದೆ. ಹೀಗಾಗಿ ನಾಡಿನ ಜನ ಜಂಬೂ ಸವಾರಿಯನ್ನ ಮಿಸ್ ಮಾಡಿಕೊಳ್ಳುವುದರ ಜೊತೆಗೆ ಜಂಬೂ ಸವಾರಿ ನೋಡಲಾಗದೆ ನಿರಾಸೆಗೊಂಡಿದ್ದಾರೆ. ಆದ್ರೆ ಆ ರೀತಿ ಯಾರಾದ್ರೂ ನಿರಾಶರಾಗಿದ್ರೆ ಅಂಥವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.

  ಹೌದು.., ಕೊರೋನಾ ಮಹಾಮಾರಿಯಿಂದ ಕಳೆದ ವರ್ಷದಿಂದ ವಿಶ್ವವಿಖ್ಯಾತ ಮೈಸೂರು ದಸರಾವನ್ನ ಸರಳವಾಗಿ ಆಚರಿಸಲಾಗ್ತಿದೆ. ಹೀಗಾಗಿ ನಾಡಿನ ಜನರು ಜಂಬೂ ಸವಾರಿಯನ್ನ ಮಿಸ್ ಮಾಡಿಕೊಳ್ತಿದ್ದಾರೆ. ಆದ್ರೆ ಈ ಬಾರಿ ಆ ರೀತಿ ಯಾರಾದ್ರೂ ನಿರಾಶರಾಗಿದ್ರೆ ಅಂತವ್ರು ಜಂಬೂ ಸವಾರಿಯನ್ನ ನೋಡಬಹುದಾಗಿದೆ.

  ಶ್ರೀರಂಗಪಟ್ಟಣ ದಸರಾದಲ್ಲಿ ನಡೆಯಲಿದೆ ಜಂಬೂ ಸವಾರಿ

  ಅಕ್ಟೋಬರ್ 9 ರಿಂದ 11ರ ವರೆಗೆ ಶ್ರೀರಂಗಪಟ್ಟಣ ದಸರಾ ನಡೆಯಲಿದೆ. ವಿಶ್ವವಿಖ್ಯಾತ ಮೈಸೂರು ದಸರಾಗೂ ಮೊದಲೆ ಶ್ರೀರಂಗಪಟ್ಟಣದಲ್ಲಿ ದಸರಾ ಮಾಡಲಾಗ್ತಿತ್ತು.‌ ಆದ್ರೆ ಬದಲಾದ ಕಾಲಘಟ್ಟದಲ್ಲಿ ಶ್ರೀರಂಗಪಟ್ಟಣ ದಸರಾ ಮೈಸೂರಿಗೆ ವರ್ಗಾವಣೆಯಾಗಿತ್ತು.  ಆದ್ರೆ ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನ ಮೂರು ದಿನಗಳ ಕಾಲ ಆಚರಣೆ ಮಾಡಲಾಗ್ತಿದೆ. ಹಿಗಾಗಿ ಅಕ್ಟೋಬರ್ 9 ರಂದು ಶ್ರೀರಂಗಪಟ್ಟಣದ ಬನ್ನಿ ಮಂಟಪದ ಬಳಿ ಶ್ರೀರಂಗಪಟ್ಟಣ ದಸರಾಗೆ ಚಾಲನೆ ದೊರೆಯಲಿದೆ.

  ಹೌದು.. ಮೈಸೂರು ದಸರಾದ ಜಂಬೂ ಸವಾರಿಯನ್ನ ಮಿಸ್ ಮಾಡ್ಕೊಳ್ತಿರೋ ಜನ್ರು ಅಕ್ಟೋಬರ್ 9  ರಂದು ಶ್ರೀರಂಗಪಟ್ಟಣಕ್ಕೆ ಆಗಮಿಸಿ ಜಂಬೂ ಸವಾರಿಯನ್ನ ನೋಡಬಹುದಾಗಿದೆ. ಮೈಸೂರು ದಸರಾ ದಂತೆಯೆ ಶ್ರೀರಂಗಪಟ್ಟಣದಲ್ಲಿ ಕೂಡ ಅಂಬಾರಿಯನ್ನ ಹೊತ್ತು ಅಭಿಮನ್ಯು ಹೆಜ್ಜೆ ಹಾಕಲಿದೆ. ಶ್ರೀರಂಗಪಟ್ಟಣದ ಬನ್ನಿ ಮಂಟಪದಿಂದ ಹೊರಟು ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಶ್ರೀರಂಗನಾಥ್ ಸ್ವಾಮಿ ದೇವಾಲಯದ ಆವರಣದಲ್ಲಿನ ಶ್ರೀರಂಗ ವೇದಿಕೆಯನ್ನ ತಲುಪಲಿದೆ.

  ಇದನ್ನೂ ಓದಿ:ಒಂದು ಕಾಲದ ವಿಲನ್ ಈಗ ದಸರಾ ಹೀರೋ..ಅಶ್ವತ್ಥಾಮನ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು ಇಲ್ಲಿವೆ

  ಮೂರು ದಿನಗಳ ಕಾಲ ನಡೆಯಲಿದೆ ಮನರಂಜನಾ ಕಾರ್ಯಕ್ರಮ

  ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 9 ರಿಂದ ಅಕ್ಟೋಬರ್ 11 ರವರೆಗೆ ಶ್ರೀರಂಗಪಟ್ಟಣದ ಶ್ರೀರಂಗವೇದಿಕೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

  ಅಕ್ಟೋಬರ್ 09 ರಂದು ಮಧ್ಯಾಹ್ನ 3:00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ 29 ತಂಡಗಳನ್ನು ಒಳಗೊಂಡ ಜಂಬೂ ಸವಾರಿ ಮೆರವಣಿಗೆ  ನಡೆಯಲಿದೆ. ಮಧ್ಯಾಹ್ನ 3:00 ರಿಂದ 6:30 ರವರೆಗೆ ಸತೀಶ್ ಆರ್ಯನ್ ಮತ್ತು ಪುರುಷೋತ್ತಮ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30 ರಿಂದ 7:00 ರವರೆಗೆ ವೇದಿಕೆ ಕಾರ್ಯಕ್ರಮದ ಉದ್ಘಾಟನೆ ಹಾಗೂ 7:00 ರಿಂದ ರಾತ್ರಿ 11:00 ರವರೆಗೆ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

  ಅ.10 ರಂದು ಬೆಳಗ್ಗೆ 8:00 ರಿಂದ 8:15 ರವರೆಗೆ ನಾಗರಾಜ್ ಮತ್ತು ತಂಡದಿಂದ ದಾಸರ ಪದ, ಬೆಳಿಗ್ಗೆ 8:15 ರಿಂದ 8:30 ರವರೆಗೆ ಶಿವಲಿಂಗಚಾರ್.ವಿ ರವರಿಂದ ದೇವರನಾಮ, ಬೆ. 8:30 ರಿಂದ 8:45 ರವರೆಗೆ ಎಂ.ಸಿ ಸಂತೋಷ್ ಕುಮಾರ್ ರವರಿಂದ ಸ್ಯಾಕ್ಸೋಫೋನ್, ಬೆ. 8:45 ರಿಂದ 9:00 ರವರೆಗೆ ಪ್ರಸನ್ನ ಕುಮಾರ್ ರವರಿಂದ ಸ್ಯಾಕ್ಸೋಫೂನ್, ಬೆ. 9:00 ರಿಂದ 9:15 ರವರೆಗೆ ಉಮಾಮಣಿ ರಮೇಶ್ ಕುಮಾರ್ ರವರಿಂದ ದೇವರನಾಮ ಕಾರ್ಯಕ್ರಮ, ಬೆ.9:15 ರಿಂದ 9:30 ರವರೆಗೆ ಆರ್. ನಾಗರಾಜು ರವರಿಂದ ಸಂಗೀತ ಕಾರ್ಯಕ್ರಮ, ಮ.12:30 ರಿಂದ 2:00 ರವರೆಗೆ  ಕೃಷಿ ಮತ್ತು ರೇಷ್ಮೆ ಇಲಾಖೆಯಿಂದ ರೈತ ದಸರಾ, ಮ.2:00 ರಿಂದ ಮ.3:00 ರವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಹಿಳಾ ದಸರಾ ಹಾಗೂ ಮ.3:00 ರಿಂದ ಸಂ.4:00 ರವೆರೆಗೆ ಪ್ರದೀಪ್ ಕುಮಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಂಡದವರಿಂದ ಕನ್ನಡ ಸಾಹಿತ್ಯ ಕವಿಗೋಷ್ಠಿ ನಡೆಯಲಿದೆ.

  ಅ. 11 ರಂದು ಬೆ. 10:30 ರಿಂದ 10:45 ರವರೆಗೆ ಬಿ.ಆರ್.ಸ್ವಾಮಿ ಮತ್ತು ಪರಮೇಶ್ವರ ಸ್ವಾಮಿ ಮತ್ತು ತಂಡದವರಿಂದ ರಂಗ ಗೀತೆಗಳು, ಬೆ. 10:45 ರಿಂದ 11:00 ರವರೆಗೆ ವಿದುಷಿ ಕೆ.ಎಸ್ ಶೈಲಜಾ ಹೆಬ್ಬಾರ್ ರವರಿಂದ ಭರತನಾಟ್ಯ, ಬೆಳಗ್ಗೆ 11:00 ರಿಂದ 12:30 ರವರೆಗೆ ರೈತ ದಸರಾ, ಬೆಳಗ್ಗೆ 12:30 ರಿಂದ 1:30 ರ ವರೆಗೆ ಮಕ್ಕಳ ದಸರಾ, ಮಧ್ಯಾಹ್ನ 1.30 ರಿಂದ 2:00 ರವರೆಗೆ ಪ್ರತಿಭಾಂಜಲಿ ಡೇವಿಡ್ ರವರಿಂದ ಸುಗಮ ಸಂಗೀತ, 2:00 ರಿಂದ 2:30 ರವರೆಗೆ ಯುವ ದಸರಾ, ಮಧ್ಯಾಹ್ನ 2:30 ರಿಂದ 3:30ರವರೆಗೆ ಡಾ. ಕೃಷ್ಣೇಗೌಡ ಮತ್ತು ತಂಡದವರಿಂದ ಹಾಸ್ಯ ದಸರಾ, ಮಧ್ಯಾಹ್ನ 3:30 ರಿಂದ 4:00  ರವರೆಗೆ ಸಂಗೀತ ವಿದ್ವಾನ್ ರಘು ಆರ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 4:00 ರಿಂದ 5:00 ರವರೆಗೆ ದೀಪಿಕಾ ಶ್ರೀಕಾಂತ್ ರವರಿಂದ ಸಂಗೀತ ಕಾರ್ಯಕ್ರಮ, ಸಂಜೆ 5:00 ರಿಂದ 7:00 ರವರೆಗೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ, ರಾತ್ರಿ  7:00 ರಿಂದ 7.30 ರವರೆಗೆ ಸಮಾರೋಪ ಸಮಾರಂಭ ಹಾಗೂ ಸಂಜೆ 7.30 ರಿಂದ ರಾತ್ರಿ 10:30  ರವರೆಗೆ ಆಶಾ ಭಟ್ , ಮಾನ್ವಿತಾ ಹರೀಶ್, ಅದಿತಿ ಪ್ರಭುದೇವ್ ಹಾಗೂ ಮೇಘನಾ ಗಾವ್ನಂಕರ್ ತಂಡದವರಿಂದ ಫ್ಯಾಷನ್ ಶೋ - ಸ್ಟಾರ್ ನೈಟ್ ಕಾರ್ಯಕ್ರಮ ನಡೆಯಲಿದೆ.

  ಒಟ್ಟಾರೆ, ಕಳೆದ ವರ್ಷ ಬಂಜೂ ಸವಾರಿ ಮಿಸ್ ಮಾಡಿಕೊಂಡತವರು. ಈ ಬಾರಿ ಕೂಡ ಮೈಸೂರು ದಸರಾ ನೋಡಲಾಗ್ತಿಲ್ಲ ಅಂತ ಬೇಸರಗೊಂಡವಂತವ್ರು. ಅಕ್ಟೋಬರ್ 9ಕ್ಕೆ ಶ್ರೀರಂಗಪಟ್ಟಣಕ್ಕೆ ಬಂದ್ರೆ ಗತವೈಭವದ ದಸರಾವನ್ನ ಕಣ್ತುಂಬಿಕೊಳ್ಳಬಹುದಾಗಿದೆ.

  (ವರದಿ - ಸುನೀಲ್ ಗೌಡ)
  Published by:Latha CG
  First published: