ನಾನು ಮತ್ತು ರಮೇಶ್​​ ಜಾರಕಿಹೊಳಿ ಸಹೋದರರಿದ್ದಂತೆ: ಶ್ರೀರಾಮುಲು

ಡಿಸಿಎಂ ಹುದ್ದೆ ಯಾರಿಗೆ ಕೊಡಬೇಕೆನ್ನೋದನ್ನ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳುತ್ತೇನೆ. ಡಿಸಿಎಂ ವಿಚಾರದಲ್ಲಿ  ರಮೇಶ್ ಜಾರಕಿಹೊಳಿ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.  ಅವರು ನನ್ನ ಸಹೋದರನಿದ್ದಂತೆ

ಶ್ರೀರಾಮುಲು-ರಮೇಶ್​ ಜಾರಕಿಹೊಳಿ

ಶ್ರೀರಾಮುಲು-ರಮೇಶ್​ ಜಾರಕಿಹೊಳಿ

  • Share this:
ಕಲಬುರಗಿ(ಜ. 30): ಯಾವುದೇ  ಹೊಸ ಡಿಸಿಎಂ ಸ್ಥಾನ ಇಲ್ಲ ಎನ್ನುವ ಮೂಲಕ  ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ ರಮೇಶ್​ ಜಾರಕಿಹೊಳಿ ಹಾಗೂ ಶ್ರೀರಾಮಲುಗೆ ಸಿಎಂ ಯಡಿಯೂರಪ್ಪ ಶಾಕ್​ ನೀಡಿದ್ದರು. ಈ ಬೆಳವಣಿಗೆ ಹಿನ್ನೆಲೆ ತಮ್ಮ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿರುವ ಶ್ರೀರಾಮುಲು ಈಗ ನಾನು ರಮೇಶ್​ ಅಣ್ಣ ತಮ್ಮರಿದ್ದಂತೆ. ಹೈ ಕಮಾಂಡ್​ ತೀರ್ಮಾನಕ್ಕೆ ಬದ್ಧರಾಗಿದ್ದೇನೆ ಎನ್ನುವ ಮೂಲಕ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಮಾತನಾಡಿದ ಅವರು, ಡಿಸಿಎಂ ಹುದ್ದೆ ಯಾರಿಗೆ ಕೊಡಬೇಕೆನ್ನೋದನ್ನ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳುತ್ತೇನೆ. ಡಿಸಿಎಂ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಮತ್ತು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ನನ್ನ ಸಹೋದರನಿದ್ದಂತೆ ಎಂದರು.

ಇಬ್ಬರು ನಾಯಕರು ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಗೊಂದಲಕ್ಕೆ ಒಳಗಾಗಿ ಪಕ್ಷದ ನಾಯಕರು ಈ ತೀರ್ಮಾನಕ್ಕೆ ಬಂದರೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ. ವಾಲ್ಮೀಕಿ ಸಮಾಜದ ಸ್ವಾಮೀಜಿಗಳು ಮತ್ತು ಸಮಾಜದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ನನ್ನ ಪರ ಅಭಿಯಾನ ನಡೆಸುತ್ತಿದ್ದಾರೆ. ಅವರು ಅಭಿಮಾನದಿಂದ ಅಭಿಯಾನ ನಡೆಸುತ್ತಿರಬಹುದು, ಆದರೆ, ಹೈಕಮಾಂಡ್ ಏನು ನಿರ್ಧಾರ ಅಂತಿಮವಾಗಿದ್ದು,  ಅದಕ್ಕೆ ನಾನು ಬದ್ಧ ಎಂದರು

ಇದನ್ನು ಓದಿ: ರಮೇಶ ಜಾರಕಿಹೊಳಿಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿಯನ್ನೇ ಮುಳುಗಿಸುತ್ತಾರೆ: ಲಖನ್​​

ನಾವು ಯಾವುದೇ ಸ್ಥಾನಮಾನ ಬಯಸಿ ಪಕ್ಷಕ್ಕೆ ಬಂದವರಲ್ಲ, ಪಕ್ಷದ ನಿರ್ಣಯವೇ ಅಂತಿಮ. ಯಾರಿಗೆ ಯಾವ ಹುದ್ದೆ ನೀಡಬೇಕೆನ್ನೋದನ್ನು ಪಕ್ಷ ತೀರ್ಮಾನಿಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ರಮೇಶ್​ ಜಾರಕಿಹೊಳಿ ಕೂಡ ವಾಲ್ಮೀಕಿ ಸಮುದಾಯದ ನಾಯಕರಾಗಿದ್ದು, ಒಂದೇ ಸಮುದಾಯದ ಇಬ್ಬರು ನಾಯಕರು ಒಂದೇ ಸ್ಥಾನಕ್ಕಾಗಿ ಪೈ ಪೋಟಿ ನಡೆಸಿದ್ದರು. ಸರ್ಕಾರ ರಚನೆಗೆ ಪ್ರಮುಖ ಪಾತ್ರವಹಿಸಿದ್ದ ರಮೇಶ್​ಗೆ ಸ್ಥಾನ ನೀಡುವುದಾ ಅಥವಾ ಹುದ್ದೆ ಆಕಾಂಕ್ಷಿಯಾಗಿದ್ದ ಶ್ರೀರಾಮುಲುಗೆ ಸ್ಥಾನ ನೀಡುವುದಾ ಎಂಬ ಗೊಂದಲದಲ್ಲಿ ಪಕ್ಷದ ನಾಯಕರಿದ್ದರು. ಅಲ್ಲದೆ ಈಗಾಗಲೇ ಪಕ್ಷದಲ್ಲಿ ಮೂವರು ಡಿಸಿಎಂಗಳಿದ್ದು, ಇನ್ನು ಹೆಚ್ಚುವರಿಯಾಗಿ ಈ ಹುದ್ದೆ ಸೃಷ್ಟಿಸುವುದು ಸರಿಯಲ್ಲ ಎಂಬ ಮಾತು ಕೂಡ ಹಲವು ನಾಯಕರಿಂದ ಕೇಳಿಬಂದಿತ್ತು.

 
First published: