ಉಪಚುನಾವಣೆಯಲ್ಲಿ ಕೊಟ್ಟ ಕೆಲಸ ನಿಭಾಯಿಸಿದ್ದ ಶ್ರೀರಾಮುಲು ಈಗ ಯಡಿಯೂರಪ್ಪರಿಂದ ದೂರ ದೂರ

ಉಪ ಚುನಾವಣೆಯಲ್ಲಿ ಸಿಎ ಯಡಿಯೂರಪ್ಪ ಹೇಳಿದ ಕ್ಷೇತ್ರಗಳೆಲ್ಲಾ ಶ್ರೀರಾಮುಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿದ್ದರು. ಅಲ್ಲೆಲ್ಲಾ ಪ್ರಚಾರ ನಡೆಸಿ ಎಸ್​ಸಿ-ಎಸ್​ಟಿ ಮತಗಳನ್ನು ಬಿಜೆಪಿ ಪರ ಸೆಳೆಯುವಲ್ಲಿ ಪ್ರಮುಖ ವಹಿಸಿದವರು.

news18
Updated:December 13, 2019, 2:05 PM IST
ಉಪಚುನಾವಣೆಯಲ್ಲಿ ಕೊಟ್ಟ ಕೆಲಸ ನಿಭಾಯಿಸಿದ್ದ ಶ್ರೀರಾಮುಲು ಈಗ ಯಡಿಯೂರಪ್ಪರಿಂದ ದೂರ ದೂರ
ಆರೋಗ್ಯ ಸಚಿವ ಶ್ರೀರಾಮುಲು
  • News18
  • Last Updated: December 13, 2019, 2:05 PM IST
  • Share this:
ಬೆಂಗಳೂರು(ಡಿ. 13): ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿದ್ದ ಬಿ. ಶ್ರೀರಾಮುಲು ಅದೇಕೋ ಮೌನಕ್ಕೆ ಶರಣಾಗಿದ್ದಾರೆ. ಪಕ್ಷದ ವ್ಯವಹಾರಗಳಿಂದ ದೂರವೇ ಉಳಿದಿದ್ಧಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಲೂ ಅಂತ ಕಾಯ್ದುಕೊಳ್ಳುತ್ತಿದ್ದಾರೆ. ನಿನ್ನೆಯ ಸಚಿವ ಸಂಪುಟಕ್ಕೂ ಶ್ರೀರಾಮುಲು ಬಾರದೇ ಗೈರಾಗಿದ್ದರು. ಇವತ್ತು ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಜೊತೆಗಿನ ಸಿಎಂ ಸಭೆಗೂ ಅವರು ಭಾಗಿಯಾಗಿಲ್ಲ. ಇವೆಲ್ಲವೂ ಹಲವು ಅನುಮಾನ ಮತ್ತು ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗುತ್ತಿವೆ.

ಉಪ ಚುನಾವಣೆಯಲ್ಲಿ ಸಿಎ ಯಡಿಯೂರಪ್ಪ ಹೇಳಿದ ಕ್ಷೇತ್ರಗಳೆಲ್ಲಾ ಶ್ರೀರಾಮುಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿದ್ದರು. ಅಲ್ಲೆಲ್ಲಾ ಪ್ರಚಾರ ನಡೆಸಿ ಎಸ್​ಸಿ-ಎಸ್​ಟಿ ಮತಗಳನ್ನು ಬಿಜೆಪಿ ಪರ ಸೆಳೆಯುವಲ್ಲಿ ಪ್ರಮುಖ ವಹಿಸಿದವರು. ಅವರು ಸುತ್ತಿದ ಕ್ಷೇತ್ರಗಳಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ಧಾರೆ. ಕಳೆದ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಬಹುತೇಕ ಗೆಲುವಿನ ಸಮೀಪ ಹೋಗಿ ಆಗಲೇ ತಮ್ಮ ಮಾಸ್ ಅಪೀಲನ್ನು ಸಾಬೀತುಪಡಿಸಿದ್ದ ಶ್ರೀರಾಮುಲು ಈ ಉಪಚುನಾವಣೆಯಲ್ಲಿ ತಮಗಿರುವ ಜನಬೆಂಬಲವನ್ನು ನಿಚ್ಚಳವಾಗಿ ತೋರ್ಪಡಿಸಿದ್ದರು. ಇಷ್ಟೆಲ್ಲಾ ಮಾಡಿದ ಶ್ರೀರಾಮುಲು ಅವರು ಉಪಚುನಾವಣೆಯ ಬಳಿಕ ಯಾಕೆ ಉತ್ಸಾಹ ಕಳೆದುಕೊಂಡರು ಎಂಬುದು ನಿಗೂಢವಾಗಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಜೊತೆ ರಮೇಶ್ ಜಾರಕಿಹೊಳಿ ರಹಸ್ಯ ಮಾತುಕತೆ

ಬಿಜೆಪಿಯ ಕೆಲ ಮೂಲಗಳ ಪ್ರಕಾರ, ಬಿ. ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದ್ದರೆ ಶ್ರೀರಾಮುಲು ಡಿಸಿಎಂ ಆಗುವುದು ಬಹುತೇಕ ಖಚಿತವಿತ್ತು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಬಂಡಾಯ ಶಾಸಕರ ದೆಸೆಯಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗುವಂತಾಗಿದೆ. ಉಪಚುನಾವಣೆಯಲ್ಲಿ ಬಹುತೇಕ ಪಕ್ಷಾಂತರಿಗಳು ಗೆಲುವು ಸಾಧಿಸಿದ್ಧಾರೆ. ರಮೇಶ್ ಜಾರಕಿಹೊಳಿ ಡಿಸಿಎಂ ಆಗುವುದು ನಿಶ್ಚಿತವೆನ್ನಲಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಒಂದೇ ವಾಲ್ಮೀಕಿ ಸಮುದಾಯದವರಾಗಿದ್ಧಾರೆ. ಹೀಗಾಗಿ, ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆಯೇ ಇಲ್ಲ ಎಂಬ ಮಾತು ಬಿಜೆಪಿ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಹೀಗಾಗಿ, ಶ್ರೀರಾಮುಲು ಅವರು ತುಸು ಉತ್ಸಾಹ ಕಳೆದುಕೊಂಡಿದ್ದಾರೆಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: December 13, 2019, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading