ಸ್ಥಳೀಯ ಸಂಸ್ಥೆ ಚುನಾವಣೆಯ ರಂಗೇರಿದ ಪ್ರಚಾರ: ಬದಾಮಿಯಲ್ಲಿ ಶ್ರೀರಾಮುಲು ಭರ್ಜರಿ ಪ್ರಚಾರ


Updated:August 28, 2018, 5:46 PM IST
ಸ್ಥಳೀಯ ಸಂಸ್ಥೆ ಚುನಾವಣೆಯ ರಂಗೇರಿದ ಪ್ರಚಾರ: ಬದಾಮಿಯಲ್ಲಿ  ಶ್ರೀರಾಮುಲು ಭರ್ಜರಿ ಪ್ರಚಾರ

Updated: August 28, 2018, 5:46 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ

ಬಾಗಲಕೋಟೆ(ಆ.28): ಮಾಜಿ ಸಿಎಂ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರದ ಕಾವೇರಿದೆ. ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ- ಕಾಂಗ್ರೆಸ್ ರಾಜ್ಯ ಮುಖಂಡರು ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ. ಬದಾಮಿ ಮತಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಶ್ರೀರಾಮುಲು ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ್ದಾರೆ. ಲೋಕಲ್ ಫೈಟ್ ಪ್ರಚಾರದ ವಿವರ ಇಲ್ಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ರಾಜ್ಯ ಅಷ್ಟೇ ಅಲ್ದೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದ ಕ್ಷೇತ್ರ ವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ ದ್ರೆ, ಪ್ರತಿಸ್ಪರ್ಧಿ ಯಾಗಿ ಬಿಜೆಪಿ ಯ ರಾಮುಲು ಅಖಾಡಕ್ಕೆ ಧುಮುಕಿದ್ರು. ಬಳಿಕ ಸಿದ್ದರಾಮಯ್ಯ ಬಾದಾಮಿ ಯಲ್ಲಿ ಪ್ರಯಾಸದ ಗೆಲುವು ಕಂಡ್ರು.ಇದೀಗ ಶಾಸಕರಾದ ಬಳಿಕ ಸಿದ್ದರಾಮಯ್ಯರಿಗೆ ಲೋಕಲ್ ಫೈಟ್ ಮೊದಲ ಅಗ್ನಿಪರೀಕ್ಷೆ ಯಾಗಿದೆ.ಕಳೆದ ಚುನಾವಣೆ ಸೇಡು ತೀರಿಸಿ ಕೊಳ್ಳಲು ಬಿಜೆಪಿ ಲೋಕಲ್ ಫೈಟ್ ನಲ್ಲಿ ರಣತಂತ್ರ ರೂಪಿಸಿದೆ. ಶ್ರೀರಾಮುಲು ಕೂಡಾ ಗುಳೇದಗುಡ್ಡ,ಕೆರೂರು ಹಾಗೂ ಬಾದಾಮಿಯಲ್ಲೂ ಭರ್ಜರಿ ರೋಡ್ ಶೋ ನಡೆಸಿದ್ರು. ಬಾದಾಮಿ ಕ್ಷೇತ್ರದ ಮೂರು ಸ್ಥಳೀಯ ಸಂಸ್ಥೆ ಯಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ-ಕಾಂಗ್ರೆಸ್ ನೇರ ಪೈಪೋಟಿ ನಡೆಸಿವೆ.ಇದ್ರ ಮಧ್ಯೆ ಜೆಡಿಎಸ್ ಎರಡು ಪಕ್ಷಗಳಿಗೂ ಠಕ್ಕರ್ ಕೊಡಲು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ರೋಡ್ ಶೋ ಬಳಿಕ ಗುಳೇದಗುಡ್ಡ ದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಹರಿಹಾಯ್ದಿದ್ದಾರೆ.

ಇನ್ನು ನಾಳೆ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಾ ಸ್ವಕ್ಷೇತ್ರ ಕ್ಕೆ ಬರುತ್ತಿದ್ದಾರೆ. ಬಾದಾಮಿಯಲ್ಲಿ ನಾಳೆ ಸಿದ್ದರಾಮಯ್ಯ ಅಭ್ಯರ್ಥಿ ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಗೆಲುವಿನ ಕಾರ್ಯತಂತ್ರ ರೂಪಿಸಲಿದ್ದಾರೆ.ಇನ್ನು ಸಿದ್ದರಾಮಯ್ಯ ಕ್ಷೇತ್ರಕ್ಕೆ ಬರೋ ಮುನ್ನವೇ ಬಿಜೆಪಿಯ ಶ್ರೀರಾಮುಲು ಅಬ್ಬರದ ಪ್ರಚಾರ ನಡೆಸಿದ್ದಾರೆ.ಇನ್ನು ಶ್ರೀರಾಮುಲು ರೋಡ್ ಶೋ ಮುಗಿದ ಬಳಿಕ ಗುಳೇದಗುಡ್ಡ ದಲ್ಲಿ ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಪ್ರಚಾರ ನಡೆಸಿದ್ರು.ಸಿದ್ದರಾಮಯ್ಯ ಗೆಲ್ಲಿಸಿದ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲೂ ಕಾಂಗ್ರೆಸ್ ಗೆಲ್ಲಿಸಿ ಸಿದ್ದರಾಮಯ್ಯರ ಕೈ ಬಲಪಡಿಸಿ ಎಂದ್ರು.. ಇನ್ನು ಬಾಗಲಕೋಟೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ , ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತೆ ಅಂಥ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಲ್ ಫೈಟ್ ರಂಗೇರಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ದತ್ತ ಎಲ್ಲರ ಚಿತ್ತ ನೆಟ್ಟಿದೆ.ಆದ್ರೆ ಮತದಾರ ಯಾರ ಕೈ ಹಿಡಿತಾನೆ ಅನ್ನೋದು ಕಾದುನೋಡಬೇಕಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ