ನಾನು ಉಪಮುಖ್ಯಮಂತ್ರಿ ಆಗಲಿಲ್ಲ ಎಂಬ ನೋವು ಜನರಲ್ಲಿದೆ: ಶ್ರೀರಾಮುಲು

ಬೇರೆಯವರ ಪಲ್ಲಕ್ಕಿಗಳನ್ನು ಹೊತ್ತಿದ್ದೇವೆ. ಯಾರ್ಯಾರಿಗೂ ಜೈಕಾರ ಹಾಕಿದ್ದೇವೆ. ದೇವರ ದಯೆಯಿಂದ ನಾವು ನೆಟ್ಟ ಸಸಿ ಈಗ ಫಲ ಕೊಡುವ ಹಂತಕ್ಕೆ ಬಂದಿದೆ ಎಂದು ಮೈಸೂರಿನ ಹುಣಸೂರಿನಲ್ಲಿ ಶ್ರೀರಾಮುಲು ಹೇಳಿದ್ದಾರೆ.

news18
Updated:November 24, 2019, 6:47 PM IST
ನಾನು ಉಪಮುಖ್ಯಮಂತ್ರಿ ಆಗಲಿಲ್ಲ ಎಂಬ ನೋವು ಜನರಲ್ಲಿದೆ: ಶ್ರೀರಾಮುಲು
ಚುನಾವಣಾ ಪ್ರಚಾರದಲ್ಲಿ ಬಿ. ಶ್ರೀರಾಮುಲು
  • News18
  • Last Updated: November 24, 2019, 6:47 PM IST
  • Share this:
ಬೆಂಗಳೂರು(ನ. 24): ಬಿಜೆಪಿ ನಾಯಕ ಹಾಗೂ ಸಚಿವ ಬಿ. ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಸ್ಥಾನದ ಮೇಲೆ ತಮಗಿರುವ ಅಪೇಕ್ಷೆಯನ್ನು ಹೆಚ್ಚೂಕಡಿಮೆ ನೇರವಾಗಿ ತೋರ್ಪಡಿಸಿದ್ದಾರೆ. ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ಶ್ರೀರಾಮುಲು ಅವರು ಡಿಸಿಎಂ ಸ್ಥಾನದ ಯೋಗ ಶೀಘ್ರದಲ್ಲೇ ಪ್ರಾಪ್ತವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನಿಮ್ಮೆಲ್ಲರ ಆಶೀರ್ವಾದದಿಂದ ರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ, ಅದು ಆಗಲಿಲ್ಲವಲ್ಲ ಎಂಬ ನೋವು ಅನೇಕ ಕಡೆ ಇದೆ. ರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ ಅಂತ ಒಬ್ಬ ವೃದ್ಧರು ಹೇಳುತ್ತಿದ್ದರು” ಎಂದು ಶ್ರೀರಾಮುಲು ತಿಳಿಸಿದ್ದಾರೆ.

“…ನೀವ್ಯಾರೂ ಯೋಚನೆ ಮಾಡಬೇಡಿ. ಇಷ್ಟು ವರ್ಷ ಬೇರೆ ಯಾರಾರಿಗೋ ದುಡಿದಿದ್ದೀವಿ. ಬೇರೆಯವರ ಪಲ್ಲಕ್ಕಿಗಳನ್ನು ಹೊತ್ತಿದ್ದೇವೆ. ಬೇರೆಯವರಿಗೆ ಜೈಕಾರ ಹಾಕಿದ್ದೇವೆ. ದೇವರ ದಯೆಯಿಂದ ಇಂದು ಸಸಿಯು ಮರವಾಗಿದ್ದು ಫಲ ಕೊಡುವ ಸಮಯ ಹತ್ತಿರ ಬಂದಿದೆ. ಭಗವಂತ ನಮಗೂ ಅವಕಾಶ ಕೊಡುತ್ತಾನೆ” ಎಂದು ತಾನು ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಗ್ಗೆ ಶ್ರೀರಾಮುಲು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಎಂಟಿಬಿ ದೊಡ್ಡ ಮನುಷ್ಯ ಇರಬಹುದು, ಆದರೆ ಇನ್ನೂ ಸಣ್ಣತನ ಹೋಗಿಲ್ಲ; ಸಿದ್ದರಾಮಯ್ಯ ವಾಗ್ದಾಳಿ

ತಮ್ಮ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಬಗ್ಗೆ ತಮ್ಮ ಸಂಕಲ್ಪವನ್ನು ಶ್ರೀರಾಮುಲು ಪುನರುಚ್ಚರಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ಕುರಿತು ರಚಿಸಲಾಗಿರುವ ನ್ಯಾ| ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗದ ವರದಿ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರ ಹೆಗಲ ಮೇಲೆ ಕೂತು ಜಾರಿಗೊಳಿಸುವುದಾಗಿ ಅವರು ಭರವಸೆ ನೀಡಿದ್ಧಾರೆ.

ಆಯೋಗದ ವರದಿ ಬರಲು ಎರಡು ತಿಂಗಳು ಬೇಕು ಎಂದು ಅಕ್ಟೋಬರ್​ನಲ್ಲಿ ಹೇಳಿದ್ದರು. ಇದಕ್ಕೆ ಇನ್ನೂ 15-20 ದಿನಗಳ ಕಾಲವಿದೆ. ವರದಿ ಬಂದ ಬಳಿಕ ಸಿಎಂ ಜೊತೆ ಕೂತು ಇದನ್ನು ಅನುಷ್ಠಾನಕ್ಕೆ ತರುವ ಕಾರ್ಯ ಮಾಡುತ್ತೇನೆ ಎಂದವರು ಹೇಳಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 24, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading