ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಮಗಳು ರಕ್ಷಿತಾರ ವಿವಾಹ ಇಂದು ಲಲಿತ್ ಸಂಜೀವ್ ರೆಡ್ಡಿ ಅವರೊಂದಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಮದುವೆಗಾಗಿ ಅರಮನೆ ಮೈದಾನದ 40 ಎಕರೆಯಲ್ಲಿ ಹಂಪಿ ವಿರೂಪಾಕ್ಷ ದೇವಾಲಯ ಮಾದರಿಯ ಬೃಹತ್ ಸೆಟ್ ಹಾಕಲಾಗಿದ್ದು, ರಾಜಕಾರಣಿಗಳು, ಸಿನಿಮಾ ನಟ, ನಟಿಯರು ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಳಗ್ಗೆ 10 ಗಂಟೆಗೆ ವಿವಾಹ ಕಾರ್ಯಕ್ರಮಕ್ಕೆ ತೆರಳಿ, ನವ ದಂಪತಿಗಳನ್ನು ಆಶೀರ್ವದಿಸಲಿದ್ದಾರೆ.
ವಧು ರಕ್ಷಿತಾ ಅವರಿಗೆ ಸಾನಿಯಾ ಸರ್ದಾರಿಯಾ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡುತ್ತಿದ್ದಾರೆ. ನಟಿ ದಿಪೀಕಾ ಪಡುಕೋಣೆಗೆ ಮೇಕಪ್ ಮಾಡಿದ ಖ್ಯಾತ ಆರ್ಟಿಸ್ಟ್ಗಳು ರಕ್ಷಿತಾರ ಅಂದವನ್ನು ಹೆಚ್ಚಿಸಲಿದ್ದಾರೆ.
ಉದ್ಯಮಿ ಲಲಿತ್ ಕೈಹಿಡಿಯಲಿದ್ದಾರೆ ರಕ್ಷಿತಾ:
ಶ್ರೀರಾಮುಲು ಮಗಳು ರಕ್ಷಿತಾ ಲಂಡನ್ನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದರು. ರಕ್ಷಿತಾ ಜೊತೆ ಲಲಿತ್ ಕೂಡ ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ ಇಬ್ಬರು ಪರಸ್ಪರ ಪ್ರೀತಿಸಿದ್ದು, ಇವರ ಪ್ರೀತಿಗೆ ಎರಡು ಕಡೆಯ ಮನೆಯವರು ಒಪ್ಪಿಗೆ ನೀಡಿದ್ದರು. ವರ ಲಲಿತ್ ತಂದೆ ರವಿಕುಮಾರ್ ಹೈದ್ರಾಬಾದ್ನಲ್ಲಿ ದೊಡ್ಡ ಉದ್ಯಮಿಯಾಗಿದ್ದಾರೆ.
9 ದಿನಗಳ ಕಾಲ ಅದ್ಧೂರಿ ಮದುವೆ:
ಶ್ರೀರಾಮುಲು ಅವರ ಮಗಳ ಮದುವೆ ಅದ್ದೂರಿಯಾಗಿ ಒಂಭತ್ತು ದಿನಗಳ ಕಾಲ ನಡೆಯಲಿದೆ. ಈಗಾಗಲೇ ಆರತಕ್ಷತೆಗೂ ಮುನ್ನ ಕಳೆದ ಎರಡು ದಿನಗಳಿಂದ ಚಪ್ಪರ ಶಾಸ್ತ್ರ, ಅರಿಶಿನ ಶಾಸ್ತ್ರವನ್ನು ಬಳ್ಳಾರಿಯ ಅವರ ಸ್ವಗೃಹದಲ್ಲಿ ನಡೆದಿವೆ. ಮದುವೆ ಮುಗಿದ ಬಳಿಕವೂ ಕೆಲವು ದಿನಗಳ ಕಾಲ ಮದುವೆ ಶಾಸ್ತ್ರಗಳು ಮುಂದುವರೆಯಲಿವೆ.
ಪ್ರಧಾನಿ, ಶಾ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ:
ಮಗಳ ಮದುವೆಗೆ ಸಚಿವ ಶ್ರೀರಾಮುಲು ಅವರು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಫೆ.10 ರಂದು ದೆಹಲಿಗೆ ತೆರಳಿದ್ದ ಶ್ರೀರಾಮುಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ರಾಜಕೀಯ ನಾಯಕರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಜೊತೆಗೆ ಸಿನಿಮಾ ನಟರು, ಸಮಾಜದ ಗಣ್ಯ ವ್ಯಕ್ತಿಗಳನ್ನು ಮದುವೆಗೆ ಆಹ್ವಾನಿಸಿದ್ದಾರೆ.
ಇನ್ನು ಡಿ. 18 ರಂದು ರಕ್ಷಿತಾ ಮತ್ತು ಲಲಿತ್ ಕುಮಾರ್ ನಿಶ್ಚಿತಾರ್ಥ ಬೆಂಗಳೂರಿನ ತಾಜ್ ಹೊಟೇಲಿನಲ್ಲಿ ನಡೆದಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭಕೋರಿದ್ದರು.
ಇದನ್ನೂ ಓದಿ: ನಾನು ಫಸ್ಟ್ಕ್ಲಾಸ್ ಆಗಿ ಇದ್ದೀನಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪಷ್ಟನೆ
ಇದನ್ನೂ ಓದಿ: ಏನಿದು ಕೊರೊನಾ ವೈರಸ್? ಮಾರಕ ಕಾಯಿಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ