ಡಿಕೆ ಶಿವಕುಮಾರ್​ ತಪ್ಪು ಮಾಡಿಲ್ಲ ಎಂದರೆ ಚಿಂತೆ ಯಾಕೆ; ಶ್ರೀರಾಮುಲು ಪ್ರಶ್ನೆ

ಡಿಕೆ ಶಿವಕುಮಾರ್​ ರಾಜಕಾರಣಿ ಹೊರತಾಗಿ ಒಬ್ಬ ಉದ್ಯಮಿ ಕೂಡ. ಅವರು ಐಟಿ ಅಧಿಕಾರಿಗಳ ದಾಳಿ ವೇಳೆ ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ತಿಳಿದಿದೆ. ಅವರು ಎಲ್ಲೋ ಮಾಡಿದ ತಪ್ಪನ್ನು ರಾಜಕೀಯಕ್ಕೆ ಸಂಬಂಧ ಕಲ್ಪಿಸುತ್ತಿದ್ದಾರೆ. ಅವರ ಮೇಲೆ ಹಗೆತನ ಮಾಡುವ ಅಗತ್ಯ ಇಲ್ಲ.

Seema.R | news18-kannada
Updated:August 30, 2019, 12:28 PM IST
ಡಿಕೆ ಶಿವಕುಮಾರ್​ ತಪ್ಪು ಮಾಡಿಲ್ಲ ಎಂದರೆ ಚಿಂತೆ ಯಾಕೆ; ಶ್ರೀರಾಮುಲು ಪ್ರಶ್ನೆ
ಶ್ರೀರಾಮುಲು-ಡಿಕೆ ಶಿವಕುಮಾರ್​
  • Share this:
ವಿಜಯಪುರ (ಆ.30): ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಡಿಕೆ ಶಿವಕುಮಾರ್​ ತಪ್ಪಿ ಮಾಡಿಲ್ಲ ಎಂದರೇ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಅವರು ಉಪ್ಪು ತಿಂದಿದ್ದರೆ ನೀರು ಕುಡಿಯುತ್ತಾರೆ ಎಂದು ಸಚಿವ ಬಿ ಶ್ರೀರಾಮಲು ಟಾಂಕ್​ ನೀಡಿದ್ದಾರೆ.

ಮಾಧ್ಯಮದ ಎದುರು ಮಾತನಾಡಿದ ಅವರು, ಡಿಕೆ ಶಿವಕುಮಾರ್​ ರಾಜಕಾರಣಿ ಹೊರತಾಗಿ ಒಬ್ಬ ಉದ್ಯಮಿ ಕೂಡ. ಅವರು ಐಟಿ ಅಧಿಕಾರಿಗಳ ದಾಳಿ ವೇಳೆ ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ತಿಳಿದಿದೆ. ಅವರು ಎಲ್ಲೋ ಮಾಡಿದ ತಪ್ಪನ್ನು ರಾಜಕೀಯಕ್ಕೆ ಸಂಬಂಧ ಕಲ್ಪಿಸುತ್ತಿದ್ದಾರೆ. ಅವರ ಮೇಲೆ ಹಗೆತನ ಮಾಡುವ ಅಗತ್ಯ ಇಲ್ಲ. ಈ ಕುರಿತು ತನಿಖೆ ನಡೆಯಲಿ ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂದರು.

ಕಾನೂನುನಿಂದ ತಪ್ಪಿಸಿಕೊಳ್ಳುತ್ತೇವೆ ಎಂಬುದುದು ಸುಳ್ಳು. ಕಾನೂನು ಮುಂದೆ ಎಲ್ಲರೂ ಒಂದೇ. ಅವರು ಮಾಡಿರುವ ಅಕ್ರಮಗಳನ್ನು ನೋಡಿದ್ದೇವೆ. ಗುಜರಾತ್​ ಶಾಸಕರನ್ನು ಕರೆದುಕೊಂಡು ಬಂದು ರೆಸಾರ್ಟ್​ನಲ್ಲಿಟ್ಟುಕೊಂಡಿದನ್ನು ನೋಡಿದ್ದೇವೆ. ಭ್ರಷ್ಟಾಚಾರ, ಹವಾಲಾ ದಂಧೆ, ಅನಧಿಕೃತ ಹಣದ ವ್ಯವಹಾರ ಮಾಡಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಾಗಿದೆ. ಈಗಲೂ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದರು.

ಇದನ್ನು ಓದಿ: ಶಿಕ್ಷಕರ ಹಾಜರಾತಿಗೆ ಯೋಗಿ ಸರ್ಕಾರದಿಂದ ಸೆಲ್ಫಿ ಪದ್ಧತಿ; ಮಹಿಳಾ ಶಿಕ್ಷಕರ ಸುರಕ್ಷತೆ ವಿರುದ್ಧ ಕೂಗು

 

ಇದೇ ವೇಳೆ ಅನರ್ಹ ಶಾಸಕರ ಕುರಿತು ಮಾತನಾಡಿದ ಅವರು, ಬಿಜೆಪಿ ನಂಬಿ ಬಂದವರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರ ಅರ್ಜಿ ಕೋರ್ಟ್​ನಲ್ಲಿದೆ. ಇದಾದ ಬಳಿಕ ಮುಂದಿನ ನಿರ್ಧಾರ ಪಕ್ಷ ಕೈಗೊಳ್ಳಲಿದೆ ಎಂದರು.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ