Anubhava Mantapa: ಯಾವ ಆಧಾರದಲ್ಲಿ ಲಿಂಗಾಯತರು, ಮುಸ್ಲಿಮರು ಅಣ್ತಮ್ಮಂದಿರು ಅಂತಾ ಹೇಳಿದ್ದರಿ? ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಶ್ನೆ

ಬಸವಣ್ಣನವರು ಮುಸ್ಲಿಂ ಮತದಿಂದ ಬಂದು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೋ ಅಥವಾ ಶೈವ ಬ್ರಾಹ್ಮಣ ಸಮಾಜದಿಂದ ಮತದಿಂದ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೋ? ಈ ವಿಚಾರಗಳಿಗೆ ಮೊದಲು ಶ್ರೀ ಬಸವಲಿಂಗ ಪಟ್ಟದ್ದೆವರು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ, ಶ್ರೀ ಸಿದ್ದಲಿಂಗ ಸ್ವಾಮೀಜಿ

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ, ಶ್ರೀ ಸಿದ್ದಲಿಂಗ ಸ್ವಾಮೀಜಿ

  • Share this:
ಲಿಂಗಾಯತ-ಮುಸ್ಲಿಮರು (Lingayats And Muslims) ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀ ಬಸವಲಿಂಗ ಪಟ್ಟದ್ದೆವರು (Sri Basavalinga Pattadevaru) ಹೇಳಿದ್ದರು. ಮೂಲ ಅನುಭವ ಮಂಟಪ (Anubhava Mantapa) ಕುರಿತು ಲಿಂಗಾಯತರು ಹೋರಾಟಕ್ಕಿಳಿದ್ದು ಸರಿಯಲ್ಲ. ಇದು ಲಿಂಗಾಯತರಿಗೆ ಸಂಬಂಧಪಟ್ಟದ್ದು ಅಲ್ಲ ಅಂತಾ ಹೇಳಿಕೆ ನೀಡಿದ್ದರು. ಇದೀಗ ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದ್ದೆವರ ಹೇಳಿಕೆಗೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ (Srirma sena State president Sri siddalinga swamiji) ಆಕ್ರೋಶ ಹೊರ ಹಾಕಿದ್ದಾರೆ. ಯಾವ ಆಧಾರದ ಮೇಲೆ ನೀವು ಲಿಂಗಾಯತರು ಮುಸ್ಲಿಂರು ಅಣ್ಣತಮ್ಮಂದಿರು ಅಂತಾ ಹೇಳಿದ್ದರಿ ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.

ಬಸವಣ್ಣನವರು ಮುಸ್ಲಿಂ ಮತದಿಂದ ಬಂದು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೋ ಅಥವಾ ಶೈವ ಬ್ರಾಹ್ಮಣ ಸಮಾಜದಿಂದ ಮತದಿಂದ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೋ? ಈ ವಿಚಾರಗಳಿಗೆ ಮೊದಲು ಶ್ರೀ ಬಸವಲಿಂಗ ಪಟ್ಟದ್ದೆವರು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಬಸವಕಲ್ಯಾಣದಲ್ಲಿನ ಮೂಲ ಅನುಭವ ಮಂಟಪದ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:  Karnataka: ಕರ್ನಾಟಕದಲ್ಲೂ ಕಟ್ಟಲಾಗಿದ್ಯಾ ದೇವಾಲಯಗಳ ಮೇಲೆ ಮಸೀದಿ? ಹಿಂದೂ ಸಂಘಟನೆಗಳಿಂದ ಪಟ್ಟಿ ಬಿಡುಗಡೆ

ಜೂನ್ 12 ರಂದು ಮಠಾಧೀಶರ ನೇತೃತ್ವದಲ್ಲಿ ಹೋರಾಟ

ಮುಸ್ಲಿಂರು ಮಾಡುವ ಕೃತ್ಯ-ಆಚರಣೆಗಳು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿವೆ. ದಯವೇ ಧರ್ಮದ ಮೂಲವಯ್ಯ.. ದಯೆವಿರಲಿ ಸಕಲ ಪ್ರಾಣಿಗಳಲ್ಲಿ ಅಂತಾ ಬಸವಣ್ಣನವರು ಹೇಳಿದ್ದಾರೆ. ಆದರೆ ಮುಸ್ಲಿಂರು ಎಲ್ಲಾ ಪ್ರಾಣಿಗಳನ್ನ ಕೊಂದಿ ತಿನ್ನುತ್ತಾರೆ, ಮುಸ್ಲಿಂ ಧರ್ಮದಲ್ಲಿ ದಯವೇ ಇಲ್ಲ. ಮೂಲ ಅನುಭವ ಮಂಟಪ ವಿವಾದ ಕುರಿತಂತೆ ಜೂನ್ 12 ರಂದು ಮಠಾಧೀಶರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಏನಿದು ಅನುಭವ ಮಂಟಪ ವಿವಾದ?

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ (Basavakalyana, Bidar) ಹಜರತ್ ಪೀರ್ ಪಾಶಾ ದರ್ಗಾ (Hazarat Peer Pasha Darga Or Peerapasha Bunglow) ಮುನ್ನಲೆಗೆ ಬಂದಿದೆ. ಅನುಭವ ಮಂಟಪದ ವ್ಯಾಪ್ತಿಯಲ್ಲಿಯೇ ಪೀರ್ ಪಾಶಾ ದರ್ಗಾವಿದೆ. ಮೂಲ ಅನುಭವ ಮಂಟಪ (Anubhava Mantapa) ಈ ಪೀರ್ ಪಾಶಾ ದರ್ಗಾದಲ್ಲಿದೆ ಎಂಬ ವಾದ ಚರ್ಚೆಗೆ ಗ್ರಾಸವಾಗಿದೆ. ಈಚರ್ಚೆಗೆ ಪೂರಕ ಅನ್ನುವಂತೆ ಕೆಲ ಫೋಟೋಗಳು ವೈರಲ್ ಆಗಿವೆ.

12ನೇ ಶತಮಾನದಲ್ಲಿ ಬಸವಣ್ಣವರ (Basavanna) ಅನುಭವ ಮಂಟಪ ನಿರ್ಮಾಣ ಮಾಡಿದ್ರು. ತದನಂತರ ಆಡಳಿತಕ್ಕೆ ಬಂದ ನವಾಬರು (Nawab) ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಅನುಮಾನಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ. ಈ ಸಂಬಂಧ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.

ತಜ್ಞರಿಂದ ಪರಿಶೀಲನೆ ಆಗಬೇಕು

ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಕ್ಕೆ ಅರ್ಥವಿದೆ. ಇಲ್ಲ ಅನ್ನೋದರ ಬಗ್ಗೆ ವಿಚಾರ ಮಾಡಬೇಕಾಗುತ್ತದೆ. ಈ ಹಿಂದೆ ಪರುಷ ಕಟ್ಟೆ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಆದ್ರೆ ಅಲ್ಲಿನ ಮುಸ್ಲಿಂ ಆ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ ಅಲ್ಲಿ ಅನುಭವ ಮಂಟಪ ಇತ್ತು ಅನ್ನೋದಿದ್ರೆ ತಜ್ಞರಿಂದ ಪರಿಶೀಲನೆ ಆಗಬೇಕು. ಪುರಾತತ್ವ ಇಲಾಖೆಯಿಂದ ಪರಿಶೀಲನೆ ನಡೆಸಬೇಕು ಎಂದು ಬೆಲ್ದಾಳೆ ಶರಣು ಆಗ್ರಹಿಸಿದ್ದಾರೆ.

ಇದನ್ನೂ ಓದಿ:  Bagalkot: ಮುಸ್ಲಿಂ ಟೋಪಿ ಧರಿಸಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ: 6 ಪೊಲೀಸರು, ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪ ಇತ್ತು ಅನ್ನೋದಾದ್ರೆ, ಅದು ಯಾರ ವಶದಲ್ಲಿದೆ ಅವರ ಮನಸ್ಸು ಒಲಿಸಬೇಕು. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಇತಿಹಾಸ ಉಳಿಸುವಂತ ಕೆಲಸ ಆಗಬೇಕು ಎಂದು ಬೆಲ್ದಾಳೆ ಶರಣರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.
Published by:Mahmadrafik K
First published: