Siddaramaiah: ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಏನ್ ತಪ್ಪು; ಸಿದ್ದರಾಮಯ್ಯ ಪರ ಮುತಾಲಿಕ್ ಬ್ಯಾಟ್

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತ ದೇವರು ಹೇಳಿದ್ದಾನಾ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಅದು ಚರ್ಚೆಯ ವಿಷಯವೇ ಅಲ್ಲ. ನಾನು ಆ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಪ್ರಮೋದ್ ಮುತಾಲಿಕ್

ಸಿದ್ದರಾಮಯ್ಯ ಮತ್ತು ಪ್ರಮೋದ್ ಮುತಾಲಿಕ್

  • Share this:
ಕೊಡಗಿಗೆ (Kodagu) ಭೇಟಿ ನೀಡಿದ್ದ ವೇಳೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ಮಾಂಸಾಹಾರ (Non veg) ಸೇವನೆ ಮಾಡಿ ದೇವಸ್ಥಾನಕ್ಕೆ ತೆರಳಿದ್ದರು ಎಂದು ಬಿಜೆಪಿ (BJP) ಆರೋಪಿಸಿದೆ. ಈ ಸಂಬಂಧ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಕಮಲ ಶಾಸಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್​ ಮುತಾಲಿಕ್ (Srirama sena Founder Pramod Muthalik), ಮಾಂಸ ತಿಂದು ದೇವಸ್ಥಾನಕ್ಕೆ (Temple) ಹೋದ್ರೆ ಏನು ತಪ್ಪು ಎಂದು ಸಿದ್ದರಾಮಯ್ಯ ಅವರ ಬ್ಯಾಟ್ ಬೀಸಿದ್ದಾರೆ.

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತ ದೇವರು ಹೇಳಿದ್ದಾನಾ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಅದು ಚರ್ಚೆಯ ವಿಷಯವೇ ಅಲ್ಲ. ನಾನು ಆ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಅವರಿಗೆ ಮಾತನಾಡಲು ಬೇರೆ ವಿಷಯಗಳೇ ಇಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯನವರನ್ನ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Siddaramaiah ಅಂದು ತಿಂದಿದ್ದು ಕಣಿಲೆ ಅಕ್ಕಿ ರೊಟ್ಟಿ, ಮಾಂಸಾಹಾರ ಅಲ್ಲ: ವೀಣಾ ಅಚ್ಚಯ್ಯ

ಇದು ಚರ್ಚೆಯ ವಿಷಯವೇ ಅಲ್ಲ

ದುರ್ಗಮ್ಮ, ಮಾರೆಮ್ಮ ಮತ್ತಿತರರ ದೇವರುಗಳಿಗೆ ಮಾಂಸವನ್ನೇ ನೈವೇದ್ಯವಾಗಿ ಇಡಲಾಗುತ್ತದೆ. ಹೀಗಿರುವಾಗ ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು ಎಂದು ಮುತಾಲಿಕ್ ಪ್ರಶ್ನೆ ಮಾಡಿದರು. ಇದು ಚರ್ಚೆಯ ವಿಷಯವೇ ಅಲ್ಲ. ಸಿದ್ದರಾಮಯ್ಯರನ್ನು ಎಳೆದು ತರೋಕೆ ಬೇರೆ ವಿಷಯಗಳಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Srirama sena founder Pramod Muthalik support siddaramaiah after bjp Allegation mrq
ಭೋಜನ ಸವಿಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ


ಇದೇ ವೇಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶಕ್ಕೆ ಪ್ರಮೋದ್ ಮುತಾಲಿಕ್  ಆಗ್ರಹಿಸಿದ್ರು. ದುರ್ಗದ ಬೈಲಿಂದ ದಾಜಿಬಾನ್ ಪೇಟೆ ಮೂಲಕ ಹೊರಟ ಪ್ರತಿಭಟನೆ ಭಾಗಿಯಾದರು. ನಂತರ ಗಣೇಶ ಚತುರ್ಥಿ ಆಚರಣೆಯ ಕುರಿತು ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯ್ತು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಅಚರಣೆಗೆ ಪ್ರತಿಭಟನೆ

ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಭಜರಂಗದಳ, ಹಿಂದೂ ಜಾಗರಣ ವೇದಿಕೆ , ಶ್ರೀರಾಮ ಸೇನಾ ಸೇರಿದಂತೆ ವಿವಿಧ ಗಣೇಶೋತ್ಸವ ಮಂಡಳಿಗಳಿಂದ ಪ್ರತಿಭಟನೆ ನಡೆಸಲಾಯ್ತು.

ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದಲ್ಲಿ ಅದರ ಶಾಪ ಸರ್ಕಾರಕ್ಕೆ ತಟ್ಟುತ್ತದೆ. ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಗೆ 2 ಬಾರಿ ನಮಾಜ್​ಗೆ ಅವಕಾಶ ನೀಡಲಾಗಿದೆ. ಆದರೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಸರ್ಕಾರ ಹಾಗೂ ಪಾಲಿಕೆ ಮೀನಮೇಷ ಎಣಿಸುತ್ತಿದೆ.

ಆಚರಣೆಗೆ ಯಾಕೆ ಅವಕಾಶ ನೀಡ್ತಿಲ್ಲ

ಈದ್ಗಾ ಮೈದಾನವೇನೂ ನಿಮ್ಮಪ್ಪನ ಸ್ವತ್ತಲ್ಲ. ಈದ್ಗಾ ಮೈದಾನ ಸಾರ್ವಜನಿಕ ಸ್ವತ್ತು. ಅಲ್ಲಿ  ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ನೀಡ್ತಾರೆ. ಆದ್ರೆ ಗಣೇಶೋತ್ಸವ ಆಚರಣೆಗೆ ಯಾಕೆ ಅವಕಾಶ ನೀಡ್ತಿಲ್ಲ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ:  GT Devegowda: ಪಕ್ಷ ಬಿಡುವ ಮೊದಲೇ ಜಿಟಿಡಿಗೆ ಶಾಕ್ ನೀಡಿದ ಜೆಡಿಎಸ್

ಶೆಟ್ಟರ್ ನಿವಾಸದ ಮುಂದೆ ಪ್ರತಿಭಟನೆ

ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ ಗಣೇಶೋತ್ಸವ ಆಚರಣೆಯನ್ನು ಅಲ್ಲಿಯೇ ಮಾಡುತ್ತೇವೆ. ಇದು ಪಾಲಿಕೆಗೆ ನೀಡುತ್ತಿರುವ ಕೊನೆಯ ಗಡವು. ಈ ಗಡುವು ಮೀರಿದ್ರೆ ನಾವು ಗಣೇಶ ಆಚರಣೆ ಮಾಡೇ ಮಾಡ್ತೀವಿ. ಈ ಸಂಬಂಧ 26 ರಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

Srirama sena founder Pramod Muthalik support siddaramaiah after bjp Allegation mrq
ಪ್ರಮೋದ್ ಮುತಾಲಿಕ್


ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮಾಂಸ ತಿಂದು ನಾಳೆ ದೇವಸ್ಥಾನಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ದೇವಸ್ಥಾನಕ್ಕೆ ಹೋಗುವಂತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯಾವ ಆಹಾರ ತಿಂದು ದೇವಸ್ಥಾನಕ್ಕೆ ಬರಬಹುದು, ಯಾವ ಆಹಾರ ತಿಂದು ಬರಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Published by:Mahmadrafik K
First published: