ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿ ಸಂಸದ ಶ್ರೀನಿವಾದ ಪ್ರಸಾದ್ ಅಳಿಯ

ಚಾಮರಾಜನಗರ, ನಂಜನಗೂಡು ವ್ಯಾಪ್ತಿಯಲ್ಲಿ ತಮ್ಮ ಜನಾಂಗದವರಿಗೆ ಯಾವುದೇ ಸ್ಥಾನಮಾನ ಸಿಗದೇ ಇರುವ ಹಿನ್ನೆಲೆಯಲ್ಲಿ ತಾವು ಒಂದು ಮಂತ್ರಿ ಸ್ಥಾನ ಕೇಳುತ್ತಿರುವುದಾಗಿ ನಂಜನಗೂಡು ಶಾಸಕ ಹರ್ಷವರ್ಧನ್ ವಾದ ಮುಂದಿಟ್ಟಿದ್ಧಾರೆ.

news18
Updated:December 17, 2019, 12:05 PM IST
ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿ ಸಂಸದ ಶ್ರೀನಿವಾದ ಪ್ರಸಾದ್ ಅಳಿಯ
ಹರ್ಷವರ್ಧನ್
  • News18
  • Last Updated: December 17, 2019, 12:05 PM IST
  • Share this:
ಮೈಸೂರು(ಡಿ. 17): ಉಪಚುನಾವಣೆಯಂಥ ಕಟು ಅಗ್ನಿಪರೀಕ್ಷೆ ಜಯಿಸಿದ ಯಡಿಯೂರಪ್ಪಗೆ ಈಗ ಸಂಪುಟ ವಿಸ್ತರಣೆಯದ್ದೇ ದೊಡ್ಡ ತಲೆನೋವಾಗಿದೆ. ಉಪಚುನಾವಣೆಯಲ್ಲಿ ಗೆದ್ದ 11 ‘ಅರ್ಹ’ ಶಾಸಕರನ್ನು ಮಂತ್ರಿ ಮಾಡುವುದರ ಜೊತೆಗೆ ಇನ್ನೂ ನಾಲ್ಕೈದು ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಈ ನಾಲ್ಕೈದು ಸಚಿವ ಸ್ಥಾನಕ್ಕೆ ಕಣ್ಣಿಟ್ಟಿರುವ ಸಂಖ್ಯೆಯೇ ಯಡಿಯೂರಪ್ಪಗೆ ತಲೆನೋವು ತಂದಿರುವುದು. ಚುನಾವಣೆಯಲ್ಲಿ ಸೋತವರಿಂದ ಹಿಡಿದು ಚುನಾವಣಾ ಕಣದಲ್ಲಿಲ್ಲದೇ ಇರುವವರವರೆಗೂ ಸಚಿವಾಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ಈ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ. ಈಗ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರು ಮಂತ್ರಿ ಸ್ಥಾನದ ಅಪೇಕ್ಷೆ ತೋಡಿಕೊಂಡಿದ್ಧಾರೆ.

ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಅವರು ಇಂದು ನ್ಯೂಸ್18 ಕನ್ನಡ ವಾಹಿನಿ ಜೊತೆ ಮಾತನಾಡುತ್ತಾ, ಬಲಗೈ ಸಮುದಾಯದವರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೇಲ್ಮನೆ ಚುನಾವಣೆ: ಸಿ.ಪಿ. ಯೋಗೇಶ್ವರ್​ಗೆ ಬಿಜೆಪಿ ಟಿಕೆಟ್?

“ಯಡಿಯೂರಪ್ಪನವರ ಸಂಪುಟದಲ್ಲಿ ನಮ್ಮ ಬಲಗೈ ದಲಿತ ಸಮುದಾಯಕ್ಕೆ ಸೇರಿದ ಹೆಚ್. ನಾಗೇಶ್ ಅವರಿದ್ದಾರೆ. ಆದರೆ ಅವರು ಪಕ್ಷೇತರ ಸದಸ್ಯರು. ನಮ್ಮ ಪಕ್ಷದಲ್ಲಿ ಬಲಗೈ ಸಮುದಾಯದಿಂದ ನಾನು, ನೆಹರೂ ಓಲೇಕಾರ್ ಮತ್ತು ಎಂ.ಪಿ. ಕುಮಾರಸ್ವಾಮಿ ಅವರಿದ್ದೇವೆ. ನಮ್ಮ ಮೂವರಲ್ಲಿ ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ” ಎಂದು ಹರ್ಷವರ್ಧನ್ ಕೇಳಿಕೊಂಡಿದ್ಧಾರೆ.

ನೆಹರೂ ಓಲೇಕಾರ್ ಅವರು ಹಾವೇರಿ ಜಿಲ್ಲೆಯವರಾದರೆ, ಎಂ.ಪಿ. ಕುಮಾರಸ್ವಾಮಿ ಮೂಡಿಗೆರೆಯ ಬಿಜೆಪಿ ಶಾಸಕರಾಗಿದ್ದಾರೆ. ತಮ್ಮ ಮೂವರಲ್ಲಿ ಯಾರಿಗೇ ಮಂತ್ರಿ ಸ್ಥಾನ ಕೊಟ್ಟರೂ ಪರವಾಗಿಲ್ಲ. ಆದರೆ, ಚಾಮರಾಜನಗರ, ನಂಜನಗೂಡು ವ್ಯಾಪ್ತಿಯಲ್ಲಿ ತಮ್ಮ ಜನಾಂಗದವರಿಗೆ ಯಾವುದೇ ಸ್ಥಾನಮಾನ ಸಿಗದೇ ಇರುವ ಹಿನ್ನೆಲೆಯಲ್ಲಿ ತಾವು ಒಂದು ಮಂತ್ರಿ ಸ್ಥಾನ ಕೇಳುತ್ತಿರುವುದಾಗಿ ನಂಜನಗೂಡು ಶಾಸಕ ಹರ್ಷವರ್ಧನ್ ವಾದ ಮುಂದಿಟ್ಟಿದ್ಧಾರೆ.

ಇದನ್ನೂ ಓದಿ: ಬಿಎಸ್​ವೈ ಸರ್ಕಾರ ಸೇಫ್ ಆದ್ರೂ ಮುಂದುವರೆದ ಆಪರೇಷನ್ ಕಮಲ; ಜೆಡಿಎಸ್ ಪಕ್ಷದ ಮತ್ತಿಬ್ಬರು ಶಾಸಕರು ಬಿಜೆಪಿ ತೆಕ್ಕೆಗೆ?

“ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರಿಗೆ ಕೇಂದ್ರದಲ್ಲಿ ಯಾವುದಾದರೂ ಪದವಿ ಕೊಟ್ಟಿದ್ದರೆ ನಾನು ಮಂತ್ರಿ ಸ್ಥಾನ ಕೇಳುತ್ತಿರಲಿಲ್ಲ. ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗಳು ಬರುತ್ತವೆ. ಇಲ್ಲಿ ಮೀಸಲು ಕ್ಷೇತ್ರಗಳಿವೆ. ನಾವು ಅಲ್ಲಿಗೆ ಹೋದಾಗ ಜನರು ಬೇಸರ ಪಟ್ಟುಕೊಳ್ಳುತ್ತಾರೆ. ನಾವು ಜನರಿಗೆ ಏನು ಉತ್ತರ ಕೊಡುವುದು?” ಎಂದು ಹರ್ಷವರ್ಧನ್ ಕೇಳಿದ್ದಾರೆ.“ಕೆಆರ್ ನಗರದಲ್ಲಿ (ಸ್ಥಳೀಯ ಚುನಾವಣೆ) ಏನಾಯಿತು ಎಂದು ತಮಗೆ ಗೊತ್ತು. ಅಲ್ಲಿ ಒಂದು ದೊಡ್ಡ ಸಮುದಾಯದಲ್ಲಿ ವಿಭಜನೆಯಾಯಿತು. ಗೆದ್ದ ಅಭ್ಯರ್ಥಿಗಳ ಕೈ ಹಿಡಿದದ್ದು ಸಣ್ಣಪುಟ್ಟ ಬಲಗೈ ಸಮುದಾಯದವರೇ. ಹೀಗಾಗಿ, ನಮ್ಮ ಸಮುದಾಯದವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಅನುಕೂಲ” ಎಂದು ಶ್ರೀನಿವಾಸ ಪ್ರಸಾದ್ ಅಳಿಯ ಅಭಿಪ್ರಾಯಪಟ್ಟಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 17, 2019, 12:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading