• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • H D Kumaraswamy: ರಾಮನಗರದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ, ಹುಟ್ಟುಹಬ್ಬದಂದೇ ಎಚ್‌ಡಿಕೆ ಶಕ್ತಿ ಪ್ರದರ್ಶನ!

H D Kumaraswamy: ರಾಮನಗರದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ, ಹುಟ್ಟುಹಬ್ಬದಂದೇ ಎಚ್‌ಡಿಕೆ ಶಕ್ತಿ ಪ್ರದರ್ಶನ!

ಅದ್ಧೂರಿ ಶ್ರೀನಿವಾಸ ಕಲ್ಯಾಣ

ಅದ್ಧೂರಿ ಶ್ರೀನಿವಾಸ ಕಲ್ಯಾಣ

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, ತಿರುಮಲದ 80 ಆಗಮಿಕರು ಕಾರ್ಯಕ್ರಮ ನಡೆಸಿಕೊಟ್ಟರು.

  • Share this:

ರಾಮನಗರ : ಮಾಜಿ ಸಿಎಂ ಕುಮಾರಸ್ವಾಮಿ (H D Kumaraswamy) ಇಂದು 64ನೇ ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದಾರೆ. ಇಂದು ಹುಟ್ಟು ಹಬ್ಬದ ಪ್ರಯುಕ್ತ ರಾಮನಗರದಲ್ಲಿ (Ramanagara) ಬೃಹತ್ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಹೆಚ್ ಡಿ ಕುಮಾರಸ್ವಾಮಿ  ಮೊದಲು ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚರ್ಚ್ ಹಾಗೂ ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಹೆಚ್ ಡಿ ಕೆ ಹೋದಲ್ಲೆಲ್ಲಾ ಅವರ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ರು. 


ಅದ್ದೂರಿ ಶ್ರೀನಿವಾಸ ಕಲ್ಯಾಣ


ಈ ಬಾರಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಪಂಚಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಈ ವೇಳೆ ಅವರ ಹುಟ್ಟು ಹಬ್ಬ ಇರುವ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಿರುಪತಿ ಮಾದರಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು ತಿರುಮಲದ 80 ಆಗಮಿಕರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ.


ದೇವೇಗೌಡರ ಕುಟುಂಬಸ್ಥರು ಭಾಗಿ


ವೇದಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಸೇರಿದಂತೆ ಕುಮಾರಸ್ವಾಮಿ ಕುಟುಂಬಸ್ಥರು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೂ ಮೊದಲು ತಿರುಪತಿಯ ಪದ್ಮಾವತಿ ಶ್ರೀನಿವಾಸ ದೇವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ರು. ಬಳಿಕ ರಾಮನಗರ ಪ್ರಮುಖ ಬೀದಿಗಳಲ್ಲಿ, ಮಂಗಳವಾದ್ಯ, ಕಳಶ, ಕಲಾತಂಡಗಳ ಮೆರವಣಿಗೆಯಿಂದಿಗೆ ವೇದಿಕೆ ಬಳಿಗೆ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಲಾಗಿತ್ತು. ರಾಜಕೀಯ ಮುಖಂಡರು, ಜೆಡಿಎಸ್ ಚುನಾಯಿತ ಜನ ಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನ ಶ್ರೀನಿವಾಸ ಕಲ್ಯಾಣದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದ್ರು.




ಎಲ್ಲರಿಗೂ ಶುಭವಾಗಲಿ ಎಂದು ಪೂಜೆ-ಹೆಚ್​ಡಿಕೆ


ಶ್ರೀನಿವಾಸ ಕಲ್ಯಾಣೋತ್ಸವ ಪೂಜೆ ಪ್ರಾರಂಭಕ್ಕೂ ಮುನ್ನ ಕುಮಾರಸ್ವಾಮಿ ಮಾತನಾಡಿದರು.‌ ಇದು ಪಕ್ಷಾತೀತವಾಗಿ ಮಾಡ್ತಿರುವ ಕಾರ್ಯಕ್ರಮ ಎಲ್ಲರಿಗೂ ಶುಭವಾಗಲಿ ಎಂದು ಪೂಜೆ ಮಾಡಲಾಗ್ತಿದೆ. ಇದು ಒಂದು ಪಕ್ಷದ ಕಾರ್ಯಕ್ರಮ ಅಲ್ಲ,  ಪೂಜೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಚೆನ್ನಮ್ಮ,  ಮಾಜಿ ಸಿಎಂ ಕುಮಾರಸ್ವಾಮಿ, ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ರೇವತಿ ಸೇರಿದಂತೆ ಕುಟುಂಬದ ಸದಸ್ಯರು  ಕುಳಿತಿದ್ದರು.


ರಾಮನಗರದಲ್ಲಿ ಸೃಷ್ಟಿಯಾಯ್ತು ಇತಿಹಾಸ, ಕಾಂಗ್ರೆಸ್ - ಬಿಜೆಪಿಗೆ ನಡುಕ :


ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸುವ ಮೂಲಕ‌ ಕುಮಾರಸ್ವಾಮಿ ಹೊಸ ಅಲೆ ಸೃಷ್ಟಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ - ಬಿಜೆಪಿಗೆ ಕುಮಾರಸ್ವಾಮಿ ಗೆ ಟಕ್ಕರ್ ನೀಡಿದ್ದಾರೆ. ಬೃಹತ್ ವೇದಿಕೆಯಲ್ಲಿ ಧಾರ್ಮಿಕ ಕಾರ್ಯ ನೆರವೇರಿಸಿರುವ ಕುಮಾರಸ್ವಾಮಿ ರಾಮನಗರ ಜನರ ಮನ ಗೆದ್ದಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಈಗಾಗಲೇ ಮೂರು ಗುಂಪುಗಳಿವೆ.‌ ಬಿಜೆಪಿಯಲ್ಲಿಯೂ ಸಹ ಗುಂಪುಗಾರಿಕೆ ಹೆಚ್ಚಾಗಿದೆ.‌ ಆದರೆ ಈಗಾಗಲೇ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗ್ತಾರೆಂಬ ಸುದ್ದಿ ಕೇಳಿಬಂದಿದೆ.


ರಾಮನಗರದಿಂದ ಸ್ಪರ್ಧಿಸ್ತಾರಾ ನಿಖಿಲ್?​


ಈ ವಿಚಾರವಾಗಿ ಸ್ವತಃ ಕುಮಾರಸ್ವಾಮಿ ಸಹ ಸುಳಿವು ನೀಡಿದ್ದಾರೆ. ಇದರ ಮೊದಲ ಪ್ರಯೋಗವೇ ಶ್ರೀನಿವಾಸ ಕಲ್ಯಾಣೋತ್ಸವ. ಆದರೆ ವಿರೋಧ ಪಕ್ಷಗಳಾದ ಕಾಂಗ್ರೆಸ್ - ಬಿಜೆಪಿ ನಾಯಕರು ಮಾತ್ರ ಕಿತ್ತಾಡಿಕೊಂಡು ಕುಳಿತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸಹ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ರಾಮನಗರ ಕ್ಷೇತ್ರದ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿದ್ದು ಈಗ ಅನುಕೂಲ ಆಗ್ತಿದೆ.


H D Kumaraswamy: ಮೊಮ್ಮಗನ ಜೊತೆ ಹೆಚ್​ಡಿಕೆ ಕೇಕ್​ ಕಟಿಂಗ್! ಫ್ಯಾಮಿಲಿ ಜೊತೆ ಬರ್ತ​ಡೇ ಸೆಲೆಬ್ರೇಷನ್​


ಒಟ್ಟಾರೆ ಈ ಬಾರಿಯ ಹುಟ್ಟುಹಬ್ಬವನ್ನು ಹೆಚ್ ಡಿ ಕುಮಾರಸ್ವಾಮಿ ಅದ್ದೂರಿಯಾಗಿ ಆಚರಣೆಗೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಸಾಕ್ಷಿಯಾಗಿದೆ. ಜೊತೆಗೆ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಮೂಲಕ ತಮ್ಮ ಶಕ್ತಿ ಪ್ರದರ್ಶನನ್ನೂ ತೋರಿದಂತೆ ಬಾಸವಾಯ್ತು.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು