HOME » NEWS » State » SRINGERI RAPE FIVE MORE ACCUSED ARRESTED IN CHIKMAGALUR SRINGERI MINOR GIRL RAPE CASE VCTV SCT

Sringeri Rape: ಶೃಂಗೇರಿ ಅಪ್ತಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ 5 ಆರೋಪಿಗಳ ಬಂಧನ

Chikmagalur Rape: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತೆಯ ಮೇಲೆ 5 ತಿಂಗಳಿಂದ 30 ಕಾಮಾಂಧರು ಅತ್ಯಾಚಾರ ಎಸಗಿಸಿದ್ದರು. ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

news18-kannada
Updated:February 10, 2021, 7:38 AM IST
Sringeri Rape: ಶೃಂಗೇರಿ ಅಪ್ತಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ 5 ಆರೋಪಿಗಳ ಬಂಧನ
ಶೃಂಗೇರಿ ಪೊಲೀಸ್ ಠಾಣೆ
  • Share this:
ಚಿಕ್ಕಮಗಳೂರು (ಫೆ. 10): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತೆಯ ಮೇಲೆ 5 ತಿಂಗಳಿಂದ 30 ಕಾಮಾಂಧರು ಅತ್ಯಾಚಾರ ಎಸಗಿಸಿದ್ದರು. ಸದ್ಯ ಹೊಸ ತನಿಖಾ ತಂಡ ಹೈಅಲರ್ಟ್ ಆಗಿದ್ದು, ಮತ್ತೆ ಐವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈವರೆಗೂ ಪ್ರಕರಣದಲ್ಲಿ 13 ಆರೋಪಿಗಳ ಬಂಧನವಾಗಿದ್ದು ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಎಸ್​ಪಿ ಶೃತಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

ತನಿಖೆಯ ಹೆಗಲಿಗೆ ನೊಗ ಕೊಟ್ಟ  ಎಎಸ್​ಪಿ ಶೃತಿ ನೇತೃತ್ವದ ತಂಡ ಮತ್ತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಎಫ್.ಐ.ಆರ್.ನಲ್ಲಿ ಹೆಸರೇ ಇಲ್ಲದ ಪ್ರಕರಣದ ಮುಖ್ಯ ಆರೋಪಿಗಳು ಅರೆಸ್ಟ್​ ಆಗಿರುವುದರಿಂದ ನೊಂದ ಯುವತಿಗೆ ನ್ಯಾಯ ಸಿಗುವ ಭರವಸೆ ಜನರಲ್ಲಿ ಮೂಡಿದ್ದು, ಎಸ್ಪಿ ಅಕ್ಷಯ್ ನಮಗೆ ಸಿಕ್ಕಾಪಟ್ಟೆ ಒತ್ತಡವಿದೆ ಎಂದಿದ್ದಾರೆ. ಇನ್ನು ನಿನ್ನೆ ಬಂಧಿತರಾದ ಐವರು ಶೃಂಗೇರಿ ಯುವಕರೇ ಆಗಿದ್ದಾರೆ. ಎಫ್.ಐ.ಆರ್. ಹೆಸರಿರೋರು ಮಾತ್ರ ಅತ್ಯಾಚಾರ ಮಾಡಿದ್ದು ಅಂದುಕೊಂಡ ಸ್ಥಳೀಯರು ಹಾಗೂ ಪೊಲೀಸರಿಗೆ ಇದರಿಂದ ಶಾಕ್ ಆಗಿದೆ.

ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಎಫ್.ಐ.ಆರ್.ನಲ್ಲಿ ಹೆಸರಿಲ್ಲದವರು ತನಿಖೆಯಿಂದ ಅತಿಥಿಯಾಗುತ್ತಿದ್ದಾರೆ. ಪ್ರಕರಣದ ಬೆನ್ನು ಬಿದ್ದಿರೋ ಕಾಫಿನಾಡ ಖಾಕಿಗಳಿಗೆ ಸಿಕ್ತಿರೋ ಮಾಹಿತಿ ನೋಡಿ ಮಲೆನಾಡೇ ಬಿಚ್ಚಿ ಬೀಳುವಂತಿದೆ. ಪ್ರಕರಣದ ಪ್ರಮುಖ ಕೇಂದ್ರಬಿಂದು ಬಾಲಕಿ ಚಿಕ್ಕಮ್ಮ ಕೂಡ ಅರೆಸ್ಟ್ ಆಗಿದ್ದು, ಹೊಸ-ಹೊಸ ಹೆಸರಿನ ಆರೋಪಿಗಳನ್ನ ಬಂಧಿಸಿ ಕೆದುಕೊಂಡು ಹೋಗುತ್ತಿರುವ ಖಾಕಿಗಳು ವಿಚಾರಣೆ ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೆಷ್ಟು ಜನ ಆ ಬಾಲಕಿ ಮೇಲೆರಗಿದ್ದಾರೋ ಅನ್ನೋ ಅನುಮಾನ ಖಾಕಿಗಳನ್ನೂ ಕಾಡ್ತಿದೆ. ಪ್ರಕರಣ ಇಷ್ಟೆಲ್ಲಾ ತಿರುವು ಪಡೆದುಕೊಂಡಿದ್ದು ಪೊಲೀಸರಿಗೆ ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಿ ಅಂತ ಒತ್ತಡವಿದೆ ಎಂಬುದನ್ನು ಎಸ್ಪಿಯೇ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Sringeri: ಕಾಮುಕರ ಅಟ್ಟಹಾಸಕ್ಕೆ ನಲುಗಿದ ಶೃಂಗೇರಿಯ ಅಪ್ರಾಪ್ತೆ; ಅತ್ಯಾಚಾರದ ವಿರುದ್ಧ ಮಲೆನಾಡಲ್ಲಿ ಆಕ್ರೋಶ

ಒಟ್ಟಾರೆ, ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದವರು ನಾನಾ ರೀತಿ ಖಾಕಿಗಳ ಅತಿಥಿಯಾಗುತ್ತಿದ್ದಾರೆ. ಇಷ್ಟು ದಿನ ಕೇಳದ ಹೆಸರೆಲ್ಲಾ ಈಗ ಕೇಳಿ ಬರ್ತಿರೋದ್ರ ಜೊತೆ ಬಂಧನ ಆಗುತ್ತಿದ್ದು, ನಿಜಕ್ಕೂ ಮೂವತ್ತೇ ಜನನಾ ಅಥವಾ ಅದಕ್ಕೂ ಹೆಚ್ಚಾ ಎಂಬ ಅನುಮಾನ ಕಾಫಿನಾಡ ಖಾಕಿಗಳಿಗೆ ದಟ್ಟವಾಗಿ ಕಾಡ್ತಿದೆ. ನಾಲ್ಕೈದೇ ದಿನಕ್ಕೆ ಪ್ರಕರಣ ಈ ರೀತಿ ಬದಲಾಗಿದ್ದು ಪೊಲೀಸರ ತನಿಖೆಯಿಂದಷ್ಟೆ ಅನ್ನೋದಂತು ಸತ್ಯ. ಈ ತನಿಖೆ ಹೀಗೆ ಇರಲಿ, ಆ ಬಾಲಕಿಗೆ ನ್ಯಾಯ ಸಿಗಲಿ ಅನ್ನೋದು ಜಿಲ್ಲೆಯ ಜನರ ಆಶಯ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತೆಯ ಮೇಲೆ 5 ತಿಂಗಳಿಂದ 30 ಕಾಮಾಂಧರು ಅತ್ಯಾಚಾರ ಎಸಗಿಸಿದ್ದರು. ಸದ್ಯ ಹೊಸ ತಂಡ ತನಿಖಾ ಹೈಅಲರ್ಟ್ ಆಗಿದ್ದು ಮತ್ತೆ ಐವರು ಆರೋಪಿಗಳು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈವರೆಗೂ ಪ್ರಕರಣದಲ್ಲಿ 13 ಆರೋಪಿಗಳ ಬಂಧನವಾಗಿದ್ದು ಇನ್ನಷ್ಟು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ವರದಿ: ವೀರೇಶ್ ಹೆಚ್ ಜಿ)
Published by: Sushma Chakre
First published: February 10, 2021, 7:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories