HOME » NEWS » State » SRINGERI RAPE 15 YEAR OLD GIRL RAPED BY 30 PEOPLE IN CHIKMAGALUR SRINGERI SHOCKING NEWS VCTV SCT

Sringeri: ಕಾಮುಕರ ಅಟ್ಟಹಾಸಕ್ಕೆ ನಲುಗಿದ ಶೃಂಗೇರಿಯ ಅಪ್ರಾಪ್ತೆ; ಅತ್ಯಾಚಾರದ ವಿರುದ್ಧ ಮಲೆನಾಡಲ್ಲಿ ಆಕ್ರೋಶ

Sringeri Rape: ಶಾರದಾಂಬೆ ನೆಲೆಸಿರೋ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ 30 ಜನ ಕಾಮಾಂಧರು 2020ರ ಸೆಪ್ಟೆಂಬರ್​ನಿಂದ 15 ವರ್ಷದ ಅಪ್ರಾಪ್ತ ಯುವತಿ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಈ ನೀಚಕೃತ್ಯಕ್ಕೆ ಮಲೆನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

news18-kannada
Updated:February 2, 2021, 8:25 AM IST
Sringeri: ಕಾಮುಕರ ಅಟ್ಟಹಾಸಕ್ಕೆ ನಲುಗಿದ ಶೃಂಗೇರಿಯ ಅಪ್ರಾಪ್ತೆ; ಅತ್ಯಾಚಾರದ ವಿರುದ್ಧ ಮಲೆನಾಡಲ್ಲಿ ಆಕ್ರೋಶ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು (ಫೆ. 2): ಬಿಹಾರದಲ್ಲೋ ಪಶ್ಚಿಮ ಬಂಗಾಳದಲ್ಲೋ ಉತ್ತರ ಪ್ರದೇಶದಲ್ಲೋ ಹೆಣ್ಣಿನ ಮೇಲೆ ಅತ್ಯಾಚಾರವಾದಾಗ ಆ ಕಿರಾತಕರನ್ನು ನೇಣಿಗೇರಿಸಬೇಕು, ಗುಂಡು ಹೊಡಿಯಬೇಕು ಎಂದು ಆಕ್ರೋಶ ಭರಿತರಾಗುತ್ತಿದ್ದೆವು. ಆದರೀಗ ಅಂತಹ ನೀಚ ಕೃತ್ಯಕ್ಕೆ ಕಾಫಿನಾಡು ಚಿಕ್ಕಮಗಳೂರು ಕೂಡ ಸಾಕ್ಷಿಯಾಗಿದೆ. ಒಬ್ಬಿಬ್ಬರಿಂದಲ್ಲ. ಬರೋಬ್ಬರಿ 30ಕ್ಕೂ ಹೆಚ್ಚು ಕಾಮಾಂಧರ ಅಟ್ಟಹಾಸಕ್ಕೆ ಅಪ್ರಾಪ್ತ ಬಾಲಕಿಯೊಬ್ಬಳು ನಲಿದ್ದಾಳೆ. 5 ತಿಂಗಳಿಂದ ನಿರಂತರ ಅತ್ಯಾಚಾರಕ್ಕೊಳಗಾಗಿ ಆಕೆ ನರಳಿದ್ದು, ಸದ್ಯಕ್ಕೆ ಆ ಅಪ್ರಾಪ್ತೆಯನ್ನ ರಕ್ಷಿಸಲಾಗಿದ್ದು, ಆ ಕಾಮಪಿಶಾಚಿಗಳಿಗೆ ಸಾಲಲ್ಲಿ ನಿಲ್ಲಿಸಿ ಗುಂಡು ಹೊಡಿಯಬೇಕು ಅಂತಿದ್ದಾರೆ ಮಲೆನಾಡಿಗರು.

ಆಕೆ 15 ವರ್ಷದ ಅಪ್ರಾಪ್ತ ಯುವತಿ. 30 ಜನ ಕಾಮಾಂಧರು. 2020 ಸೆಪ್ಟೆಂಬರ್​ನಿಂದ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದರು. ನಂಬೋಕೆ ಅಸಾಧ್ಯವಾದರೂ ಇದು ನಡೆದ ಘಟನೆ. ಅದೂ ಸಾಕ್ಷಾತ್ ಶಾರದಾಂಬೆ ನೆಲೆಸಿರೋ  ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ. ಶೃಂಗೇರಿಯ ಗ್ರಾಮವೊಂದರಲ್ಲಿ ಕಾಮಪಿಪಾಸುಗಳ ಕೈಗೆ ಸಿಕ್ಕ 15 ವರ್ಷದ ಬಾಲಕಿಯ ಮೇಲೆ 30 ಕಾಮಾಂಧರು 5 ತಿಂಗಳಿಂದ ಅತ್ಯಾಚಾರ ಎಸಗಿದ್ದಾರೆ. ಅಪ್ರಾಪ್ತೆ ಅನ್ನೋದನ್ನೂ ನೋಡದೆ ತಮ್ಮ ಕಾಮದಾಹ ನೀಗಿಸಿಕೊಂಡಿದ್ದಾರೆ.

ಯೋಗೀಶ್ ಹಾಗೂ ಅಭಿ ಎಂಬ ದುರುಳರು ಅಪ್ರಾಪ್ತೆಯನ್ನ ಅತ್ಯಾಚಾರಗೈದು ವಿಡಿಯೋ ಮಾಡಿಟ್ಟುಕೊಂಡಿದ್ದರು. ಅದೇ ವಿಡಿಯೋ ಬಳಸಿಕೊಂಡು ಆಗಾಗ ಬಳಸಿಕೊಳ್ಳುತ್ತಿದ್ದರು. ತಮ್ಮ ದಾಹ ತೀರಿದ ಬಳಿಕ ಪರಿಚಿತರು, ಸ್ನೇಹಿತರನ್ನ ಕರೆದುಕೊಂಡು ಹೋಗುತ್ತಿದ್ದರು. ಬಾಲಕಿ ವಿರೋಧಿಸಿದ್ರೆ ವಿಡಿಯೋ ಹರಿಬಿಡುವುದಾಗ ಬೆದರಿಸುತ್ತಿದ್ದರು. ಕಾಮಪಾಪಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಾಲಕಿಯನ್ನ ಬರೋಬ್ಬರಿ 30ಕ್ಕೂ ಹೆಚ್ಚು ಕಾಮಹುಚ್ಚರು ಅತ್ಯಾಚಾರಗೈದಿದ್ದಾರೆ. ಸದ್ಯ 17 ಮಂದಿ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, 8 ಜನರನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೇಗೂರು ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ

ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದ 10ನೇ ತರಗತಿ ಓದುತ್ತಿದ್ದ ಬಾಲಕಿಯ ತಾಯಿ ತೀರಿಕೊಂಡ ಬಳಿಕ ಚಿಕ್ಕಮ್ಮ ಅಂತ ಹೇಳಿಕೊಳ್ಳುತ್ತಿದ್ದ ಶೃಂಗೇರಿಯ ಗೀತಾ ಎಂಬ ಸಂಬಂಧಿಯ ಮನೆಯಲ್ಲಿ ವಾಸವಿದ್ದಳು. ಆದರೆ, ಈ ಮಗಳ ಸುಂದರ ಬದುಕಿಗೆ ಹೆಗಲು ಕೊಡಬೇಕಿದ್ದ ಗೀತಾ ದುರುಳರ ಜೊತೆಗೂಡಿ ಮಗಳನ್ನೇ ತಲೆಹಿಡಿಯೋ ಕೆಲಸಕ್ಕೆ ಕೈಹಾಕಿದಳು. ಈಕೆಯಷ್ಟೆ ಅಲ್ಲ, ಈಕೆ ಕೆಲಸ ಮಾಡುತ್ತಿದ್ದ ಕ್ರಷರ್ ಮಾಲೀಕ ಅತ್ಯಾಚಾರಗೈಯಲು ಸ್ಥಳ ಸೇರಿದಂತೆ ಸಹಕಾರ ನೀಡಿದ್ದಾನೆಂದು ಆತನ ಮೇಲೂ ಎಫ್‍ಐಆರ್ ದಾಖಲಾಗಿದೆ. ಅಭಿ, ಗಿರೀಶ್, ವಿಕಾಸ್, ಮಣಿಕಂಠ, ಸಂಪತ್, ಅಶ್ವಥ್, ರಾಜೇಶ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಯನ್, ಯೋಗೇಶ್ ಸೇರಿದಂತೆ ಬಾಲಕಿ ಸಂಬಂಧಿ ಮಹಿಳೆ ಗೀತಾ ಮೇಲೂ ಕೇಸ್ ದಾಖಲಾಗಿದೆ. ಇದೀಗ ಈ ಪ್ರಕರಣ ಚಿಕ್ಕಮಗಳೂರು ಜಿಲ್ಲಾದ್ಯಂತ ಸಂಚಲನ ಮೂಡಿಸಿದ್ದು, ಆ ಕಾಮಾಂಧ ಕೀಚಕರಿಗೆ ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿ ಗುಂಡು ಹೊಡೆದು ಸಾಯಿಸಬೇಕು ಅಂತಿದ್ದಾರೆ ಸ್ಥಳೀಯರು.

ಬಾಲಕಿಯನ್ನು ಮಿಸ್​ ಯೂಸ್ ಮಾಡಿಕೊಳ್ಳುವುದರ ಬಗ್ಗೆ ಸ್ಥಳೀಯರು ಬಾಲಕಿಯ ರಕ್ಷಣೆ ಮಾಡುವಂತೆ ಪೊಲೀಸರ ಮೊರೆಹೋದಾಗ ಶೃಂಗೇರಿ ಪೊಲೀಸರು ಸಂತ್ರಸ್ಥ ಬಾಲಕಿಯನ್ನ ಸಾಂತ್ವನ ಕೇಂದ್ರದಲ್ಲಿರಿಸಿ ಆಶ್ರಯ ಕಲ್ಪಿಸಿದ್ದಾರೆ. ಈ ವೇಳೆ ಕೌನ್ಸಿಲಿಂಗ್ ಮಾಡಿದ್ದಾಗ ವಿಷಯ ಬಹಿರಂಗವಾಗಿದ್ದು ಬಾಲಕಿ ಸದ್ಯ ಪೊಲೀಸರು ಹಾಗೂ ನ್ಯಾಯಾಧೀಶರ ಮುಂದೆ ಅತ್ಯಾಚಾರ ಎಸಗಿರೋ ಬಗ್ಗೆ ಸಂಪೂರ್ಣ ಹೇಳಿಕೆ ನೀಡಿದ್ದಾಳೆ.
ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಬಾಲಕಿ ಮೇಲೆ ಅಟ್ಟಹಾಸಗೈದ ಪಾಪಿಗಳು ಎಸ್ಕೇಪ್ ಆಗಿದ್ದಾರೆ. ಪರಾರಿಯಾದವರಲ್ಲಿ ಹಲವರು ರಾಜಕೀಯ ಪಕ್ಷ ಹಾಗೂ ಸಂಘಟನೆಗಳಲ್ಲಿ ತೊಡಗಿದ್ದಾರೆಂದು ಹೇಳಲಾಗುತ್ತಿದೆ. ಯಾರೇ ಆಗಲಿ. ಪೊಲೀಸರು ಆ ಕಾಮಾಂಧ ಕೀಚಕರನ್ನ ಹಿಡಿದು ಘೋರ ಶಿಕ್ಷೆಗೆ ಒಳಪಡಿಸಬೇಕು ಅನ್ನೋದು ಜಿಲ್ಲೆಯ ಜನರ ಆಗ್ರಹ.
Published by: Sushma Chakre
First published: February 2, 2021, 8:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories