ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಅಗ್ನಿವೀರ್ (Agniveer). ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ದೇಶ ಸೇವೆ ಮಾಡುವ ಅಪರೂಪದ ಅವಕಾಶ. ಅಗ್ನಿಪಥ್ ಸ್ಕೀಂನ ಮೊದಲ ಅಗ್ನಿವೀರ್ ಮಹಿಳಾ ಬ್ಯಾಚ್ಗೆ (Women's Batch) ಬೆಂಗಳೂರಿನ (Bengaluru) ನೀಲಸಂದ್ರದ ಮಿಲಿಟರಿ ಕ್ಯಾಂಪಸ್ನಲ್ಲಿ (Military Campus) ಟ್ರೈನಿಂಗ್ ಶುರುವಾಗಿದೆ. ಮಹಿಳಾ ದಿನದ ವಿಶೇಷವಾಗಿ ನಾವು ಒಬ್ಬರು ಹೆಮ್ಮೆಯ ಕನ್ನಡಿತಿ ಪರಿಚಯ ಇಲ್ಲಿದೆ ಓದಿ. ದೇಶದಲ್ಲಿ 100 ಮಂದಿ ಮಹಿಳೆಯರು ಆಯ್ಕೆಯಾಗಿದರೆ, ಕರ್ನಾಟಕದಿಂದ (Karnataka) ಒಬ್ಬರೇ ಒಬ್ಬರು ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆ (Udupi) ಕುಂದಾಪುರದ (Kundapura) ಶ್ರೀದೇವಿ ಕನ್ನಡಿಗರ ಹೆಮ್ಮೆಯಾಗಿ ಹೊರ ಹೊಮ್ಮಿದ್ದಾರೆ.
ಅಗ್ನಿವೀರ್ ಮಹಿಳಾ ಬ್ಯಾಚ್ಗೆ ಟ್ರೈನಿಂಗ್ ಶುರು
ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಮಹಿಳಾ ಅಗ್ನಿವೀರ್ ಶ್ರೀದೇವಿ, ನಾನು ಸೇನೆ ಸೇರಬೇಕು ಅಂತಲೇ ಟ್ರೈ ಮಾಡುತ್ತಿದ್ದೆ. ಕನಿಷ್ಠ ಯಾವುದಾದರೂ ಆಫೀಸ್ ಕೆಲಸಕ್ಕೆ ಆದರೂ ಸೇರಬೇಕು ಎಂಬುವುದು ನನ್ನ ಆಸೆಯಾಗಿತ್ತು. ಇದಕ್ಕೆ ಅಂತಲೇ ಕೋಚಿಂಗ್ ತೆಗೆದುಕೊಳ್ಳಲು ಅಂತ ಮುಂದಾಗಿದ್ದೆ. ಈ ನಡುವೆ ಅಗ್ನಿಪಥ್ ಯೋಜನೆಯ ಅಡಿ ಮಹಿಳಾ ತಂಡದ ಅಡಿ ಅರ್ಜಿಗಳನ್ನು ಕರೆದಾಗ ಕರ್ನಾಟಕದಿಂದ ನಾನು ಏಕೈಕ ಮಹಿಳಾ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ.
ಸದ್ಯ ಇಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದು, ಇಡೀ ದೇಶದಾದ್ಯಂತ 2.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿತ್ತು. ಸೇನಾ ತರಬೇತಿ ಎಂದರೆ ಕಷ್ಟ ಇರುತ್ತೆ, ಅದರಂತೆ ನಮ್ಮ ತರಬೇತಿ ಕೂಡ ಕಠಿಣವಾಗಿದೆ. ಆದರೆ ನಮಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಏಕೆಂದರೆ ನಮಗೆ ಗೊತ್ತಿಲ್ಲ ಎಂದರೆ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Uttara Kannada: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!
ಇದೇ ವೇಳೆ ಸೇನೆಯಲ್ಲಿ ಕೇವಲ 4 ವರ್ಷ ಮಾತ್ರವಲ್ಲ, ಜೀವನ ಪೂರ್ತಿ ಮುಂದುವರಿಯಬೇಕು ಎಂಬ ಆಸೆ ಇದೆ. ಆದರೆ ಅದು ಸಾಧ್ಯವಾಗಿಲ್ಲ ಎಂದರು ಬೇಜಾರು ಇಲ್ಲ. ಏಕೆಂದರೆ ನಾಲ್ಕು ವರ್ಷ ದೇಶ ಸೇವೆ ಮಾಡಿದ್ದೇವೆ ಎಂಬ ಹೆಮ್ಮೆ ನಮ್ಮಲ್ಲಿ ಇರುತ್ತೆ. ಈಗ ನಾವು 4 ವರ್ಷ ದೇಶ ಸೇವೆ ಮಾಡಿ ಆ ಬಳಿಕ ಬೇಕು ಎಂದರೆ ಬೇರೆ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಅಲ್ಲದೆ, ನಾಲ್ಕು ವರ್ಷ ಮಾತ್ರ ಡ್ಯೂಟಿ ಇರುತ್ತೆ ಅಂತ ಹೇಳಿಕೊಂಡು ಯಾರು ಬರಬೇಡಿ. ನಿಮ್ಮ ಪರಿಶ್ರಮ ಕಠಿಣವಾಗಿತ್ತು ಎಂದರೆ ನನ್ನ ಸ್ಥಾನದಲ್ಲಿ ನೀವು ನಿಂತುಕೊಳ್ಳುತ್ತೀರಿ. 35 ವರ್ಷ ಆದರೂ ನೀವು ಸೇನೆಯಲ್ಲಿ ಕೆಲಸ ಮಾಡಬಹುದು ಎಂದು ಶ್ರೀದೇವಿ ಹೇಳಿದ್ದಾರೆ.
31 ವಾರಗಳ ಕಾಲ ನಡೆಯಲಿರುವ ಈ ತರಬೇತಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ ಮಹಿಳೆಯರಿಗೆ ತರಬೇತಿ ಸಿಗಲಿದೆ. ಭಾರತೀಯ ಸೇನೆಯ ನುರಿತ ತಜ್ಞರ ತಂಡ ತರಬೇತಿ ನೀಡಲಿದೆ. ಎರಡೂವರೆ ಲಕ್ಷ ಅರ್ಜಿಯಲ್ಲಿ ಶ್ರೀದೇವಿ ಆಯ್ಕೆಯಾಗಿರುವ ಏಕೈಕ ಕನ್ನಡತಿ.
ಸರ್ಕಾರಿ ಶಾಲೆಯಲ್ಲೇ ಓದಿ, ಕ್ರೀಡಾ ಕೋಟಾದಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀದೇವಿ, 4 ವರ್ಷ ಮಾತ್ರವಲ್ಲದೆ ಸೇನೆಯಲ್ಲೇ ಮುಂದುವರಿಯಲು ಶೇಕಡಾ 25ರಷ್ಟು ಜನರಿಗೆ ಅವಕಾಶವಿದೆ. ನಾನು ಸೇನೆಗೆ ಸಂಪೂರ್ಣವಾಗಿ ಸೇರ್ತೇನೆ ಅನ್ನೋ ಛಲ ಹೊಂದಿದ್ದಾರೆ. ತರಬೇತಿಯಲ್ಲಿ ಮಹಿಳೆ ಪುರುಷ ಅನ್ನೋ ಬೇಧಭಾವ ಇಲ್ಲದೆ ತರಬೇತಿ ನೀಡಲಾಗ್ತಿದೆ. ಫಿಸಿಕಲ್ ಫಿಟ್ನೆಸ್, ಆರ್ಮ್ ಟ್ರೈನಿಂಗ್, ಡಿಸಿಪ್ಲಿನ್ ತರಬೇತಿ ಕೊಡಲಾಗ್ತಿದೆ. ಮಾರ್ಚ್ 1ರಿಂದ ತರಬೇತಿ ಶುರುವಾಗಿದ್ದು, ಹುಡುಗಿಯರು ಪುರುಷನಿಗೆ ಪೈಪೋಟಿ ನೀಡುವ ಉತ್ಸಾಹದಲ್ಲಿದ್ದಾರೆ.
ಇದನ್ನೂ ಓದಿ: International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್ನ ಪ್ರಾಮುಖ್ಯತೆ ಏನು?
ಮಹಿಳೆ ಆಧುನಿಕ ಜಗತ್ತಿನಲ್ಲಿ ಪುರುಷನಿಗೆ ಸರಿಸಮಾನವಾಗಿ ನಿಲ್ಲುವ ಈ ಹೊತ್ತಿನಲ್ಲಿ ಅಗ್ನಿಪಥ್ ಸ್ಕೀಂನಲ್ಲಿ ಯುವತಿಯರು ಛಲದಿಂದ ಭಾಗಿಯಾಗ್ತಿರೋದು ಹೆಮ್ಮೆಯ ವಿಚಾರ. ಇದಕ್ಕೆ ಅಲ್ವಾ ಹೇಳೋದು ಹೆಣ್ಣುಮಕ್ಳೆ ಸ್ಟ್ರಾಂಗು ಗುರು ಅಂತ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ