• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರದಲ್ಲಿ ರಾಜಕಾರಣ ಬೇಡ; ಸಚಿವ ಶ್ರಿರಾಮುಲು

ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರದಲ್ಲಿ ರಾಜಕಾರಣ ಬೇಡ; ಸಚಿವ ಶ್ರಿರಾಮುಲು

 ಸಚಿವ ಶ್ರಿರಾಮುಲು

ಸಚಿವ ಶ್ರಿರಾಮುಲು

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರದಲ್ಲಿ ಸರಕಾರ ಆಗಲಿ ಅಥವಾ ಬಿಜೆಪಿ ಆಗಲಿ ಹಿಂದು ಪರ ಸಂಘಟನೆಯವರಾಗಲಿ ಯಾರ ಮೇಲೀ ಒತ್ತಡ ಹಾಕಿ ಹಣ ಸಂಗ್ರಹ ಮಾಡುತ್ತಿಲ್ಲ

  • Share this:

ಕಾರವಾರ (ಫೆ. 16):  ಪಂಚಮಸಾಲಿ ಸಮುದಾಯ 2ಎ ಸೇರ್ಪಡೆ ವಿಚಾರ ಎಲ್ಲೆಡೆ ಈಗ ಬಿಸಿ ಬಿಸಿ ಚರ್ಚೆ ಆಗುತ್ತಿದೆ.  ಈ ನಡುವ ರಾಜಕೀಯ ನಾಯಕರು ಕೂಡಾ ಪರ-ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ  ಸಚಿವ ಶ್ರೀರಾಮುಲು, ಈ ಕುರಿತು ರಾಜ್ಯದ 26 ಜಿಲ್ಲೆಗಳಿಂದ ವರದಿ ನೀಡಲು ತಿಳಿಸಿದ್ದೇನೆ.  ವರದಿ ಬಂದ ನಂತರ ಸರಕಾರ ಒಂದು ತೀರ್ಮಾನಕ್ಕೆ ಬರುತ್ತದೆ. ಮೀಸಲಾತಿ ಹೋರಾಟ ಮಾಡುವುದು ಅವರವರ ಹಕ್ಕು ಅದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ. ಅವರ ಬೇಡಿಕೆ ಆಗ್ರಹಿಸಿ ಅವರ ಹೋರಾಟ ನಡೆಯುತ್ತಿದೆ. ಇಲ್ಲಿ ಸಂವಿಧಾನಿಕವಾಗಿ ಕೆಲವೊಂದು ತೊಂದರೆಗಳಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆದಿದೆ. ಮೀಸಲಾತಿ ಕುರಿತು ಮಠಾಧೀಶರ ಪರ ವಿರೋಧ ಇರುವುದರಿಂದ ಸಾಧಕ ಬಾಧಕಗಳನ್ನ ನೋಡಿಕೊಂಡು ಸರಕಾರ ಒಂದು ತೀರ್ಮಾನಕ್ಕೆ ಬರುತ್ತದೆ ಎಂದು ತಿಳಿಸಿದರು 


ಇದರ ಬೆನ್ನಲ್ಲೇ ಕುರುಬ ಸಮುದಾಯವರು ಕೂಡಾ ತಮ್ಮನ್ನ ಎಸ್ಟಿಗೆ ಸೇರಿಸಬೇಕಂಬ ಹೋರಾಟ ಚುರುಕುಗೊಳಿಸುತ್ತಿದ್ದಾರೆ ಎಂಬ ಕುರಿತು ಉತ್ತರಿಸಿದ ಅವರು, ಮುಂದೆ ಸರಕಾರ ಈ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.


ಬಿಪಿಎಲ್ ಗೊಂದಲ ಮುಗಿದಿದೆ...ಸರಕಾರ ಬಡವರ ಪರ ಇದೆ


ಟಿ.ವಿ ಪ್ರೀಡ್ಜ್​ ಇದ್ದವರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ  ಹೇಳಿಕೆ ಪ್ರತಿಕ್ರಯಿಸಿದ ಅವರು, ಯಾವುದೇ ಕಾರಣಕ್ಕೂ ಹಾಗೇ ಆಗಲ್ಲ. ಸರಕಾರ ಬಡವರ ಪರವಾಗಿ ಇದೆ. ಬಿಪಿಎಲ್ ಕಾರ್ಡ್ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.


ಇದನ್ನು ಓದಿ: ದೇಶಕ್ಕೆ ಮಾದರಿಯಾದ ಮರಳು ನೀತಿ ಶೀಘ್ರದಲ್ಲೇ ಜಾರಿ; ಸಚಿವ ಮುರುಗೇಶ್ ನಿರಾಣಿ ಘೋಷಣೆ


ರಾಮ ಮಂದಿರ ನಿರ್ಮಾಣದಲ್ಲಿ ರಾಜಕೀಯ ಬೇಡ


ಬಿಜೆಪಿ ರಾಮ ಮಂದಿರಕ್ಕೆ ಹಣ ನೀಡದವರ ಮನೆಯನ್ನು ಗುರುತು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ  ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು,  ರಾಜಕಾರಣಿಗಳೂ ಕೂಡಾ ಪಕ್ಷ ಬೇಧ ಮರೆತು ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕು.  ಇಲ್ಲಿ ರಾಜಕೀಯ ಮಾಡಬಾರದು. ಈಗಾಗಲೇ ಕುಮಾರಸ್ವಾಮಿಯವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಇದು ಸಮಂಜಸವಲ್ಲ. ಬಿಜೆಪಿ ಯಾವತ್ತು ಹಿಟ್ಲರ್ ಸರಕಾರ ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳಿದರು.


ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರದಲ್ಲಿ ಸರಕಾರ ಆಗಲಿ ಅಥವಾ ಬಿಜೆಪಿ ಆಗಲಿ ಹಿಂದು ಪರ ಸಂಘಟನೆಯವರಾಗಲಿ ಯಾರ ಮೇಲೀ ಒತ್ತಡ ಹಾಕಿ ಹಣ ಸಂಗ್ರಹ ಮಾಡುತ್ತಿಲ್ಲ. ಎಲ್ಲರೂ ಕೂಡಾ ಸ್ವಯಂ ಪ್ರೇರಿತರಾಗಿ ಹಣ ನಿಡುತ್ತಿದ್ದಾರೆ .ಕುಮಾರಸ್ವಾಮಿಯವರು ಕೂಡಾ ಮುಂದೆ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡುವ ಭರವಸೆ ನನಗಿದೆ ಮತ್ತು ಅವರಿಗೂ ಕೂಡ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ದೊಡ್ಡ ಮನಸ್ಸು ಇದೆ ಎಂದರು.

top videos
    First published: