‘ಇತ್ತೀಚೆಗೆ ದಾವಣಗೆರೆಯಲ್ಲಿ ಲಕ್ಷ ಲಿಂಗಾಯತರು, ಕೋಲಾರದಲ್ಲಿ 50 ಸಾವಿರ ಕುರುಬರ ಮತಾಂತರ’

Sri Rama Sene President: ಕ್ರೈಸ್ತರಿಂದ ತೀವ್ರ ಮಟ್ಟದಲ್ಲಿ ಮತಾಂತರ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿರುವ ಶ್ರೀರಾಮಸೇನೆ ಅಧ್ಯಕ್ಷರು, ಇತ್ತೀಚೆಗೆ ಲಿಂಗಾಯತರು, ಒಕ್ಕಲಿಗರು, ಕುರುಬರು ಮೊದಲಾದ ಜಾತಿಯ ಜನರನ್ನು ಮತಾಂತರಕ್ಕೆ ಗುರಿ ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

 • Share this:
  ಬಾಗಲಕೋಟೆ: ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಗಳಿಗೆ ಸ್ವಾಮೀಜಿಗಳೊಂದಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ನಾನು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ. ಇದರಲ್ಲಿ ಯಾವುದೇ ನಾಟಕವನ್ನು ಮಾಡಬೇಡಿ. ಇದೇ ಅಧಿವೇಶನದಲ್ಲಿ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ಥಾಯಿಸಿದರು.

  ಯಾಕೆ ಪಾದ್ರಿಗಳು ಕ್ರಿಶ್ಚಿಯನ್ನರು ಕಾನೂನು ಜಾರಿಗೆ ತರಬಾರದು ಅಂತಿದ್ದಾರೆ? ಇದರಿಂದ ಅವರ ಅಂಗಡಿ ವ್ಯಾಪಾರ ಬಂದ್ ಆಗುತ್ತೆ. ಅವರ ಉದ್ಯೋಗ ಬಂದ್ ಆಗುತ್ತೆ. ದೇಶದ್ರೋಹಿ ಚಟುವಟಿಕೆಗಳನ್ನು ನಿಲ್ಲಿಸುವಗೋಸ್ಕರವಾದರೂ ಕಾನೂನನ್ನು ಜಾರಿಗೆ ತರಲೇ ಬೇಕು ಎಂದು ಆಗ್ರಹಿಸಿದ ಪ್ರಮೋದ್ ಮುತಾಲಿಕ್, ಒಂದು ವೇಳೆ ಕಾಯ್ದೆ ಜಾರಿಗೆ ತರದಿದ್ದರೆ ಸಾವಿರಾರು ಜನ ಸ್ವಾಮೀಜಿಗಳ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಗೃಹಮಂತ್ರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

  ಸೋನಿಯಾ ಮೆಚ್ಚಿಸುತ್ತಿದ್ದಾರೆ:

  ಇದೇ ಸಮಯದಲ್ಲಿ ಮತಾಂತರ ಕಾಯ್ದೆ ವಿರೋಧಿಸುತ್ತೇವೆಂಬ ಕೈ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ ಮಾತನಾಡಿದ ಮುತಾಲಿಕ್, ಕಾಂಗ್ರೆಸ್ ನವರಿಗೆ ದೇಶ, ಧರ್ಮದ ಬಗ್ಗೆ ಕಾಳಜಿ ಇದ್ದಿದ್ರೆ ಈ ಮಾತು ಹೇಳುತ್ತಿರಲಿಲ್ಲ. ಸೋನಿಯಾ ಗಾಂಧಿಯನ್ನ ಸಂತುಷ್ಟಿಗೊಳಿಸೋಕೆ ಹೀಗೆ ಹೇಳುತ್ತಾರೆ. ಇವರು ಮಾತನಾಡಿದ್ದು ಸೋನಿಯಾ ಗಾಂಧಿ ಕಡೆ ಹೋಗಿ ದೊಡ್ಡ ಶಕ್ತಿ ಸಿಗುತ್ತೆ ಅಂತಾ ಅಂದುಕೊಂಡಿದಾರೆ ಎಂದು ತಿರುಗೇಟು ನೀಡಿದರು.

  ನಿಮ್ಮ ಮನೆಗಳಿಗೂ ಬರುತ್ತಾರೆ ಹುಷಾರ್..!

  ಮತಾಂತರಕ್ಕೆ ಸಪೋರ್ಟ್, ವಿರೋಧ ಮಾಡುವವರನ್ನು ನುಂಗಿ ಹಾಕುತ್ತೆ. ನಿಮ್ಮ ಮನೆ ಒಳಗಡೆನೂ ಹೋಗುತ್ತಾರೆ. ಈಗಾಗಲೇ ಗೂಳಿಹಟ್ಟಿ ಶೇಖರ್ ಮನೆಯೊಳಗೆ ಹೋದಂತೆ ನಿಮ್ಮ ಮನೆಯಲ್ಲೂ ಬರ್ತಾರೆ ಎಂದು ತಿಳಿಸಿ, ಇದನ್ನ ನೆನಪಿಟ್ಟುಕೊಳ್ಳಿ ಧರ್ಮ ದ್ರೋಹಿಗಳಾಗಬೇಡಿ. ಹಿಂದೂ ಧರ್ಮ ಜಗತ್ತಿನಲ್ಲಿ ಸುಖಿಯಾಗಿರಲಿ ಅಂತಾ ಹೇಳಿದ ಏಕೈಕ ಧರ್ಮವಾಗಿದೆ. ಈ ಧರ್ಮದಲ್ಲಿ ಹುಟ್ಟಿದ್ದೀರಿ. ಈ ಧರ್ಮಕ್ಕೆ ದ್ರೋಹ ಬಗೆಯಬೇಡಿ ಎಂದು ಮುತಾಲಿಕ ಸಂದೇಶ ನೀಡಿದರು.

  ಇದನ್ನೂ ಓದಿ: Business Ideas: ಕೇವಲ ₹50,000ಕ್ಕೆ ಅಂಚೆ ಕಚೇರಿ ಫ್ರಾಂಚೈಸಿ ತೆಗೆದುಕೊಂಡು ಲಕ್ಷಾಂತರ ರೂ. ಗಳಿಸಬಹುದು!

  ಹಿಂದುಳಿದವರಷ್ಟೇ ಅಲ್ಲ ಲಿಂಗಾಯತ, ಕುರುಬರು, ಬ್ರಾಹ್ಮಣರೂ ಮತಾಂತರ:

  “ಇತ್ತೀಚೆಗೆ ಲಿಂಗಾಯತರು ಸೇರಿದಂತೆ ಎಲ್ಲ ಜಾತಿಯವರು ಮತಾಂತರ ಆಗ್ತಿದಾರೆಂಬ ವಿಚಾರವಾಗಿ ಮಾತನಾಡಿ, ಇಲ್ಲಿಯವರೆಗೆ ಹಿಂದುಳಿದ ವರ್ಗದವರು ಮಾತ್ರ ಮತಾಂತರ ಆಗ್ತಿದ್ರು. ಈಗ ಲಿಂಗಾಯತರು, ಕುರುಬರು, ಗೌಡರು, ಬ್ರಾಹ್ಮಣರು, ಆರ್ಯ-ವೈಶ್ಯ ಸಮಾಜದವರೂ ಆಗುತ್ತಿದ್ದಾರೆ. ಎಲ್ಲ ಸಮಾಜದವ್ರನ್ನು ಮತಾಂತರ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕೋಲಾರದಲ್ಲಿ 50 ಸಾವಿರ ಕುರುಬರು ಮತಾಂತರ ಆಗಿದ್ದಾರೆ. ದಾವಣಗೆರೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಲಿಂಗಾಯತರು ಮತಾಂತರ ಆಗಿದ್ದಾರೆ. ಎಲ್ಲ ಕಡೆಗೂ ಹೀಗೆಯೇ ನಡೆಯುತ್ತಿದೆ” ಎಂದು ಶ್ರೀರಾಮಸೇನೆ ಅಧ್ಯಕ್ಷರು ಆತಂಕ ವ್ಯಕ್ತಪಡಿಸಿದರು.

  ಕಾನೂನು ಮೂಲಕ ಇದನ್ನ ತಡೆಯಬೇಕು ಹಾಗೂ ಜಾಗೃತಿ ಮೂಡಿಸಬೇಕಿದೆ. ಸರ್ಕಾರ ಮತ್ತು ಸಮಾಜ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸ್ವಾಮೀಜಿಗಳು ಮಠ ಬಿಟ್ಟು ಹೊರಗಡೆ ಬರಬೇಕು. ಮಠದೊಳಗಡೆ ಇದ್ರೆ ನಿಮ್ಮ ಪಾದಪೂಜೆಗೂ ಸಹ ಜನ ಸಿಗೋದಿಲ್ಲ. ಮೀಸಲಾತಿ ಮತ್ತು ಸಿಎಂ ರಕ್ಷಣೆಗೆ ನಿಮ್ಮ ಮಠಗಳಿಲ್ಲ. ಮಠಗಳು ಸಮಾಜದ ರಕ್ಷಣೆಗೋಸ್ಕರ ಇವೆ. ಸ್ವಾಮೀಜಿಗಳು ಮಠದಿಂದ ಹೊರಬರಬೇಕು ಎಂದು ಮುತಾಲಿಕ ಅವರು ಕರೆ ನೀಡಿದರು.

  ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ‘ರುಪ್ಸಾ’ ನಿರ್ಧಾರ: ಬೇಡಿಕೆ ಈಡೇರದಿದ್ರೆ ಜನವರಿಯಲ್ಲಿ ಶಾಲೆ ಬಂದ್

  ನೂರ್​ಜಹಾನ್ ಮೇಲೆ ಕೊಲೆ ಕೇಸ್ ಹಾಕಿ:

  ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀರಾಮಸೇನೆ ಅಧ್ಯಕ್ಷರು, ನಾಗೇಶ್ ಮತ್ತು ವಿಜಯಲಕ್ಷ್ಮಿ ಎಂಬ ಕುಟುಂಬ, ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿ ಜೀವನ‌ ನಡೆಸಿದ್ದರು. ಅವರಿಗೆ ಮುಸ್ಲಿಂ ಮಹಿಳೆ ನೂರ್ ಜಹಾನ್ ವಿಜಯಲಕ್ಷ್ಮಿಗೆ ಸಂಪರ್ಕ ಬಂದಿದ್ದಾಳೆ. ಗಂಡ ಹೆಂಡತಿ ಮಧ್ಯೆ ದೊಡ್ಡ ಜಗಳವಾಗಿ ಸಾವಿನವರೆಗೆ (ಆತ್ಮಹತ್ಯೆ) ಹೋಯಿತು. ಇದು ಆತ್ಮಹತ್ಯೆಯಲ್ಲ. ನೂರಜಹಾನ್ ಕೊಲೆ ಮಾಡಿದ್ದಿದು. ಅವಳ‌ ಮೇಲೆ ಮರ್ಡರ್ ಕೇಸ್ ಹಾಕಬೇಕು. ಒದ್ದು ಒಳಗಡೆ ಹಾಕಬೇಕು ಎಂದು ಒತ್ತಾಯಿಸಿದರು.

  ಯಾವುದೋ ಒಂದು ಸಣ್ಣ ಕೇಸ್ ಹಾಕಿ ಮುಚ್ಚಿ ಹಾಕಲು ಹೋಗಬೇಡಿ ಬಿಜೆಪಿಯವರೇ. ಇದನ್ನ ಗಂಭೀರವಾಗಿ ತಗೊಂಡು ನೂರ್​ಜಹಾನ್ ಹಿಂದೆ ಇರುವ ಯಾವ ಸಂಘಟನೆ ಇದೆ, ಯಾವ ಮುಲ್ಲಾ ಮೌಲ್ವಿ ಇದ್ದಾರೆ ಅನ್ನೋದು ತನಿಖೆಯಾಗಬೇಕು. ಇದು ಬರೀ ಮಹಿಳೆ ಮಾಡುವಂತಹದ್ದಲ್ಲ, ಅವಳ ಹಿಂದೆ ಯಾವುದೋ ಒಂದು ಶಕ್ತಿ ಇದೆ. ಇವಳು ಒಬ್ಬಳೇ ಅಲ್ಲ, ಇನ್ನೂ ಬೇಕಾದಷ್ಟು ಜನ ಇದ್ಧಾರೆ ಎಂದು ಪ್ರಮೋದ್ ಮುತಾಲಿಕ್ ಸಂಶಯ ವ್ಯಕ್ತಪಡಿಸಿದರು.

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: