Hijab Row: ಕುಂಕುಮ, ಬಳೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳುತ್ತೇವೆ ಹುಷಾರ್: Muthalik

ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳಿ ಹಾಕ್ತಿವಿ ಹುಷಾರ್​​ ಎಂದು ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಆಗುತ್ತಿರುವುದು ಹಿಜಾಬ್ ಪ್ರಶ್ನೆಯಲ್ಲ, ಇದರ ಹಿಂದೆ ಇಸ್ಲಾಮಿಕರಣ ಇದೆ. ಈಗ ಒಂದೊಂದೇ ಹೊರಗೆ ಬರ್ತಿದೆ ಎಂದು ಆರೋಪಿಸಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಬಾಗಲಕೋಟೆ: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವರ್ಸಸ್​​ ಕೇಸರಿ ಶಾಲು (Hijab vs Saffron Shawl ) ಸಂಘರ್ಷ ಸಂಬಂಧ ಶ್ರೀರಾಮ ಸೇನೆ (Sri Ram Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅಬ್ಬರಿಸಿದ್ದಾರೆ. ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳಿ ಹಾಕ್ತಿವಿ ಹುಷಾರ್​​ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಆಗುತ್ತಿರುವುದು ಹಿಜಾಬ್ ಪ್ರಶ್ನೆಯಲ್ಲ, ಇದರ ಹಿಂದೆ ಇಸ್ಲಾಮಿಕರಣ ಇದೆ. ಈಗ ಒಂದೊಂದೇ ಹೊರಗೆ ಬರ್ತಿದೆ, ಬರಿ ಹಿಜಾಬ್ ಅಷ್ಟೇ ಅಲ್ಲ. ಇಡೀ ಮೈ ಮುಚ್ಚೋ ಬುರ್ಕಾ ಹಾಕಿಕೊಂಡು ಬರ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ನಮಾಜ್ ಮಾಡೋಕೆ ಅವಕಾಶ ಕೊಡಿ ಅಂತಾರೆ. ಹೀಗೆ ಒಂದೊಂದೇ ಮುನ್ನುಗ್ಗುವ ಪ್ರವೃತ್ತಿ ಇಡೀ ಇಸ್ಲಾಮಿಕ್ ಇತಿಹಾಸ ಹೇಳುತ್ತೆ. ನಮ್ಮ ದೇಶವನ್ನು ನುಂಗಿ ನೀರು ಕುಡಿಯಲು ಈ ಪ್ರವೃತ್ತಿ ಮಾಡ್ತಿದ್ದಾರೆ ಎಂದು ಅಪಾದಿಸಿದರು.

ಇದನ್ನೂ ಓದಿ: Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?

ಇವೆಲ್ಲಾ ಫ್ಯಾಶನ್ ಅಲ್ಲ

ಈಗ ಹಣೆ ಮೇಲಿನ ಕುಂಕುಮ, ಭಸ್ಮ, ವಿಭೂತಿ, ಬಳೆ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಹಣೆ ಮೇಲಿನ ಕುಂಕುಮ, ವಿಭೂತಿ, ಭಸ್ಮ ವೈಜ್ಞಾನಿಕವಾಗಿ ಇವೆ. ಇದು ಫ್ಯಾಶನ್ ಶೋ ಅಲ್ಲ, ವೈಜ್ಞಾನಿಕವಾದ ಆಚರಣೆ ಇದೆ.  ಸಾವಿರಾರು ವರ್ಷಗಳ ಪರಂಪರೆ, ದೇಶದ ಸಂಸ್ಕೃತಿ, ಸಂಪ್ರದಾಯ ಇದೆ. ಇವೆಲ್ಲಾ ನಮ್ಮ ಧರ್ಮದ ಆಚರಣೆ . ಅದರ ಬಗ್ಗೆ ಮಾತನಾಡಿದರೆ ಹುಷಾರ್  ನಾಲಿಗೆ ಸೀಳಿ ಬಿಡ್ತೀವಿ ಎಂದು ಎಚ್ಚರಿಕೆ ನೀಡಿದರು.

ತೆಗಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ

ಹಿಜಾಬ್ ಹಿಂದೆ RSS ಕುತಂತ್ರ ಇದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮುತಾಲಿಕ್​ ತಿರುಗೇಟು ನೀಡಿದರು. RSS ನಂತಹ ದೇಶಭಕ್ತ ಸಂಘಟನೆಯನ್ನ ತೆಗಳುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. ಸಿದ್ದರಾಮಯ್ಯನವರೇ ಆರ್.ಎಸ್.ಎಸ್ ಬಗ್ಗೆ ಬಯ್ಯುವಂತಹದ್ದಿಲ್ಲ...ಬೇಕಾದ್ರೆ ಬಿಜೆಪಿಗೆ ಬೈಯಿರಿ, ಟೀಕೆ ಮಾಡಿರಿ..ಆದ್ರೆ ಆರ್.ಎಸ್.ಎಸ್ ಬಗ್ಗೆ ಟೀಕೆ ಬೇಡ. RSS ದೇಶದ ಒಗ್ಗಟ್ಟು ಮತ್ತು ಸುರಕ್ಷತೆ ದೃಷ್ಟಿಯಿಂದ ಯೋಚಿಸುತ್ತಿವೆ. ದೇಶಭಕ್ತಿಯನ್ನು ಬೆಳಸಿ ಒಗ್ಗಟ್ಟಿನ ವಿಚಾರಧಾರೆ ಪಸರಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಒಬ್ಬ ವಿದ್ಯಾರ್ಥಿ ಕೇಸರಿ ಶಾಲು ಧರಿಸಿ ಹೋಗಿಲ್ಲ

ಕೋರ್ಟ್​​ ಮಧ್ಯಂತರ ಆದೇಶದ ನಂತರ ಒಬ್ಬನೇ ಒಬ್ಬ ವಿದ್ಯಾರ್ಥಿ ಕೇಸರಿ ಶಾಲು ಧರಿಸಿ ಹೋಗಿಲ್ಲ. ನಾವು ಆದೇಶ ಪಾಲಿಸಿದ್ದೇವೆ, ಪಾಲಿಸುತ್ತೇವೆ. ಸಿದ್ದರಾಮಯ್ಯನವರೇ RSS ನಿರಂತರ 96 ವಷ೯ದಿಂದ ಕೆಲಸ ಮಾಡ್ತಿದೆ. ಒಂದೇ ಒಂದು ಕಳಂಕ ಇಲ್ಲದೆ, ದೇಶಭಕ್ತಿಯಿಂದ ಕೆಲಸ ಮಾಡ್ತಿದೆ. ಆದರೆ ಸಿಎಫ್ಐ, ಪಿಎಫ್ಐ ಸಂಘಟನೆಗಳು ದೇಶದ್ರೋಹದ ಕೆಲಸದಲ್ಲಿ ತೊಡಗಿವೆ. ಈ ಕುರಿತು ಹಿಂದೆ ಕೇರಳದ ಹಿಂದಿನ ಸಿಎಂ ಪಿಣರಾಯಿ ಪ್ರಧಾನಿಗೆ ಪತ್ರ ಬರೆದಿದ್ದಾರೆ . ಆಗ ಪಿಎಂ ಆಗಿದ್ದ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಪಿಎಫ್ಐ ದೇಶದ್ರೋಹಿ ಸಂಘಟನೆಗಳ ಜೊತೆ ಶಾಮಿಲಾಗಿದೆ, ಪಿಎಫ್ಐ ಸಂಘಟನೆ ಬ್ಯಾನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Hijab Row: ಒಗ್ಗಟ್ಟಾಗಿ ಶಾಂತಿ ಮಂತ್ರ ಪಠಿಸಿದ ಸ್ವಾಮೀಜಿಗಳು, ಮೌಲ್ವಿಗಳು.. ಹಿಜಾಬ್ ಬಗ್ಗೆ ಹೇಳಿದ್ದಿಷ್ಟು..

ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಪಿಎಫ್ಐ ಬ್ಯಾನ್ ಮಾಡಬೇಕು . ಪಿಎಫ್ಐ ಸಂಘಟನೆ ಮುಂದೆ ದೇಶಕ್ಕೆ ಮಾರಕವಾಗಲಿದೆ. ಈಗ ಕಾಂಗ್ರೆಸ್ ನ ಅಲ್ಪಸಂಖ್ಯಾತ ಶಾಸಕರೇ ಪಿಎಫ್ಐ ಸಂಘಟನೆ ಬ್ಯಾನ್ ಗೆ ಆಗ್ರಹಿಸುತ್ತಿದ್ದಾರೆ. ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನ ಬ್ಯಾನ್ ಮಾಡಿ ಎಂದು ಸಿಎಂ ಅವರನ್ನ ಭೇಟಿ ಮಾಡಿದ್ದಾರೆ. ಕೇಂದ್ರ &ರಾಜ್ಯ ಬಿಜೆಪಿ ಸರ್ಕಾರಗಳಿಗೆ ಎಷ್ಟಬೇಕು ಅಷ್ಟು ದಾಖಲೆ ನೀಡ್ತೆನೆ.. ರಾಜ್ಯದಲ್ಲಿ ಮಾಡಿದ 22 ಕೊಲೆಗಳಲ್ಲಿ 9 ರಲ್ಲಿ ಪಿಎಫ್ಐ ನ ನಂಟಿದೆ. ಸರ್ಕಾರ ಪಿಎಫ್ಐ, ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡದಿದ್ದರೇ ನಿಮ್ಮನ್ನು ನುಂಗಿ ಹಾಕುತ್ತೆ ಎಂದರು.
Published by:Kavya V
First published: