40 ವರ್ಷ ಹಿಂದುತ್ವಕ್ಕಾಗಿ ದುಡಿದಿದ್ದೇನೆ, ಬೆಳಗಾವಿ ಲೋಕಸಭಾ ಟಿಕೆಟ್ ನನಗೆ ನೀಡಿ; ಪ್ರಮೋದ್ ಮುತಾಲಿಕ್

ಟಿಕೆಟ್ ವಿಚಾರವಾಗಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಸಹ ಪ್ರಮೋದ್ ಮುತಾಲಿಕ್ ಭೇಟಿ ಮಾಡಿ ಬಂದಿದ್ದಾರೆ. ಸ್ವಯಂ ಸಂಘದ ಮೂಲಕ ತಮ್ಮ ಲಾಬಿಯನ್ನು ಮುಂದುವರೆಸಿದ್ದಾರೆ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಚಿಕ್ಕೋಡಿ(ಮಾ.18): ದಿವಂಗತ ಸುರೇಶ್ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭೆ ಸ್ಥಾನಕ್ಕೆ ಈಗಾಗಲೇ ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಘಟಾನುಘಟಿ ನಾಯಕರು ಟಿಕೆಟ್​​ಗಾಗಿ ದೆಹಲಿ ಹಾದಿ ಹಿಡಿದಿದ್ದರೆ‌, ಇತ್ತ ಹಿಂದುತ್ವದ ಆಧಾರದ ಮೇಲೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ತಮಗೆ ಟಿಕೆಟ್ ಕೊಡಬೇಕು ಅಂತ ಹೇಳ್ತಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಟಿಕೆಟ್ ಬಾಲ್ ಎಸೆದರೆ ನಾನು ಸಿಕ್ಸರ್ ಬಾರಿಸೋಕೆ ರೆಡಿ ಅಂತಿದ್ದಾರೆ ಮುತಾಲಿಕ್.

ಸುರೇಶ್ ಅಂಗಡಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಎಂಪಿ ಸ್ಥಾನದ ಗದ್ದುಗೆ ಏರಬೇಕು ಅಂತ ಬೆಳಗಾವಿ ಜಿಲ್ಲೆಯ ಬಹುತೇಕ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ.‌ ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾದರೂ ಸಹ, ಇನ್ನೂ ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನ ಮಾತ್ರ ಘೋಷಣೆ ಮಾಡಿಲ್ಲ. ಹೀಗಿರುವಾಗ ಸತತ 40 ವರ್ಷಗಳಿಂದ ಹಿಂದುತ್ವದ ಸೇವೆ ಮಾಡಿಕೊಂಡು ಬಂದಿರುವ ಪ್ರಮೋದ್ ಮುತಾಲಿಕ್ ಕೂಡ ಈ ಬಾರಿ ಟಿಕೆಟ್ ರೇಸ್ ನಲ್ಲಿ ಬಂದು ನಿಂತಿದ್ದಾರೆ.

ನಿಷ್ಠುರ ಹಿಂದುತ್ವದ ಹಾದಿಯಲ್ಲೇ ಬಂದಿರುವ ಮುತಾಲಿಕ್ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಹಿಂದುತ್ವದ ವಿಚಾರ ಬಂದಾಗ ಯಾರ ಮುಲಾಜು ಇಲ್ಲದೆ ತಮ್ಮ ನೇರ ನುಡಿಯಿಂದಲೇ ತಮ್ಮದೆ ಆದ ಶ್ರೀರಾಮ ಸೇನೆಯ ಸಂಘಟನೆಯನ್ನ ಕಟ್ಟಿ ಬೆಳೆಸಿಕೊಂಡು ಬಂದಿದ್ದಾರೆ. ಇದಕ್ಕೂ ಮೊದಲು ಪಕ್ಷದ ಜೊತೆ ಕಾಣಿಸಿಕೊಳ್ಳದೆ ಇದ್ದರು ಸಹ ಸದಾ ಬೆಜೆಪಿ ಪರ ಬ್ಯಾಟಿಂಗ್ ಮಾಡುತ್ತಲೆ ಬಂದಿರುವ ಮುತಾಲಿಕ್ ಈಗ ಬಿಜೆಪಿ ಟಿಕೇಟ್ ತಮಗೆ ನೀಡುವಂತೆ ಬಿಜೆಪಿ ವರಿಷ್ಢರಿಗೆ ಮನವಿ ಮಾಡಿದ್ದಾರೆ.‌

ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್​​​ನ ನ್ಯಾಯಪೀಠ ರಚನೆ ಮಾಡಿ: ಕೇಂದ್ರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ

ರಾಷ್ಟ್ರೀಯ ನಾಯಕರ ಭೇಟಿ

ಇನ್ನು ಟಿಕೆಟ್ ವಿಚಾರವಾಗಿ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಸಹ ಪ್ರಮೋದ್ ಮುತಾಲಿಕ್ ಭೇಟಿ ಮಾಡಿ ಬಂದಿದ್ದಾರೆ. ಸ್ವಯಂ ಸಂಘದ ಮೂಲಕ ತಮ್ಮ ಲಾಬಿಯನ್ನು ಮುಂದುವರೆಸಿದ್ದಾರೆ. ಆದ್ರೆ ಟಿಕೇಟ್ ನೀಡುವ ಕುರಿತು ಇದುವರೆಗೂ ಯಾವುದೇ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ. ಚುನಾವಣೆ ಘೋಷಣೆ ಬಳಿಕ ವಿಚಾರ ಮಾಡುವುದಾಗಿ ರಾಷ್ಟ್ರೀಯ ನಾಯಕರು ಮುತಾಲಿಕ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಾರ್ಯಕರ್ತರಿಂದ ಅಭಿಯಾನ

ಇನ್ನು ಶ್ರೀರಾಮ ಸೇನೆಯ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಪರ ಫೇಸ್ಬುಕ್ ಮತ್ತು ವಾಟ್ಸಪ್ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಶತಾಯ ಗತಾಯ ಪ್ರಮೋದ್ ಮುತಾಲಿಕ್ ಅವರಿಗೆ ಟಿಕೆಟ್ ನೀಡಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ.

ಸತತ 40 ವರ್ಷಗಳಿಂದ ಹಿಂದುತ್ವಕ್ಕಾಗಿ ದುಡಿದ ಪ್ರಮೋದ್ ಮುತಾಲಿಕ್ ಅವರು ಬಿಜೆಪಿಯ ಬೆಳವಣಿಗೆಯಲ್ಲೂ ಸಹ ಸಾಕಷ್ಟು ಪಾತ್ರ ವಹಸಿದ್ದಾರೆ. ಹೀಗಾಗಿ ಅವರಿಗೆ ಟಿಕೇಟ್ ನೀಡಬೇಕು ಎಂದು ಅವರ ಬೆಂಬಲಿರು ಮನವಿ ಮಾಡಿಕೊಂಡ್ದಾರೆ.

ಒಟ್ಟಿನಲ್ಲಿ ರಾಜ್ಯದ ಮೂರು ಕ್ಷೇತ್ರಗಳಿಗೆ ಚುನಾವಣಾ ಆಯೋಗ  ಚುನಾವಣೆ ಘೋಷಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳೂ  ಸಹ ಬಿಜೆಪಿ ಟಿಕೆಟ್​​​​ಗಾಗಿ ಕಾದು ಕುಳಿತಿದ್ದು, ಅಂತಿಮವಾಗಿ ಹೈಕಮಾಂಡ್ ಅಂಕುಶ ಯಾರ ಮೇಲೆ ಬೀಳಲಿದೆ ಕಾದು ನೋಡಬೇಕು.
Published by:Latha CG
First published: