HOME » NEWS » State » SRI RAM SENA PRAMOD MUTALIK SAYS HE IS A BELGAUM BJP TICKET ASPIRANT MVSV SESR

ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ; ಪ್ರಮೋದ ಮುತಾಲಿಕ್​​

ತಾವು ಭೇಟಿಯಾದ ಎಲ್ಲ ಬಿಜೆಪಿ ಮುಖಂಡರು ಸಕಾರಾತ್ಮಕವಾಗಿ ಮಾತನಾಡಿದ್ದಾರೆ.  ಟಿಕೆಟ್ ಇನ್ನೂ ಘೋಷಣೆಯಾಗಬೇಕು.  ಅದು ಯಾವಾಗ ಆಗುತ್ತೆ? ಯಾರಿಗೆ ಆಗುತ್ತೆ ಗೊತ್ತಿಲ್ಲ

news18-kannada
Updated:February 27, 2021, 9:38 PM IST
ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ; ಪ್ರಮೋದ ಮುತಾಲಿಕ್​​
ಪ್ರಮೋದ್​ ಮುತಾಲಿಕ್​
  • Share this:
ವಿಜಯಪುರ (ಫೆ. 27):  ಬೆಳಗಾವಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದೇನೆ.  ಈ ಹಿನ್ನೆಲೆಯಲ್ಲಿ ಈಗಾಗಲೇ ನಾನು ಈಗಾಗಲೇ ಬಿಜೆಪಿ ಎಲ್ಲ ಹಿರಿಯರನ್ನು ಮತ್ತು ಸಂಬಂಧ ಪಟ್ಟವರನ್ನು ಭೇಟಿಯಾಗಿ ವಿನಂತಿ ಮಾಡಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ತಿಳಿಸಿದ್ದಾರೆ. ಶ್ರೀ ಛತ್ರಪತಿ ಶಿವಾಜಿ ಫೌಂಡೇಷನ್ ಮುಖಂಡ ಕಿರಣ ಕಾಳೆ ರಚಿಸಿರುವ ಶ್ರೀ ರಾಜಾ ಶಿವ ಛತ್ರಪತಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಅವರು, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  ನಂತರ ಮಾತನಾಡಿದ ಅವರು, ಹಿಂದುತ್ವ ಮತ್ತು ಅಭಿವೃದ್ಧಿ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ 3 ಸೇವೆ ಸಲ್ಲಿಸಲು ಟಿಕೆಟ್ ನೀಡಿ ಎಂದು ವಿನಂತಿ ಮಾಡಿರುವುದಾಗಿ ತಿಳಿಸಿದರು.

ತಾವು ಭೇಟಿಯಾದ ಎಲ್ಲ ಬಿಜೆಪಿ ಮುಖಂಡರು ಸಕಾರಾತ್ಮಕವಾಗಿ ಮಾತನಾಡಿದ್ದಾರೆ.  ಟಿಕೆಟ್ ಇನ್ನೂ ಘೋಷಣೆಯಾಗಬೇಕು.  ಅದು ಯಾವಾಗ ಆಗುತ್ತೆ? ಯಾರಿಗೆ ಆಗುತ್ತೆ ಗೊತ್ತಿಲ್ಲ ಎಂದು ತಿಳಿಸಿದ ಅವರು, ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲ.  ಟಿಕೆಟ್ ಕೊಟ್ಟರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.  ಇಲ್ಲದಿದ್ದರೆ ನಮ್ಮ ಸಂಘಟನೆಯಿದೆ.  ಸಂಘಟನೆಯಲ್ಲಿ ಕೆಲಸ ಮಾಡುತ್ತೇನೆ.  ಒಂದು ವೇಳೆ ಬಿಜೆಪಿ ಅಭ್ಯರ್ಥಿ ಅಪೇಕ್ಷೆ ಪಟ್ಟರೆ ಶೇ. 100 ರಷ್ಟು ಅವರ ಪರವಾಗಿ ಪ್ರಚಾರ ಮಾಡುತ್ತೇನೆ.  ಮೋದಿ ಅವರ ಬೆಂಬಲಾರ್ಥವಾಗಿ ಸಂಪೂರ್ಣವಾಗಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದೇನೆ.  ಈವರೆಗೆ ಬಿಜೆಪಿ ಸದಸ್ಯತ್ವ ಪಡೆದಿಲ್ಲ.  ಮುಂದಿನ ದಿನಗಳಲ್ಲಿ ಅವಶ್ಯಕತೆ ಎನಿಸಿದರೆ ಬಿಜೆಪಿ ಸದಸ್ಯತ್ವ ಪಡೆಯುತ್ತೇನೆ ಎಂದು ಪ್ರಮೋದ ಮುತಾಲಿಕ ತಿಳಿಸಿದರು.

 ಸಿದ್ಧರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

ರಾಮಮಂದಿರ ದೇಣಿಗೆ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಬ್ಬರೂ ಮಾಜಿ ಸಿಎಂ ಗಳಾಗಿದ್ದವರು.  ಇಬ್ಬರ ಹೇಳಿಕೆಗೆಳೂ ಬಾಲಿಶವಾಗಿವೆ.  ಅವರ ಮಟ್ಟಕ್ಕೆ ಈ ಹೇಳಿಕೆಗಳು ಸರಿಯಲ್ಲ.  ದೇಶದಲ್ಲಿ 130 ಕೋಟಿ ಜನ ರಾಮ ಭಕ್ತರಿದ್ದಾರೆ.  ಈ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು 130 ಕೋಟಿ ರಾಮ ಭಕ್ತರಿಗೆ ಅವಮಾನ ಮಾಡುತ್ತಿದ್ದೀರಿ.  ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಬಯ್ಯಲು ಹೋಗಿ ರಾಮ, ರಾಮ ಭಕ್ತರಿಗೆ ಅವಮಾನ ಮಾಡುತ್ತಿದ್ದೀರಿ.  ಸಿದ್ಧರಾಮಯ್ಯ ನಿಮ್ಮ ಹೆಸರಿನಲ್ಲಿಯೇ ರಾಮನಿದ್ದಾನೆ.  ಅದಕ್ಕಾಗಿಯಾದರೂ ಮರ್ಯಾದೆ ಕೊಡಿ ಎಂದು ಹೇಳಿದರು.

ಇದನ್ನು ಓದಿ: ಜಾತಿ ಅಲ್ಲ, ಹಿಂದುತ್ವದ ಆಧಾರದ ಮೇಲೆ ನನ್ನ ರಾಜಕಾರಣ: ಡಿಸಿಎಂ ಲಕ್ಷ್ಮಣ ಸವದಿ

ಮೀಸಲಾತಿ ಹೋರಾಟ ವಿಚಾರ

ಇದೇ ವೇಳೆ, ನಾನಾ ಸಮುದಾಯಗಳು ನಡೆಸುತ್ತಿರುವ ಮೀಸಲಾತಿ ಹೋರಾಟ ಕುರಿತು ಪ್ರತಿಕ್ರಿಯಿಸಿ, ಇಂದಿನ ಪರಿಸ್ಥಿತಿಯನ್ನು ಮನಗಂಡು ಅಂದು ಅಂಬೇಡ್ಕರ್ ಮೀಸಲಾತಿಯನ್ನು 10 ವರ್ಷ ಮಾತ್ರ ನೀಡುವಂತೆ ಹೇಳಿದ್ದರು.  ಈಗ ಅಂಬೇಡ್ಕರ ಅವರ ಮಾತು ನೆನಪಾಗುತ್ತಿದೆ.  ಇಂದಿನ ನಾನಾ ಸಮುದಾಯಗಳ ಬೇಡಿಕೆ ಬಗ್ಗೆ ನಾನು ಇನ್ನೂ ಅಧ್ಯಯನ ನಡೆಸಬೇಕಿದೆ.  ಹಿಂದೂ ಸಮಾಜ ಒಟ್ಟಾಗಿರಬೇಕು.  ಬಡವರಿಗೆ ಮತ್ತು ನೊಂದವರಿಗೆ ಅನುಕೂಲವಾಗುವ ಹಾಗೆ ಆಗಬೇಕು ಎಂಬುದು ನನ್ನ ಅನಿಸಿಕೆ ಎಂದು ತಿಳಿಸಿದರು. 
ಗೋಹತ್ಯೆ ನಿಷೇಧ ವಿಚಾರ

ಗೋಹತ್ಯೆ ನಿಷೇಧ ಮತ್ತು ಗೋಮಾಂಸ ತಿನ್ನುವ ಕುರಿತು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಗೋವು ಯಾವುದೇ ಒಂದು ಜಾತಿಗೆ, ಯಾವುದೋ ಒಂದು ಪಕ್ಷಕ್ಕೆ, ಯಾವುದೋ ಒಂದು ಸಂಘಟನೆಗೆ ಸಂಬಂಧಪಟ್ಟಿಲ್ಲ.  ಗೋವು ಇಡೀ ದೇಶದ ಕೃಷಿಕರಿಗೆ ಸಂಬಂಧಿಸಿದ ವಿಷಯ.  ಗೋವು ಬರೀ ಒಂದು ಪೂಜಾ ಪ್ರಾಣಿ ಅಷ್ಟೇ ಅಲ್ಲ.  ನಮಗೆ ಅನ್ನ ಹಾಕುತ್ತಿದೆ.  ಆರ್ಥಿಕವಾಗಿ ನೆರವಾಗುತ್ತಿದೆ.  ನಮಗೆ ಗೊಬ್ಬರ ಮತ್ತು ಔಷಧಿ ನೀಡುತ್ತಿದೆ.  ಗೋವು ಕಾಮಧೇನು.  ಸಂವಿಧಾನದ 48ನೇ ಪರಿಚ್ಛೇದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ.  ಕೃಷಿಗೆ ಬೇಕಾದ ಪ್ರಾಣಿಗಳ ಸಂರಕ್ಷಣೆ ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಲಾಗಿದೆ.  ನೀವು ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ.  ಮುಸ್ಲಿಂ ತುಷ್ಠೀಕರಣ ದೃಷ್ಠಿಯಿಂದ ಮಾತನಾಡುತ್ತಿರುವುದು ಸರಿಯಲ್ಲ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Published by: Seema R
First published: February 27, 2021, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories