Sri Lanka Bomb Blast: ಮೃತಪಟ್ಟ ರಾಜ್ಯದ 10 ಮಂದಿಯ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

Sushma Chakre | news18
Updated:April 24, 2019, 10:37 AM IST
Sri Lanka Bomb Blast: ಮೃತಪಟ್ಟ ರಾಜ್ಯದ 10 ಮಂದಿಯ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ
ಕೊಲಂಬೋದ ಚರ್ಚ್​ನಲ್ಲಿ ದಾಳಿಯ ನಂತರದ ದೃಶ್ಯ
  • News18
  • Last Updated: April 24, 2019, 10:37 AM IST
  • Share this:
ಬೆಂಗಳೂರು (ಏ. 23): ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ 10 ಮಂದಿ ಸಾವನ್ನಪ್ಪಿದ್ದು, ಆ ಎಲ್ಲರ ಅಧಿಕೃತ ಪಟ್ಟಿಯನ್ನು ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕರ್ನಾಟಕದ 10 ಮಂದಿ ಕೊಲಂಬೋ ಬಾಂಬ್​ ದಾಳಿಯಲ್ಲಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಇಲಾಖೆ ಮತ್ತು ಶ್ರೀಲಂಕನ್ ಡೆಪ್ಯುಟಿ ಹೈ ಕಮಿಷನ್​ ಖಚಿತಪಡಿಸಿದೆ. ಕರ್ನಾಟಕದ ಹನುಮಂತರಾಯಪ್ಪ, ಲಕ್ಷ್ಮೀನಾರಾಯಣ, ರಂಗಪ್ಪ, ರಮೇಶ್​, ನಾರಾಯಣ ಚಂದ್ರಶೇಖರ್, ಶೆಟ್ಟಿಪಾಳ್ಯ ರಾಮಕೃಷ್ಣಪ್ಪ ನಾಗರಾಜ್, ಹನುಮಯ್ಯ ಶಿವಕುಮಾರ್, ರೆಮುರೈ ತುಳಸಿರಾಮ್, ಮಾರೇಗೌಡ, ಪುಟ್ಟರಾಜು ಸಾವನ್ನಪ್ಪಿದವರು.

ನಾಗರಾಜ ರೆಡ್ಡಿ ಅವರ ಪಾರ್ಥಿವ ಶರೀರವನ್ನು ಇಂದು ಶ್ರೀಲಂಕನ್ ಏರ್​ವೇಸ್​ ಮೂಲಕ ಇಂದು ರಾತ್ರಿ ಬೆಂಗಳೂರಿಗೆ ತರುವ ಸಾಧ್ಯತೆಯಿದೆ. ಮೊದಲು ರಾಜ್ಯದ 8 ಜನ ಶ್ರೀಲಂಕಾದ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಆ ಸಂಖ್ಯೆ ಈಗ 10ಕ್ಕೆ ಏರಿಕೆಯಾಗಿದ್ದು, ಇಂದು ಮಧ್ಯರಾತ್ರಿ ಅಥವಾ ನಾಳೆಯೊಳಗೆ ಮೃತದೇಹಗಳನ್ನು ಬೆಂಗಳೂರಿಗೆ ತರುವ ಸಾಧ್ಯತೆಯಿದೆ. ಈಗಾಗಲೇ ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸ ಮೂರ್ತಿ, ವಿಧಾನಪರಿಷತ್ ಸದಸ್ಯ ಈ . ಕೃಷ್ಣಪ್ಪ ನೇತೃತ್ವದ ನಿಯೋಗ ಕೊಲಂಬೋಗೆ ತೆರಳಿದೆ.

ಕೊಲಂಬೋದಿಂದ ಒಬ್ಬರ ಮೃತದೇಹ ಇಂದು ಬೆಂಗಳೂರಿಗೆ ತರುವ ಸಾಧ್ಯತೆ; ಐವರ ಪಾರ್ಥಿವ ಶರೀರ ಆಗಮನ ವಿಳಂಬ?

ಕೊಲಂಬೋ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟ ಕನ್ನಡಿಗರಲ್ಲಿ ಇಬ್ಬರು ಸ್ಯಾಂಡಲ್​ವುಡ್ ನಟ ಗಣೇಶ್​ ಅವರ ಆತ್ಮೀಯರು ಎಂದು ತಿಳಿದುಬಂದಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್​ ಮಾಡಿರುವ ಗೋಲ್ಡನ್​ ಸ್ಟಾರ್​ ಗಣೇಶ್​, ನನ್ನ ಆತ್ಮೀಯ ಸ್ನೇಹಿತರಾದ ಪುಟ್ಟರಾಜು ಮತ್ತು ಮಾರೇಗೌಡ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಬಾಂಬ್​ ದಾಳಿಯಲ್ಲಿ ಮೃತಪಟ್ಟ ಎಲ್ಲರ ಕುಟುಂಬಕ್ಕೂ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಫೋಟೋದೊಂದಿಗೆ ಗಣೇಶ್​ ಟ್ವೀಟ್​ ಮಾಡಿದ್ದಾರೆ.ಶ್ರೀಲಂಕಾದಲ್ಲಿ ಇರುವ 15ಕ್ಕೂ ಹೆಚ್ಚು ಬೆಂಗಳೂರಿಗರು ನಾಳೆ ಮುಂಜಾನೆ ಬೆಂಗಳೂರು ತಲುಪಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಬಗಲಗುಂಟೆ ನಿವಾಸಿಗಳಾದ ನವೀನ್, ಪ್ರವೀಣ್, ಕಿಟ್ಟಿ ಸೇರಿ ಸ್ನೇಹಿತರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಇದೇ ತಂಡ ಬಾಂಬ್​ ಸ್ಫೋಟದಲ್ಲಿ ಮೃತಪಟ್ಟಿದ್ದ ಜೆಡಿಎಸ್​ ಮುಖಂಡರ ಗುರುತು ಪತ್ತೆ ಹಚ್ಚಿತ್ತು. ಜೆಡಿಎಸ್​ ಮುಖಂಡರಿದ್ದ ಹೋಟೆಲ್​ ಪಕ್ಕದ ಹೋಟೆಲ್​ನಲ್ಲೇ ಇವರೆಲ್ಲರೂ ತಂಗಿದ್ದರು. ಸ್ಫೋಟ ನಡೆದ 20 ನಿಮಿಷಗಳ ಮೊದಲು ಶಾಂಗ್ರಿಲಾ ಹೋಟೆಲ್​ನಿಂದ ತೆರಳಿದ್ದರು. ಸ್ವಲ್ಪ ದೂರ ಸಾಗುತ್ತಿದ್ದಂತೆ ಡ್ರೈವರ್​ಗೆ ಸ್ಫೋಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ವಿಷಯ ತಿಳಿದು ವಾಪಸ್​ ಬರುವಷ್ಟರಲ್ಲಿ ಎಲ್ಲೆಡೆ ಬಾಂಬ್​ ಸ್ಫೋಟವಾಗಿತ್ತು. ನೆಲಮಂಗಲ ಮತ್ತು ದಾಸರಹಳ್ಳಿ ಜೆಡಿಎಸ್​ ಮುಖಂಡರ ಕಳೆಬರವನ್ನು ಇವರೆಲ್ಲರೂ ಪತ್ತೆಹಚ್ಚಿದ್ದರು.

ಶ್ರೀಲಂಕಾದ ಸರಣಿ ಬಾಂಬ್​ ಸ್ಫೋಟದ ಹೊಣೆ ಹೊತ್ತುಕೊಂಡ ಐಸಿಸ್​ ಉಗ್ರ ಸಂಘಟನೆ

ಕೊಲಂಬೋದಲ್ಲಿ ಭಾನುವಾರ ಚರ್ಚ್​ಗಳಲ್ಲಿ ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಹಾಗೂ ಐಷಾರಾಮಿ ಹೋಟೆಲ್ ತಂಗಿದ್ದ ಪ್ರವಾಸಿಗರಿಗೆ ದೊಡ್ಡ ಆಘಾತ ಕಾದಿತ್ತು. ಸರಣಿ ಬಾಂಬ್ ಸ್ಫೋಟದ ಪರಿಣಾಮ ಸುಮಾರು 320 ಜನ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಈ ಬಾಂಬ್​ ಸ್ಫೋಟದ ಹೊಣೆಯನ್ನು ಐಸಿಸ್​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಕ್ರಿಶ್ಚಿಯನ್​​ರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿತ್ತು ಎಂದು ಸಂಘಟನೆ ಹೇಳಿಕೊಂಡಿದೆ.

First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading