ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್​ ಆಯುಕ್ತರ ಸೂಚನೆ

500ಕ್ಕೂ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಪ್ರಮುಖ ಸ್ಥಳಗಳಲ್ಲಿ ಹೋಗಿ, ಬರುವಂತಹ ಜನರ ಬಗ್ಗೆ ನಿಗಾ ವಹಿಸಬೇಕು. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಇರುವ ಸ್ಥಳಗಳಲ್ಲಿ ಬೆಳಕಿನ‌ ವ್ಯವಸ್ಥೆ ಮಾಡಬೇಕು

G Hareeshkumar | news18
Updated:April 25, 2019, 10:35 PM IST
ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸ್​ ಆಯುಕ್ತರ ಸೂಚನೆ
ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್
G Hareeshkumar | news18
Updated: April 25, 2019, 10:35 PM IST
ಬೆಂಗಳೂರು (ಏ.25) : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ.

ಬೆಂಗಳೂರು ನಗರ ಕಮಿಷನರ್​ ಟಿ.ಸುನೀಲ್​ ಕುಮಾರ್​ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ಸ್ಟಾರ್ ಹೋಟೆಲ್​ಗಳ ಮಾಲೀಕರು, ಮಾಲ್​ಗಳ ಮುಖ್ಯಸ್ಥರು, ಚರ್ಚ್, ದೇವಸ್ಥಾನ, ಮಸೀದಿಗಳ ಮುಖ್ಯಸ್ಥರ ಜತೆ ಸಭೆ ನಡೆಸಲಾಯಿತು.

500ಕ್ಕೂ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಪ್ರಮುಖ ಸ್ಥಳಗಳಲ್ಲಿ ಹೋಗಿ, ಬರುವಂತಹ ಜನರ ಬಗ್ಗೆ ನಿಗಾ ವಹಿಸಬೇಕು. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಇರುವ ಸ್ಥಳಗಳಲ್ಲಿ ಬೆಳಕಿನ‌ ವ್ಯವಸ್ಥೆ ಮಾಡಬೇಕು. ದೇವಾಲಯಗಳಿಗೆ ಬರುವ ಭಕ್ತಾದಿಗಳು, ಮಾಲ್​ಗಳು, ಹೋಟೆಲ್​ಗಳಿಗೆ ಬರುವ ಪ್ರತಿಯೊಬ್ಬರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಲಾಯಿತು.

ಇದನ್ನೂ ಓದಿ :  ಶ್ರೀಲಂಕಾದಲ್ಲಿ ಬಾಗಿಲು ಮುಚ್ಚಲಿವೆ ಚರ್ಚ್​ಗಳು?; ಮತ್ತಷ್ಟು ಜೀವ ಹಾನಿಯಾಗದಂತೆ ಸರ್ಕಾರದಿಂದ ಎಚ್ಚರಿಕೆ ಕ್ರಮ!

ದೇವಾಲಯಗಳು: ಇಸ್ಕಾನ್, ಮಹಾಲಕ್ಷ್ಮಿ ಲೇಔಟ್ ಆಂಜನೇಯ ಸ್ವಾಮಿ, ಬುಲ್ ಟೆಂಪಲ್ ದೇವಸ್ಥಾನದ ಮುಖ್ಯಸ್ಥರು.

ಹೋಟೆಲ್​​ಗಳು: ಪಂಚತಾರಾ ಹೋಟೆಲ್​​ಗಳಾದ ದಿ ಅಶೋಕ, ಶಾಂಗ್ರಿ-ಲಾ, ಐಟಿಸಿ ಗಾರ್ಡೇನಿಯಾ, ಲೀ ಮೆರಿಡಿಯನ್ ಹೋಟೆಲ್ ಮ್ಯಾನೇಜರ್​​ಗಳು ಹಾಗೂ ಸೆಕ್ಯೂರಿಟಿ ಮುಖ್ಯಸ್ಥರು.ಚರ್ಚ್​ಗಳು: ಶಿವಾಜಿನಗರ ಚರ್ಚ್, ಕೋಲ್ಸ್ ಪಾರ್ಕ್ ಚರ್ಚ್, ವಿವೇಕನಗರ ಚರ್ಚ್, ಪಾದ್ರಿಗಳು ಹಾಗೂ ಸೆಕ್ಯೂರಿಟಿ ಆಫಿಸರ್​ಗಳು

ಮಸೀದಿಗಳು: ಸಿಟಿ ಮಾರ್ಕೆಟ್ ಮಸೀದಿ, ಕಾಟನ್ ಪೇಟೆ ದರ್ಗಾದ ಮೌಲ್ವಿಗಳು ಹಾಗೂ ಉಸ್ತುವಾರಿಗಳು

ಮಾಲ್‌ಗಳು: ಮಂತ್ರಿ ಮಾಲ್, ಯುಬಿ ಸಿಟಿ, ಓರಾಯಲ್‌ ಮಾಲ್, ಸಿಟಿ ಮಾಲ್, ಫೀನಿಕ್ಸ್ ಮಾಲ್, ಗೋಪಾಲನ್ ಮಾಲ್, ಒನ್ಎಂಜಿ‌ ಮಾಲ್, ಎಸ್ಟೀಂ ಮಾಲ್, ಲಿಡೋ ಮಾಲ್, ಮೀನಾಕ್ಷಿ ಮಾಲ್ ಮ್ಯಾನೇಜರ್​ಗಳು ಹಾಗೂ ಸೆಕ್ಯೂರಿಟಿ ಅಧಿಕಾರಿಗಳು.

ಇದನ್ನೂ ಓದಿ :  ಕೊಲೊಂಬೋ ಸಮೀಪದ ನಗರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ; ಯಾವುದೇ ಹಾನಿಯಾಗಿಲ್ಲ ಎಂದ ಪೊಲೀಸರು

ನಗರದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳ ಭದ್ರತಾ ಮುಖ್ಯಸ್ಥರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಇರದ ಕಚೇರಿ, ಮಂದಿರ, ಮಸೀದಿ, ಚರ್ಚ್​​ಗಳಿಗೆ ಆಯಾ ವಿಭಾಗದ ಡಿಸಿಪಿಗಳ ಸೂಚನೆಯಂತೆ ಭದ್ರತೆ ನಿಯೋಜನೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ