ದಕ್ಷಿಣ ಕನ್ನಡ(ಏ.18): ಪ್ರಸಿದ್ಧ ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ 68,94,88,039.17 ರೂ ಆದಾಯ ಗಳಿಸಿದೆ. 2020 ಏಪ್ರಿಲ್ನಿಂದ 2021 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಕಳೆದ ವರ್ಷ ಮಾ.17ರಿಂದ ಸೆ.8 ರ ತನಕ ಶ್ರೀ ದೇವಳವು ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಆಗಿತ್ತು. ಹಾಗಾಗಿ ಈ 6 ತಿಂಗಳ ಅವಧಿಯಲ್ಲಿ ಶ್ರೀ ದೇವಳಕ್ಕೆ ಯಾವುದೇ ಆದಾಯ ಇರಲಿಲ್ಲ. ಬಳಿಕ ಸೆ.15 ರಿಂದ ಮಾ.31ರ ತನಕ ಶ್ರೀ ದೇವಳಕ್ಕೆ ಬಂದ ಆದಾಯ ಇದಾಗಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. 2019-20ನೇ ಆರ್ಥಿಕ ವರ್ಷದಲ್ಲಿ ಶ್ರೀ ದೇವಳವು 98,92,24,193.34 ರೂ. ಆದಾಯ ಗಳಿಸಿತ್ತು. ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿ ಶ್ರೀ ದೇವಳವು ಬಂದ್ ಆದ ಕಾರಣ ಶ್ರೀ ದೇವಳವು ಕಳೆದ ವರ್ಷಕ್ಕಿಂತ ಈ ಬಾರಿ 29,97,36,154.17 ರೂ ಕಡಿಮೆ ಆದಾಯ ಗಳಿಸಿದೆ ಎಂದರು.
ಇನ್ನು, ಗುತ್ತಿಗೆಗಳಿಂದ 72,35,331 ರೂ, ತೋಟದ ಉತ್ಪನ್ನದಿಂದ 15,64,681ರೂ, ಕಟ್ಟಡ ಬಾಡಿಗೆಯಿಂದ 37,11,409ರೂ, ಕಾಣಿಕೆಯಿಂದ 3,34,69,717ರೂ, ಕಾಣಿಕೆ ಹುಂಡಿಯಿಂದ 12,75,11,301ರೂ, ಹರಿಕೆ ಸೇವೆಗಳಿಂದ 24,10,63,401ರೂ, ಅನುದಾನದಿಂದ ರೂ.80,196, ಹೂಡಿಕೆಯಿಂದ ಬಂದ ಬಡ್ಡಿ 20,49,00,424, ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 36,72,645, ಸಂಕೀರ್ಣ ಜಮೆಗಳಿಂದ 2,63,07,139 ರೂ, ಅನ್ನಸಂತರ್ಪಣೆ ನಿಧಿಯಿಂದ ರೂ.3,54,61,982, ಅಭಿವೃದ್ದಿ ನಿಧಿ 9,20,908 ರೂ, ಶಾಶ್ವತ ಸೇವಾ ಮೂಲಧನ ರೂ.35,88,900 ಹೀಗೆ ಒಟ್ಟು 68ಕೋ.94ಲಕ್ಷದ 88ಸಾವಿರದ 039.17 ಆದಾಯ ಶ್ರೀ ದೇವಳಕ್ಕೆ ಬಂದಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆ: ಕ್ಷೇತ್ರದಲ್ಲಿ ಶೇ 55.61ರಷ್ಟು ಮತದಾನ; ಮತಪೆಟ್ಟಿಗೆ ಸೇರಿದ ಅಭ್ಯರ್ಥಿಗಳ ಭವಿಷ್ಯ!
ದೇಶದಾದ್ಯಂತ ಹರಡಿರುವ ಕೋವಿಡ್-19 ರ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಕಳೆದ ಮಾರ್ಚ್ 17ರಿಂದ ಲಾಕ್ಡೌನ್ನಿಂದ ಶ್ರೀ ದೇವಳಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ನಂತರ ಸೆ.8ರ ಬಳಿಕ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತದನಂತರ ಸೆ.14 ರಿಂದ ದೇವಳದಲ್ಲಿ ಕೆಲವೊಂದು ಸೇವೆಗಳಿಗೆ ಮಿತಿಯನ್ನು ನಿಗದಿಪಡಿಸಿ ನಂತರ ಹಂತ ಹಂತವಾಗಿ ಸೇವೆ ಮಿತಿಗಳನ್ನು ಹೆಚ್ಚುವರಿ ಮಾಡಿಕೊಂಡು ಭಕ್ತರಿಗೆ ಸೇವೆಗಳಿಗೂ ಅವಕಾಶ ಕಲ್ಪಿಸಲಾಗಿತ್ತು. 2021 ರ ಜನವರಿ ನಂತರ ಈ ಹಿಂದಿನಂತೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿತ್ತು. ಆದರೆ ಮಾಚ್-2020 ರಿಂದ ಸೆಪ್ಟೆಂಬರ್-2020 ರ ವರೆಗೂ ಅಂದರೆ ಸುಮಾರು 6 ತಿಂಗಳುಗಳಿಗಿಂತಲೂ ಅಧಿಕ ದೇಶಾದ್ಯಂತ ಉಲ್ಭಣಿಸಿದ ಈ ವಿಷಮ ಪರಿಸ್ಥಿತಿಯಿಂದಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ತೀರಾ ಇಳಿಮುಖವಾಗಿ ಶ್ರೀ ದೇವಳದ ಆದಾಯದಲ್ಲೂ ಭಾರಿ ಮೊತ್ತದ ಇಳಿಕೆಯಾಗಿರುತ್ತದೆ ಎಂದು ಮೋಹನರಾಂ ಸುಳ್ಳಿ ಹೇಳಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ