Jaya Deva Hospital: ಇಂಡೋನೇಷಿಯಾದ ನಾಲ್ಕು ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ; ಜಯದೇವ ಆಸ್ಪತ್ರೆಯ ಮತ್ತೊಂದು ಸಾಧನೆ

ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಧೆಯಲ್ಲಿ ಇಂಡೋನೇಷಿಯಾ ದೇಶದ ನಾಲ್ಕು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ನಾಲ್ಕರಲ್ಲಿ ಮೂರು ಮಕ್ಕಳು ಹುಟ್ಟಿನಿಂದ ಬಂದ ಸಂಕೀರ್ಣ ಹೃದ್ರೋಗ ಕಾಯಿಲೆಯಿಂದ ಬಳಲುತಿದ್ದರು ಮತ್ತು 28 ವರ್ಷದ ಮಹಿಳೆ ಹೃದಯದ ಕವಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು.

ಇಂಡೋನೇಷಿಯಾದ 4 ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

ಇಂಡೋನೇಷಿಯಾದ 4 ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

 • Share this:
  ಶ್ರೀ ಜಯದೇವ  ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (Sri Jayadeva Institute of Cardiovascular Sciences and Research) ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾಗಿದ್ದು, ವಿಶೇಷವಾಗಿ ಹೃದಯ ಆರೈಕೆಗಾಗಿಯೇ, ಬೆಂಗಳೂರಿನ (Bengaluru) ಬನ್ನೇರುಘಟ್ಟ ರಸ್ತೆಯಲ್ಲಿರುವ ಕೇಂದ್ರ ಸ್ಥಾನ, ಬೆಂಗಳೂರಿನ ರಾಜಾಜಿನಗರದ (Rajajinagar) ಇಎಸ್‍ಐ-ಎಂಹೆಚ್ ಶಾಖೆ, ಮೈಸೂರು ಹಾಗೂ ಕಲಬುರಗಿ ಶಾಖೆಗನ್ನೊಳಗೊಂಡಂತೆ, 1600 ಹಾಸಿಗೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಏಕೈಕ ಹೃದ್ರೋಗ ಚಿಕಿತ್ಸಾ ಕೇಂದ್ರವಾಗಿದೆ. ಇದು ಸಂಪೂರ್ಣವಾಗಿ ಹೃದ್ರೋಗ ಆರೈಕೆ ಮಾಡುವ ಲಾಭರಹಿತ ಸಂಸ್ಥೆಯಾಗಿದ್ದು, ಸಮಾಜದ ಎಲ್ಲಾ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಒದಗಿಸುತ್ತಿದೆ ಮತ್ತು ಅರ್ಹ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುತ್ತದೆ. ಈಗ ಇಂಡೋನೇಷಿಯಾ (Indonesia) ದೇಶದ ನಾಲ್ಕು ಮಕ್ಕಳಿಗೆ ಯಶಸ್ವಿ (Success) ಹೃದಯ ಶಸ್ತ್ರಚಿಕಿತ್ಸೆ ಮಾಡಿದೆ.

  ಇಂಡೋನೇಷಿಯಾದ 4 ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

  ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಧೆಯಲ್ಲಿ ಇಂಡೋನೇಷಿಯಾ ದೇಶದ ನಾಲ್ಕು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ನಾಲ್ಕರಲ್ಲಿ ಮೂರು ಮಕ್ಕಳು ಹುಟ್ಟಿನಿಂದ ಬಂದ ಸಂಕೀರ್ಣ ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು 28 ವರ್ಷದ ಮಹಿಳೆ ಹೃದಯದ ಕವಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿತ್ತು.

  Sri Jayadeva Institute of Cardiovascular Sciences and Research Indonesia 4 children successful surgery
  ಸಾಂದರ್ಭಿಕ ಚಿತ್ರ


  ಇಂಡೋನೇಷಿಯ, ಮಲೇಶಿಯಾದ ವೈದ್ಯರುಗಳು ಹಿಂದೆ ಸರಿದಿದ್ದರು 

  ಮೊದಲಿಗೆ ಸದರಿ ಮಕ್ಕಳನ್ನು ತಪಾಸಣೆ ಮಾಡುತ್ತಿದ್ದ, ಇಂಡೋನೇಷಿಯ ಮತ್ತು ಮಲೇಶಿಯಾದ ವೈದ್ಯರುಗಳು ರೋಗದ ಸಂಕೀರ್ಣತೆ ಮತ್ತು ಅಪಾಯವನ್ನು ಗಮನಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಹಿಂಜರಿದಿದ್ದರು. ಆದ್ರೆ ಆ ಮಕ್ಕಳಿಗೆ ಬೆಂಗಳೂರಿನಲ್ಲಿ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ.

  ಇದನ್ನೂ ಓದಿ: Dr CN Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ Dr ಮಂಜುನಾಥ್ ಮುಂದುವರೆಯಲಿ; ಸರ್ಕಾರಕ್ಕೆ ವೈದ್ಯರ ಪತ್ರ

  ಕೂಲಿ ಕಾರ್ಮಿಕರಾಗಿದ್ದ ಮಕ್ಕಳು

  ಎಲ್ಲಾ ನಾಲ್ಕು ರೋಗಿಗಳು ಮೂಲತಃ ಇಂಡೋನೇಷಿಯ ದೇಶದ ಉತ್ತರ ಸುಮತ್ರ ಪ್ರಾವಿನ್ಸ್‍ನ ಮೇಡನ್ ನಗರದವರಾಗಿದ್ದು, ಬಡ ಕುಟುಂಬದ ಕೂಲಿ ಕಾರ್ಮಿಕರಾಗಿರುತ್ತಾರೆ.

  ಇಂಡೋನೇಷಿಯಾದ ರೋಟರಿಯವರು, ಬೆಂಗಳೂರಿನ ಅಂತರಾಷ್ಟ್ರೀಯ ರೋಟರಿ 3190 ಮತ್ತು ನೀಡಿ ಹಾರ್ಟ್ ಫೌಂಡೇಷನ್ನಿನ ರೋಟೇರಿಯನ್ ಶ್ರೀ. ಒ.ಪಿ.ಖನ್ನಾ ಮತ್ತು ಶ್ರೀ.ರಾಜೇಂದ್ರ ರೈರವರು ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿ ಮಕ್ಕಳ ಎಲ್ಲಾ ವೈದ್ಯಕೀಯ ದಾಖಲಾತಿಗಳನ್ನು ನಮ್ಮ ಸಂಸ್ಥೆಗೆ ಕಳುಹಿಸಿ, ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ ಅಭಿಪ್ರಾಯವನ್ನು ಪಡೆದುಕೊಂಡರು ಎಂದು ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದ್ದಾರೆ.

  ಜುಲೈ ತಿಂಗಳಲ್ಲಿ ದಾಖಲಾಗಿದ್ದ ರೋಗಿಗಳು

  ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅವರು ಜುಲೈ ತಿಂಗಳಿನಲ್ಲಿ ಬರಲು ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಧೆಯ ವೈದ್ಯರಾದ ಡಾ. ಪಿ.ಎಸ್.ಸೀತಾರಾಮ್ ಭಟ್,
  ಡಾ. ದಿವ್ಯಾ, ಡಾ.ಜಯರಂಗನಾಥ್ ಹಾಗು ಡಾ.ಪ್ರಭಾಕರ್ ಮತ್ತು ಇತರೆ ಸಹ ವೈದ್ಯರು ಮತ್ತು ಸಿಬ್ಬಂದಿ ಸಹಕಾರದೊಂದಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

  ಇದನ್ನೂ ಓದಿ: Afghanistan: ಕಾಬೂಲ್‌ನ ಮಸೀದಿಯಲ್ಲಿ ಸ್ಫೋಟ, 20 ಸಾವು, 50 ಮಂದಿಗೆ ಗಾಯ!

  ನಿರ್ದೇಶಕರಾದ ಡಾ. ಸಿ.ಎನ್.ಮಂಜುನಾಥ್‍ರವರ ಹೇಳಿದ್ದೇನು?

  ಸಂಸ್ಧೆಯ ನಿರ್ದೇಶಕರಾದ ಡಾ. ಸಿ.ಎನ್.ಮಂಜುನಾಥ್‍ರವರ ಅಭಿಪ್ರಾಯದಂತೆ ಈ ಕಾಯಿಲೆ ಜನಿಸಿದ ಪ್ರತಿ 1000 ಮಕ್ಕಳಲ್ಲಿ 6-7 ಮಕ್ಕಳಿಗೆ ಸಂಕೀರ್ಣ ಹೃದ್ರೋಗ ಕಾಯಿಲೆಗಳಾದ, ಹೃದಯದಲ್ಲಿ ರಂಧ್ರ ಮತ್ತು ಸಂಕುಚಿತಗೊಂಡ ಹೃದಯ ಕವಾಟದ ಕಾಯಿಲೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಹೃದಯ ರಂಧ್ರ್ರದ ರೋಗಿಗಳಲ್ಲಿ ಜ್ವರ, ಕೆಮ್ಮು, ನೆಗಡಿ, ನಿಮೋನಿಯಾ ಕಾಯಿಲೆಗಳಿಗೆ ಒಳಪಡುವುದು ಸಾಮಾನ್ಯವಾಗಿರುತ್ತದೆ.

  Sri Jayadeva Institute, Sri jayadeva institute of cardiovascular sciences and research, Dr CN Manjunath jayadeva hospital, ಶ್ರೀ ಜಯದೇವ  ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಇಂಡೋನೇಷಿಯಾದ  ಮಕ್ಕಳಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ, ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್‍, Kannada news, Karnataka news,
  ನಿರ್ದೇಶಕರಾದ ಡಾ. ಸಿ.ಎನ್.ಮಂಜುನಾಥ್‍


  ಬೆಳವಣಿಗೆಯಲ್ಲಿ ಕುಂಠಿತ ಹಾಗೂ ಚರ್ಮ ಮತ್ತು ಉಗುರು ನೀಲಿ ವರ್ಣಕ್ಕೆ ತಿರುಗುವುದು ಮತ್ತು ತೂಕದಲ್ಲಿ ಕುಂಠಿತ ಉಂಟಾಗುವುದು ಸಾಮಾನ್ಯವಾಗಿರುತ್ತೆ. ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗಿದೆ.

  ಎಲ್ಲಾ ಮಕ್ಕಳು ಯಾವುದೇ ಅಡತಡೆ ಇಲ್ಲದೆ ಗುಣಮುಖರಾಗಿದ್ದು, ಅವರ ಪೋಷಕರು ಮತ್ತು ಇಂಡೋನೇಷಿಯಾ ರೋಟರಿ ಸದಸ್ಯರು ಆಸ್ಪತ್ರೆಯ ಸೌಲಭ್ಯ, ಉಪಚಾರ, ಸಿಬ್ಬಂದಿಯ ಸಹಕಾರ ಮತ್ತು ಕೈಗೆಟಕುವ ದರದ ಗುಣಮಟ್ಟದ ಚಿಕಿತ್ಸೆಯನ್ನು ಸ್ಮರಿಸಿದ್ದಾರೆ.

  ಗುಣಮುಖರಾಗಿರುವ ಎಲ್ಲಾ ಮಕ್ಕಳು ಸದ್ಯದಲ್ಲೇ ತಮ್ಮ ದೇಶಕ್ಕೆ ಮರಳಲಿದ್ದಾರೆ ಎಂದು ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರು ತಿಳಿಸಿದ್ದಾರೆ.
  Published by:Savitha Savitha
  First published: