ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 600 ಕೋಟಿಗೂ ಹೆಚ್ಚು ಎನ್​ಪಿಎ; ಆರ್​ಬಿಐನಿಂದ ನಿರ್ಬಂಧ; ಆತಂಕದಲ್ಲಿ ಗ್ರಾಹಕರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಜಾಂಚಿ ಹಾಗೂ ಅಖಿಲ ಭಾರತ ಕರ್ನಾಟಕ ಮಾಧ್ವ ಮಹಾಮಂಡಲ ಅಧ್ಯಕ್ಷ ಡಾ. ರಾಮಕೃಷ್ಣ ಅವರು ಗುರು ರಾಘವೇಂದ್ರ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

news18
Updated:January 12, 2020, 5:38 PM IST
ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ 600 ಕೋಟಿಗೂ ಹೆಚ್ಚು ಎನ್​ಪಿಎ; ಆರ್​ಬಿಐನಿಂದ ನಿರ್ಬಂಧ; ಆತಂಕದಲ್ಲಿ ಗ್ರಾಹಕರು
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್
  • News18
  • Last Updated: January 12, 2020, 5:38 PM IST
  • Share this:
ಬೆಂಗಳೂರು(ಜ. 12): ಬ್ಯಾಂಕಿಂಗ್ ಕ್ಷೇತ್ರದ ಶೋಚನೀಯ ಸ್ಥಿತಿಗೆ ಕೈಗನ್ನಡಿಯಂತೆ ಮತ್ತೊಂದು ಬ್ಯಾಂಕು ನಷ್ಟದಲ್ಲಿ ಮುಳುಗಿಹೋಗುತ್ತಿದೆ. ನಗರದ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಮುಖ್ಯ ಕಚೇರಿ ಇರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ ಅಂಕುಶ ಹಾಕಿದ್ದು ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ. ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದೆ. ಇದು ಆ ಬ್ಯಾಂಕ್​ನ ಗ್ರಾಹಕರಿಗೆ ಚಿಂತೆಗೀಡು ಮಾಡಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಂಸ್ಥೆಯು ನಗರದ ವಿವಿಧೆಡೆ 12 ಬ್ರ್ಯಾಂಚ್​ಗಳನ್ನ ಹೊಂದಿದೆ. ಆಕರ್ಷಕ ಬಡ್ಡಿ ದರ ಆಫರ್ ಕೊಟ್ಟಿರುವ ಹಿನ್ನೆಲೆಯಲ್ಲಿ ಬ್ಯಾಂಕ್​ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಬರೋಬ್ಬರಿ 2,400 ಕೋಟಿ ರೂ ಇದೆ. ಈ ಪೈಕಿ 1,700 ಕೋಟಿಯಷ್ಟು ಹಣವನ್ನು ಬ್ಯಾಂಕು ಸಾಲವಾಗಿ ನೀಡಿದೆ. ಆದರೆ, 600 ಕೋಟಿಗೂ ಹೆಚ್ಚು ಮೊತ್ತದ ಹಣವು ಎನ್​ಪಿಎ ಆಗಿ ನಿಂತುಹೋಗಿದೆ. ಈಗ ಮಧ್ಯಪ್ರವೇಶಿಸಿರುವ ಆರ್​ಬಿಐ, ಬ್ಯಾಂಕ್ ಚೇತರಿಸಿಕೊಳ್ಳುವವರೆಗೂ ತಾನು ನಿರ್ದಿಷ್ಟಪಡಿಸಿದ ನಿರ್ಬಂಧಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕೆಂದು ಸೂಚಿಸಿದೆ.

ಇದನ್ನೂ ಓದಿ: ಇದು ಪರಾಕ್ರಮಿಗಳ ಭೂಮಿಯಲ್ಲ: ಕನ್ನಡ ನೆಲದಲ್ಲೇ ಕರ್ನಾಟಕ ತೆಗಳಿದ ಮರಾಠಿ ಸಾಹಿತಿ

ತನ್ನ ಅನುಮತಿ ಇಲ್ಲದೇ ಯಾವುದೇ ಹೊಸ ಸಾಲ ನೀಡುವಂತಿಲ್ಲ; ಇರುವ ಸಾಲ ನವೀಕರಿಸುವಂತಿಲ್ಲ; ಹೊಸ ಠೇವಣಿ ಸ್ವೀಕರಿಸುವಂತಿಲ್ಲ; ಪೂರ್ವಾನುಮತಿ ಇಲ್ಲದೇ ಯಾವುದೇ ಆಸ್ತಿ ವ್ಯವಹಾರ ಮಾಡುವಂತಿಲ್ಲ ಎಂಬಿತ್ಯಾದಿ ನಿರ್ಬಂಧಗಳನ್ನು ಆರ್​ಬಿಐ ವಿಧಿಸಿದೆ. ಈಗ ಆರ್​ಬಿಐನ ಅಂಕುಶದಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಂಸ್ಥೆ ಕಾರ್ಯನಿರ್ವಹಿಸಬೇಕಾಗಿದೆ. ನಿರ್ಬಂಧಗಳು ಆರು ತಿಂಗಳ ನಂತರ ಮುಂದುವರಿಯಬಹುದು ಅಥವಾ ಆರು ತಿಂಗಳೊಳಗೇ ಮುಗಿಯಬಹುದು. ಬ್ಯಾಂಕ್​ನ ಪರಿಸ್ಥಿತಿಗೆ ಅನುಗುಣವಾಗಿ ಆರ್​ಬಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಜಾಂಚಿ ಹಾಗೂ ಅಖಿಲ ಭಾರತ ಕರ್ನಾಟಕ ಮಾಧ್ವ ಮಹಾಮಂಡಲ ಅಧ್ಯಕ್ಷ ಡಾ. ರಾಮಕೃಷ್ಣ ಅವರು ಗುರು ರಾಘವೇಂದ್ರ ಸಹಕಾರ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ