ಶ್ರೀರಾಮುಲು ನಮ್ಮ ಮುಂದಿನ ಸಿಎಂ!; ಶಾಸಕ ವಿ ಸೋಮಣ್ಣ ಬಿಟ್ಟರು ಬಾಂಬ್!

G Hareeshkumar | news18
Updated:October 26, 2018, 3:57 PM IST
ಶ್ರೀರಾಮುಲು ನಮ್ಮ ಮುಂದಿನ ಸಿಎಂ!; ಶಾಸಕ ವಿ ಸೋಮಣ್ಣ ಬಿಟ್ಟರು ಬಾಂಬ್!
  • Advertorial
  • Last Updated: October 26, 2018, 3:57 PM IST
  • Share this:
- ಶರಣು ಹಂಪಿ,  ನ್ಯೂಸ್18 ಕನ್ನಡ 

ಬಳ್ಳಾರಿ ( ಅ.26) :  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಶಾಸಕ ಶ್ರೀರಾಮುಲು ಡಿಸಿಎಂ ಆಗ್ತಾರೆ ಅನ್ನೋ ಮಾತಿತ್ತು. ಆದರೆ ಇದೀಗ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಎಸ್ ವೈ ಅಲ್ಲ ಬಿ ಶ್ರೀರಾಮುಲು ಸಿಎಂ ಆಗ್ತಾರಂತೆ. ಇದೇನಪ್ಪಾ ಹೀಗಂತೀರಾ. ಶ್ರೀರಾಮುಲು ನಮ್ಮ ಸಿಎಂ ಎಂದು ಅಂದವರು ಯಾರು ಅನ್ನೋದನ್ನು ವರದಿ ಇಲ್ಲಿದೆ ಓದಿ...

ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಬಿಎಸ್ ವೈ ನಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಅಂತಾ ಬಿಜೆಪಿ ಘೋಷಣೆ ಮಾಡಿತ್ತು. ಬಿಜೆಪಿ ಸಹ ಅಧಿಕಾರದ ಸನಿಹಕ್ಕೂ ಬಂದೂ ಅಧಿಕಾರದಿಂದ ವಂಚಿತವಾಗಿತೂ. ಆದ್ರೆ ಇದೀಗ ಬಿಜೆಪಿ ನಾಯಕರೊಬ್ಬರೇ ನಮ್ಮ ಮುಂದಿನ ಸಿಎಂ ಅಭ್ಯರ್ಥಿ ಶ್ರೀರಾಮುಲು ಅಂತಿದ್ದಾರೆ ನೋಡಿ. ಇನ್ನೂ ವಿಶೇಷ ಅಂದ್ರೆ ಒಂದು ಕಾಲದಲ್ಲಿ ಬಿಎಸ್ ವೈರ ಪರಮಾಪ್ತ ರಾಗಿದ್ದವರೇ ನಮ್ಮ ಮುಂದಿನ ಸಿಎಂ ಬಿಎಸ್ ವೈ ಅಲ್ಲ ಮುಂದಿನ ನಮ್ಮ ಸಿಎಂ ಶ್ರೀರಾಮುಲು ಅಂತಾ ಭವಿಷ್ಯ ನುಡಿದಿದ್ದಾರೆ

ಇದನ್ನು ಓದಿ :  ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು, ಸಮ್ಮಿಶ್ರ ಸರ್ಕಾರ ಯಾವಾಗ ಬೀಳುತ್ತೊ ಗೊತ್ತಿಲ್ಲ: ಶೋಭಾ ಕರಂದ್ಲಾಜೆ

ಬಳ್ಳಾರಿ ಲೋಕಸಭಾ ಉಪಚುನಾವಣೆ ಯ ಪ್ರಚಾರಕ್ಕೆ ಆಗಮಿಸಿರುವ ಶಾಸಕ, ಮಾಜಿ ಸಚಿವ ವಿ ಸೋಮಣ್ಣ ಇದೀಗ ಪ್ರಚಾರದ ವೇಳೆಯಲ್ಲಿ ಬಿ ಶ್ರೀರಾಮುಲುರೇ ನಮ್ಮ ಮುಂದಿನ ಸಿಎಂ ಅಂತಿದ್ದಾರೆ. ಬಳ್ಳಾರಿಯಲ್ಲಿ ಕಳೆದ ರಾತ್ರಿ ಇಂದಿರಾ ನಗರ, ಬತ್ರಿ ಪ್ರದೇಶದಲ್ಲಿ ಪ್ರಚಾರ ನಡೆಸಿದ ಸೋಮಣ್ಣ, ಶಾಸಕ ಶ್ರೀರಾಮುಲು ಮುಂದೆ ಸಿಎಂ ಆಗ್ತಾರೆ ಅಂತಾ ಸ್ವತಃ ಕೇದಾರನಾಥ ಸ್ವಾಮೀಜಿಗಳೆ ಭವಿಷ್ಯ ನುಡಿದಿದ್ದಾರೆ ಎಂದು ಹೇಳುತ್ತಿದ್ದಾರೆ.

ಶಾಸಕ ಶ್ರೀರಾಮುಲು ರೊಂದಿಗೆ ಪ್ರಚಾರ ನಡೆಸುವ ವೇಳೆಯೇ ಶಾಸಕ ಶ್ರೀರಾಮುಲುರೇ ನಮ್ಮ ಮುಂದಿನ ಸಿಎಂ ಅಂತಿದ್ರೂ ಶ್ರೀರಾಮುಲು ಮಾತ್ರ ಸುಮ್ಮನೇ ಇರುವುದು ಇದು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ನಡೆಸಿದ ತಂತ್ರವಾ ಎನ್ನುವ ಸಂಶಯ ಮೂಡಿಸಿದೆ. ಅಲ್ಲದೇ ಶಾಸಕ ಶ್ರೀರಾಮುಲು ಸಹ ಸುಮ್ಮನಿರುವುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಶ್ರೀರಾಮುಲು ಯಾವುದೇ ಹೇಳಿಕೆ ನೀಡಲು ಮುಂದಾಗುತ್ತಿಲ್ಲ. ಆದರೆ ಸಚಿವ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ, ಪ್ರಧಾನಿಮಂತ್ರಿಯಾಗಲಿ ಎಂದು ಸಂತೋಷ ಎಂದೇಳುತ್ತಿದ್ದಾರೆ.

ಇದನ್ನು ಓದಿ :  'ಯಡಿಯೂರಪ್ಪ ಸುಳ್ಳುಗಾರ, ಈಶ್ವರಪ್ಪನಿಗೆ ಮೆದುಳೇ ಇಲ್ಲ'; ಮಾಜಿ ಸಿಎಂ ಸಿದ್ದರಾಮಯ್ಯಇದುವರೆಗೂ ಬಳ್ಳಾರಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ಏಕಾಂಗಿಯಾಗಿದ್ದ ಶಾಸಕ ಶ್ರೀರಾಮುಲುಗೆ ಒಂದೆಡೆ ಶಾಸಕ ಸೋಮಣ್ಣ ಬೆಂಬಲ ಆನೆಬಲ ನೀಡಿದ್ರೆ ಇನ್ನೊಂದೆಡೆ ಬಿಎಸ್ ವೈ ರನ್ನ ಸಿಎಂ ಮಾಡೋ ಆಸೆ ಹೊಂದಿರುವ ಶ್ರೀರಾಮುಲುಗೆ ಸೋಮಣ್ಣ ಹೇಳಿಕೆ ಇರಿಸುಮುರಿಸು ತಂದಿದೆ. ಸೋಮಣ್ಣ ಹೇಳಿಕೆ ಚುನಾವಣಾ ತಂತ್ರವೋ ಇಲ್ಲವೋ ಬಿಎಸ್ ವೈ ಮೇಲಿನ ಮುನಿಸಿಗೆ ಹೇಳಿದ ಸತ್ಯವೋ ಅನ್ನೋದು ಖಚಿತವಾಗಬೇಕಿದೆ. 
First published:October 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ