Bengaluru: ಮನೆ ಮನೆಗಳಲ್ಲಿ ಮೊಳಗಿತು ರಾಮ ಜಪ, ಹನುಮಾನ್ ಚಾಲೀಸ್ ಮಂತ್ರ!

ಅನಧಿಕೃತ ಮಸೀದಿ ಮೇಲೆ ಇರುವ ಲೌಡ್ ಸ್ಪೀಕರ್ ತೆರವುಗೆ ಶ್ರೀರಾಮ ಸೇನೆ ಕರೆ ನೀಡಿತ್ತು. ಆದ್ರೆ ಸರ್ಕಾರ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದ ವೇಳೆ ಇಂದು ಬೆಳಗ್ಗೆ ಆಜಾನ್ ಕೂಗುವ ವೇಳೆ ದೇವಸ್ಥಾನದಲ್ಲಿ ಮೈಕ್ ಇಟ್ಟು ರಾಮ ತಾರಕ, ಹನುಮಾನ್ ಚಾಲೀಸ್ ಮಂತ್ರ ಪಠಣೆಗೆ ಹಿಂದೂ ಸಂಘಟನೆಗಳು ರೆಡಿಯಾಗಿದ್ರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಮೇ.10): ಆಜಾನ್​ಗೆ ಭಜನೆ ಕೂಗು ಅಭಿಯಾನ ಸಿಟಿಯ ದೇವಸ್ಥಾ‌ನಗಳಲ್ಲಿ ನಡೆಯಲಿಲ್ಲ.‌ ಶ್ರೀರಾಮ ಸೇನೆ ಕಾರ್ಯಕರ್ತರು ದೇವಸ್ಥಾ‌ನಲ್ಲಿ ಮೈಕ್ ಇಟ್ಟು ರಾಮ ತಾರಕ, ಹನುಮಾನ್ ಚಾಲೀಸ್ (Hanuman Chalisa) ಮಂತ್ರ ಪಠಣೆಗೆ ಮುಂದಾಗಿದ್ದ ವೇಳೆ ಪೋಲಿಸರು (Police) ಬಂಧಿಸಿದ್ರು. ಆದ್ರೆ ಮನೆ, ಮನೆಗಳಲ್ಲಿ ಕಳಿಸ್ವಾಮಿ ನೇತೃತ್ವದಲ್ಲಿ ರಾಮ ಜಪ ಜೋರಾಗಿ ಮೊಳಗಿತ್ತು. ಸರ್ಕಾರ ವಿರುದ್ಧ ಇಂದು ಹಿಂದೂ ಪರ ಸಂಘಟನೆಗಳು ಕೆಂಡ ಕರ್ತೀವಿ. ಆಕ್ರೋಶದ ಕಟ್ಟೆ ಹೊಡೆದಿದೆ. ನಮ್ಮ ದೇವಲಯಕ್ಕೆ (Temple) ನಮಗೆ ಎಂಟ್ರಿ ಇಲ್ಲ ಅಂದ್ರೆ ನಾವುಎಲ್ಲಿದ್ದೇವೆ ಎಂದು ಸರ್ಕಾರದ ವಿರುದ್ಧ ಬೆಂಕಿಯ ಚಂಡು ಹೊರಹಾಕಿದ್ದಾರೆ.

ಪೊಲೀಸರು ಅವಕಾಶ ಕೊಡಲಿಲಲ್ಲ

ಹೌದು ಅನಧಿಕೃತ ಮಸೀದಿ ಮೇಲೆ ಇರುವ ಲೌಡ್ ಸ್ಪೀಕರ್ ತೆರವುಗೆ ಶ್ರೀರಾಮ ಸೇನೆ ಕರೆ ನೀಡಿತ್ತು. ಆದ್ರೆ ಸರ್ಕಾರ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದ ವೇಳೆ ಇಂದು ಬೆಳಗ್ಗೆ ಆಜಾನ್ ಕೂಗುವ ವೇಳೆ ದೇವಸ್ಥಾನದಲ್ಲಿ ಮೈಕ್ ಇಟ್ಟು ರಾಮ ತಾರಕ, ಹನುಮಾನ್ ಚಾಲೀಸ್ ಮಂತ್ರ ಪಠಣೆಗೆ ಹಿಂದೂ ಸಂಘಟನೆಗಳು ರೆಡಿಯಾಗಿದ್ರು. ಆದ್ರೆ ಇದಕ್ಕೆ ಪೊಲೀಸರು ಮಾತ್ರ ಅನುವು ಮಾಡಿಕೊಡಲಿಲ್ಲ.

10ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರ ಬಂಧನ

ಇಂದು ಬೆಳಗ್ಗೆ 5 ಗಂಟೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿವೇಕನಗರ ಬಳಿ  ಆಂಜಿನೇಯ ದೇವಸ್ಥಾನದಲ್ಲಿ ಮೈಕ್ ಮುಖಾಂತರ ಹನುಮಾನ್ ಚಾಲೀಸ್ ಮಂತ್ರ ಜಪ ಮಾಡಲು ಮುಂದಾಗಿದ್ದ ವೇಳೆ 10ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರನ್ನ ಆಶೋಕ ನಗರ ಠಾಣೆಯ ಪೊಲೀಸರು ಬಂಧಿಸಿದ್ರು. ಈ ವೇಳೆ ಪೊಲೀಸರ ಮಧ್ಯೆ ವಾಗ್ವಾದ ಉಂಟಾಯಿತು.

ಇನ್ನೂ ಓದಿ: Morning Digest: ವಿಮಾನಕ್ಕೆ ಹಕ್ಕಿ ಡಿಕ್ಕಿ, ವಧು-ವರರೇ ಅದಲು ಬದಲು, ಚಿನ್ನದ ಬೆಲೆ ಏರಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

ಇನ್ನೂ ಬಂಧನ ನಂತ್ರ ಮಾತನಾಡಿದ  ಶ್ರೀರಾಮ ಸೇನೆ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಈ ಸರ್ಕಾರಕ್ಕೆ ದಿಕ್ಕಾರವಿರಲಿ. ಸುಪ್ರೀಂ ಕೋರ್ಟ್ ಆದೇಶವನ್ನ ಪಾಲಿಸಬೇಕು. ಆದ್ರೆ ಕೋರ್ಟಿನ ಆದೇಶ ಪಾಲನೆ ಮಾಡದವರಿಗೆ ಈ ಸರ್ಕಾರ ಸಪೋರ್ಟ್ ಮಾಡ್ತಿದೆ‌.‌ ಡಿ.ಜೆ ಹಳ್ಳಿಯಲ್ಲಿ ಗಲಭೆ ಮಾಡಿದಂತವರಿಗೆ ಬೆನ್ನಿಗೆ ನಿಂತಿದ್ದಾರೆ. ಸಂವಿಧಾನ ವಿರೋಧಿ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಆಕ್ರೊಶ ವ್ಯಕ್ತಪಡಿಸಿದ್ರು.

ಕಾಳಿಸ್ವಾಮಿಯಿಂದ ರಾಮತಾರಕ ಮಂತ್ರ ಪಠಣ ಮೂಲಕ ಚಾಲನೆರಾಮನಾಮ‌ ಜಪದಲ್ಲಿ ಅಜ್ಜಿ ಭಾಗಿಇತ್ತ ಮನೆ ಮನೆ ರಾಮ ಜಪವನ್ನ ಕಾಳಿಸ್ವಾಮಿ ಚಾಲನೆ ನೀಡಿದ್ರು. ನಗರದ ಉಳ್ಳಾಲ ಆರ್ ಟಿ ಓ ಬಳಿಯ ಹಿಂದೂ ಭಕ್ತರ ಮನೆಯಲ್ಲಿ ಬೆಳಗ್ಗೆ 5:30ಕ್ಕೆ ರಾಮ ಜಪ ಹಾಡಿದ್ರು. ಇನ್ನೂ ಋಷಿಕುಮಾರ ಸ್ವಾಮಿ ಜೊತೆ‌ ವೃದ್ದೆಯು ಭಾಗಿಯಾಗಿ ಹನುಮಾನ್ ಚಾಲೀಸ್ ಮಂತ್ರ ಪಠಿಸಿದ್ರು.‌

ಇದನ್ನೂ ಓದಿ: Belagavi: ಬೆಳಗಾವಿಯಿಂದ ಹೊರಟಿದ್ದ 187 ಪ್ರಯಾಣಿಕರಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ

ಆಜಾನ್ ವಿರುದ್ಧ ಹಿಂದು ಪರ ಸಂಘಟನೆಗಳ ಸಮರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮುಂದಿನ ಉಗ್ರ ಹೋರಾಟಕ್ಕೆ ಶ್ರೀರಾಮಸೇನೆ ಸಜ್ಜಾಗಿದೆ‌. ಹೀಗಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ನೇತೃತ್ವದಲ್ಲಿ ನಾಳೆ, ನಾಡಿದ್ದು, ಖಾಸಗಿ ಹೋಟೆಲ್ ನಲ್ಲಿ ಮಹ್ವದ ಸಭೆ ‌ನಡೆಯಲಿದೆ.

ಸಭೆಯಲ್ಲಿ 20ಕ್ಕೂ ಹೆಚ್ಚು ಹಿಂದುಪರ ಸಂಘಟನೆಗಳ ಮುಖಂಡರ ಭಾಗಿಯಾಗಲಿದ್ದು, ಮುಂದಿನ ಹೋರಾಟದ ಕುರಿತು ಚರ್ಚೆ ಮಾಡಲಿದೆ. ಒಟ್ನಲ್ಲಿ ಇನ್ನೂ ಧರ್ಮ ದಂಗಲ್ ಮುಂದುವರೆಯಲಿದ್ದು, ಇದು ಯಾವ ಮಟ್ಟಕ್ಕೆ ಮುಟ್ಟುತ್ತೋ. ಸರ್ಕಾರ ಅಭಿಯಾನವನ್ನ ಮಟ್ಟ ಹಾಕುತ್ತಾ ಎಂಬುದು ಕಾದು ನೋಡಬೇಕಾಗಿದೆ.
Published by:Divya D
First published: