ಬೆಂಗಳೂರು (ನ.24): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್ ಆರ್ ವಿಶ್ವನಾಥ್ಗೆ ಸರ್ಕಾರಗೆ ಸರ್ಕಾರ ಮತ್ತೊಂದು ಜವಾಬ್ದಾರಿ ನೀಡಿಲಾಗಿದೆ. ಈ ಹಿಂದೆ ಎಂಟಿಬಿ ನಾಗರಾಜ್ ಈ ಹುದ್ದೆಗೆ ಕಣ್ಣಿಟ್ಟಿದ್ದರು. ಈಗ ಅವರಿಗೆ ಮಂತ್ರಿ ಸ್ಥಾನ ಕೊಡಿಸುವ ಭರವಸೆ ನೀಡಲಾಗಿದ್ದು, ಈ ಹಿನ್ನಲೆ ಈ ಹುದ್ದೆ ವಿಶ್ವನಾಥ್ ಪಾಲಾಗಿದೆ ಎನ್ನಲಾಗಿದೆ. ಇನ್ನು ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ನೀಡಲಾಗಿದೆ. ಇದರ ಜೊತೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಂ ರುದ್ರೇಶ್ಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಅಗಿದೆ. ವಿಜಯೇಂದ್ರ ಪರಮಾಪ್ತರಾಗುರುವ ರಾಮನಗರದ ರುದ್ರೇಶ್ ಅವರನ್ನು ಕೆಆರ್ಐಡಿಎಲ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಉಪಚುನಾವಣೆಯಲ್ಲಿ ಸೋತಿದ್ದ ಮಾಜಿ ಶಾಸಕ ಎಂಟಿಬಿ ನಾಗರಾಜ್ ಈ ಹಿಂದೆ ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಲಾಭಾದಾಯಕ ಹುದ್ದೆಗಾಗಿ ಅವರು ಸಿಎಂ ಯಡಿಯೂರಪ್ಪ ಅವರ ಬಳಿ ಕೂಡ ಮನವಿ ಸಲ್ಲಿಸಿ, ಒತ್ತಡ ಹೇರಿದ್ದರು. ಅಲ್ಲದೇ ಈ ಹುದ್ದೆ ಪಡೆಯಲು ಇರುವ ಕಾನೂನು ತೊಡಗಿನ ಬಗ್ಗೆ ಕೂಡ ನಿವೃತ್ತ ನ್ಯಾಯಾಧೀಶರ ಬಳಿ ಚರ್ಚಿಸಿದ್ದರು. ಇದೀಗ ಸರ್ಕಾರ ವಿಶ್ವನಾಥ್ಗೆ ಸ್ಥಾನ ನೀಡಿದೆ.
ಇದನ್ನು ಓದಿ: ಲಸಿಕೆ ವಿತರಣೆ ಕೆಲಸಕ್ಕೆ ಚುನಾವಣೆ ಮಾದರಿಯಲ್ಲಿ ಸಜ್ಜಾಗಬೇಕು: ರಾಜ್ಯಗಳಿಗೆ ಪ್ರಧಾನಿ ಮೋದಿ ಕರೆ
ಇತ್ತೀಚೆಗೆ ಸರ್ಕಾರ ರಚಿಸಿರುವ ನೂತನ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಬಿ ಎಸ್ ಪರಮಶಿವಯ್ಯ ನೇಮಿಸಿ ಆದೇಶ ನೀಡಲಾಗಿದೆ. ನಿನ್ನೆಯಷ್ಟೇ ನಿಗಮಕ್ಕೆ 500 ಕೋಟಿ ರೂ ನೀಡಿ ಆದೇಶಿಸಿತ್ತು. ಇಂದು ನಿಮಗಕ್ಕೆ ಅಧ್ಯಕ್ಷರ ನೇಮಕ ಮಾಡಿದೆ.
ಬಿ.ವೈ ವಿಜಯೇಂದ್ರ ಆಪ್ತ ತಮ್ಮೇಶಗೌಡಗೆ ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಎಲ್.ಆರ್.ಮಹದೇವಸ್ವಾಮಿ ನೇಮಕ ಮಾಡಲಾಗಿದೆ.
ಇದರ ಜೊತೆಗೆ ಹಲವು ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು. ಆ ಪಟ್ಟಿ ಇಂತಿದೆ.
- ಡಾ ಬಿ ಆರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹೈಹೊಳೆ ಶಾಸಕ ದುರ್ಯೋಧನ ನೇಮಕ
- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿ ಹೆಚ್ ಹನುಮಂತಪ್ಪ ನೇಮಕ
- ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿ ಎಂ ರಾಮಚಂದ್ರಪ್ಪ ನೇಮಕ
- ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುನಿಕೃಷ್ಣ ನೇಮಕ
- ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಘು ಆರ್ ನೇಮಕ
- ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ಅಧ್ಯಕ್ಷರಾಗಿ ಬಾಬು ಪತ್ತಾರ್ ನೇಮಕ
- ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಜಿ ಕೆ ಗಿರೀಶ್ ಉಪ್ಪಾರ್ ನೇಮಕ
- ಸವಿತಾ ಸಮಾಜ ಅಭಿವೃದ್ಧಿ ಅಧ್ಯಕ್ಷರಾಗಿ ಎಸ್ ನರೇಶ್ ಕುಮಾರ್ ನೇಮಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ