ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ: ಎಸ್.ಆರ್. ಪಾಟೀಲ್ ಪ್ರತಿಪಾದನೆ

ಮಕ್ಕಳು ಮತ್ತು ಮಹಿಳೆಯರು ಮಾರಾಟದ ಸರಕಾಗಿದ್ಧಾರೆ. ಇಂಥ ಪ್ರಕರಣಗಳಲ್ಲಿ ಎಫ್​ಐಆರ್, ಚಾರ್ಜ್ ಶೀಟ್ ಹಾಕಬೇಕು ಎಂದು ಪರಿಷತ್ ವಿಪಕ್ಷ ನಾಯಕರು ಆಗ್ರಹಿಸಿದರು.

news18-kannada
Updated:March 19, 2020, 12:48 PM IST
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ: ಎಸ್.ಆರ್. ಪಾಟೀಲ್ ಪ್ರತಿಪಾದನೆ
ಎಸ್.ಆರ್. ಪಾಟೀಲ್
  • Share this:
ಬೆಂಗಳೂರು(ಮಾ. 19): ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದೆ. ಇದನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹೇಳಿದರು. ಇಂದು ನಡೆದ ವಿಧಾನಪರಿಷತ್ ಕಲಾಪದ ವೇಳೆ ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ ಎಂದರು. ಹಾಗೆಯೇ, ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಬೆಳಕು ಚೆಲ್ಲಿದರು.

ಮಕ್ಕಳು ಮತ್ತು ಮಹಿಳೆಯರು ಮಾರಾಟದ ಸರಕಾಗಿದ್ಧಾರೆ. ಇಂಥ ಪ್ರಕರಣಗಳಲ್ಲಿ ಎಫ್​ಐಆರ್, ಚಾರ್ಜ್ ಶೀಟ್ ಹಾಕಬೇಕು ಎಂದು ಪರಿಷತ್ ವಿಪಕ್ಷ ನಾಯಕರು ಆಗ್ರಹಿಸಿದರು.

ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡುವುದು ಸರಿಯಲ್ಲ. ಲಾಕಪ್ ಡೆತ್ ಪ್ರಕರಣಗಳು ಆಗುತ್ತಿವೆ ಎಂದೂ ಅವರು ಖೇದ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ‘ಅರೆಸ್ಟ್ ಕೊರೊನಾ’ ಅಭಿಯಾನ; ಸೋಂಕು ಹರಡದಂತೆ ಜನಜಾಗೃತಿ

ದೇಶದಲ್ಲಿ ದಲಿತರ ಮೇಲೆ ಹಲ್ಲೆಗಳಾಗುತ್ತಿವೆ. 77 ನಿಮಿಷಕ್ಕೆ ಒಬ್ಬ ಮಹಿಳೆ ಸಾಯುತ್ತಿದ್ಧಾರೆ. ಪ್ರತೀ 6 ಗಂಟೆಗೆ ಒಬ್ಬ ವಿವಾಹಿತ ಮಹಿಳೆ ಸಾಯುತ್ತಿದ್ದಾಳೆ. ಪ್ರತೀ 47 ನಿಮಿಷಕ್ಕೆ ಒಂದು ಅತ್ಯಾಚಾರ ಆಗುತ್ತಿದೆ. ಇವುಗಳ ಬಗ್ಗೆ ವರದಿ ಇದೆ. ತಾನು ದಾಖಲೆ ಇಟ್ಟುಕೊಂಡು ಈ ವಿಚಾರಗಳನ್ನ ತಿಳಿಸುತ್ತಿದ್ದೇನೆ ಎಂದು ಪರಿಷತ್ ಕಲಾಪದ ವೇಳೆ ಎಸ್.ಆರ್. ಪಾಟೀಲ್ ಹೇಳಿದರು.

First published: March 19, 2020, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading