ಬಾಗಲಕೋಟೆ (ಅಕ್ಟೋಬರ್ 05): ಈಗ ರಾಜ್ಯದಲ್ಲಿ ಬೈ ಎಲೆಕ್ಷನ್ ಬಂದಿದೆ. ಬಿಜೆಪಿಯವರು ದುರುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷರನ್ನು ವಿಚಲಿತ ಮಾಡೋದಕ್ಕೆ ದಾಳಿ ಮಾಡಿಸಿದ್ದಾರೆ. ಈಗಾಗಲೇ ಡಿಕೆಶಿ ಮೇಲೆ ಈ ಹಿಂದೆ ಐಟಿ,ಇಡಿ , ಸಿಬಿಐ ದಾಳಿ ಮಾಡಿ ವಿನಾಕಾರಣ ಕಸ್ಟಡಿಯಲ್ಲಿಟ್ಟಿದ್ದರು . ಇದನ್ನು ಇಡೀ ದೇಶ, ರಾಜ್ಯದ ಜನ ನೋಡಿದ್ದಾರೆ. ಅತ್ಯಂತ ಮಹತ್ವದ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲೋದಕ್ಕೆ ದುಸ್ತರ ಅನಿಸಿದೆ. ಆ ಕಾರಣಕ್ಕೆ ಕಾಂಗ್ರೆಸ್ ನಾಯಕರ ಡಿಮೋರಲೈಜ್ ಮಾಡುವ ದುರುದ್ದೇಶಪೂರಿತ ಸಿಬಿಐ ದಾಳಿ ಮಾಡಿದ್ದು. ಕಾಂಗ್ರೆಸ್ ನವರನ್ನು ಅಂಜಿಸುವದಕ್ಕೆ ಕೈಹಾಕಿದ್ದಾರೆ. ಇದರಲ್ಲಿ ಬಿಜೆಪಿಯವರು ಯಶಸ್ವಿಯಾಗುವುದಿಲ್ಲ ಎಂದು ಬಾಗಲಕೋಟೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ ಆರ್ ಪಾಟೀಲ್, ಸ್ವಾತಂತ್ರ್ಯ ಭಾರತದ ಸರ್ಕಾರ ಯಾವುದೇ ಸಂವಿಧಾನಾತ್ಮಕ ಸಂಸ್ಥೆಗಳಿಗೆ ಯಾರೂ ಕೈ ಹಾಕಿರಲಿಲ್ಲ. ಬಿಜೆಪಿಯವರು ದೇಶದ ಇತಿಹಾಸದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಪ್ರಜಾಪ್ರಭುತ್ವ ದುರ್ಬಲಗೊಳಿಸಿ, ಎದುರಾಳಿಗಳ ಮೇಲೆ ಸಿಬಿಐ ದಾಳಿ ಮಾಡುವುದಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ನವರು ಕೂಡಾ ಐಟಿ, ಸಿಬಿಐ, ಯಾವ ದಾಳಿಯೂ ಎದುರಿಸುವುದಕ್ಕೆ ಸಮರ್ಥರಿದ್ದೇವೆ ಎಂದು ಹೇಳಿದರು.
ಉ.ಪ್ರ. ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಯಾದಗಿರಿಯಲ್ಲಿ ಭುಗಿಲೆದ್ದ ಅಕ್ರೋಶ; ಸುರಪುರ ನಗರ ಬಂದ್
ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದವರು ಈ ರೀತಿಯಾಗಿ ಸಂವಿಧಾನಾತ್ಮಕ ಸಂಸ್ಥೆ ದುರುಪಯೋಗ ಮಾಡಿಕೊಳ್ಳಬಾರದು. ವಿಪಕ್ಷದವರನ್ನು ಅಂಜಿಸುವಂತಹ ಕೆಲಸ ಮಾಡಬಾರದು. ಸಂವಿಧಾನಾತ್ಮಕ ಸಂಸ್ಥೆ ದುರುಪಯೋಗಪಡಿಸಿಕೊಂಡು ದಾಳಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನವರನ್ನು ಹೆದರಿಸ್ತೀವಿ ಎಂದುಕೊಂಡಿದ್ದರೆ ಅದು ಹಗಲುಗನಸು ಎಂದು ವ್ಯಂಗ್ಯವಾಡಿದರು.
ಬೈ ಎಲೆಕ್ಷನ್ ನಲ್ಲಿ ಗೆಲ್ಲಲು ಈ ರೀತಿ ಮಾಡ್ತಿದ್ದಾರೆ. ರೀತಿಯಾಗಿ ಮಾಡಿದ್ರೆ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲೋದಿಲ್ಲ. ಅವರ ಸೋಲಿಗೆ ಇದು ಪ್ರಾರಂಭ. ಜನ ಇದನ್ನೆಲ್ಲಾ ನೋಡುತ್ತಿದ್ದಾರೆ. ಬಿಜೆಪಿಯವರು ಚಾಪೆ ಕೆಳಗೆ ತೂರಿದರೆ, ಜನ ರಂಗೋಲಿ ಕೆಳಗೆ ತೂರುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನ ನಿಶ್ಚಿತವಾಗಿಯೂ ಬಿಜೆಪಿ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ