ಸಚಿವರ ಮುನಿಸಿನ ನಡುವೆ ಬಿಜೆಪಿ ಸರ್ಕಾರ ನಡೆಸುವುದು ಬಹಳ ಕಷ್ಟ; ಎಸ್​ ಆರ್​ ಪಾಟೀಲ್​

ಸರ್ಕಾರ ಕೋವಿಡ್​ ನಿಯಂತ್ರಣದ ಬಗ್ಗೆ ಕ್ರಮ ವಹಿಸಬೇಕು. ಆದರೆ, ಅದನ್ನು ಬಿಟ್ಟು ಸರ್ಕಾರದಲ್ಲಿ ಶಾಸಕರು ಮಂತ್ರಿ ಸ್ಥಾನಕ್ಕೆ ಲಾಬಿಗೆ ಮುಂದಾಗಿದ್ದಾರೆ

ಎಸ್​ ಆರ್​ ಪಾಟೀಲ್​

ಎಸ್​ ಆರ್​ ಪಾಟೀಲ್​

 • Share this:
  ಬಾಗಲಕೋಟೆ (ಆ. 22): ಜನರು ಕೋವಿಡ್​ ಎರಡನೇ ಅಲೆಯಿಂದ ತತ್ತರಿಸುತ್ತಿದ್ದರೆ ಬಿಜೆಪಿ ಮಾತ್ರ ಖುರ್ಚಿಗಾಗಿ ಪರಿತಪಿಸುತ್ತಿತ್ತು. ಜನತೆಯ ದುಃಖ ದುಮ್ಮಾನಗಳಿಗೆ ಬಿಜೆಪಿ ಸರ್ಕಾರ ಧಾವಿಸುವುದು ಬಿಟ್ಟು,  ಕೇವಲ ಅಧಿಕಾರ ದಾಹವನ್ನು ತೀರಿಸಿಕೊಳ್ಳುತ್ತಿತ್ತು. ಇಂತಹ ಸರ್ಕಾರವನ್ನು ಜನರು ಎಂದು ಕಂಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಿಧಾನ ಪರಿಷತ್​ ವಿಪಕ್ಷ ನಾಯಕ ಎಸ್​ಆರ್​ ಪಾಟೀಲ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, 2ನೇ ಅಲೆಯಲ್ಲಿ ಬಹಳಷ್ಟು ಜನ ಪ್ರಾಣ ಕಳೆದು ಕೊಂಡಿದ್ದಾರೆ. ಇದೀಗ 3ನೇ ಅಲೆ ಹೊಸ್ತಿಲಲ್ಲಿ ನಾವು ಇದ್ದೆವೆ. ಸರ್ಕಾರ ಕೋವಿಡ್​ ನಿಯಂತ್ರಣದ ಬಗ್ಗೆ ಕ್ರಮ ವಹಿಸಬೇಕು. ಆದರೆ, ಅದನ್ನು ಬಿಟ್ಟು ಸರ್ಕಾರದಲ್ಲಿ ಶಾಸಕರು ಮಂತ್ರಿ ಸ್ಥಾನಕ್ಕೆ ಲಾಬಿಗೆ ಮುಂದಾಗಿದ್ದಾರೆ. ಇನ್ನು ಸಚಿವ ಸ್ಥಾನ ಸಿಕ್ಕವರು ಬೇರೆ ಖಾತೆಯ ಅಧಿಕಾರಕ್ಕಾಗಿ ಹಪ ಹಪಿಸುತ್ತಿದ್ದಾರೆ. ಬಿಜೆಪಿಯಲ್ಲಿ ಐಕ್ಯತೆಯಿಲ್ಲ, ಒಮ್ಮತವಿಲ್ಲ, ಅಧಿಕಾರವೇ ಅವರಿಗೆ ಸರ್ವಸ್ವ ಎಂದು ಕಿಡಿಕಾರಿದರು.

  ರಾಜ್ಯದ ಜನತೆಯ ಕಷ್ಟದ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ. ಈ ಸರ್ಕಾರ ನಡೆಸಿಕೊಂಡು ಹೋಗುವುದು ಬಹಳ ದುಸ್ತರ ಅಂತಾ ನನಗೆ ಅನಿಸುತ್ತಿದೆ. ಅವರು ಉತ್ತಮ ರೀತಿ ಸರ್ಕಾರ ನಡೆಸಿಕೊಂಡು ಹೋಗಲಿ ಎಂಬುದು ನನ್ನ ಅಪೇಕ್ಷೆ ಎಂದರು.

  ಸದ್ಯ ಸಿಎಂ ಖುರ್ಚಿ ಅಲಗಾಡುತ್ತಿದೆಯೋ ಇಲ್ವೋ ಅದರ ಬಗ್ಗೆ ನಾನೇನು ಹೇಳಲ್ಲ. ಆದರೆ, ಸರ್ಕಾರದಲ್ಲಿ ಯಾರು ಖುಷಿಯಾಗಿಲ್ಲ. ತಮ್ಮ ಸರ್ಕಾರದ ವಿರುದ್ಧ ಶಾಸಕರು ಬಾಯಿಗೆ ಬಂದಂಗೆ ಮಾತನಾಡ್ತಾರೆ. ಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವಿಕಾರ ಮಾಡಿದವರಿ ಖಾತೆ ಖ್ಯಾತೆ ತೆಗೆದಿದ್ದಾರೆ. ನನಗೆ ಈ ಖಾತೆ ಬೇಡ ಎಂದು ಸಚಿವ ಆನಂದ್ ಸಿಂಗ್ ಬೋರ್ಡ್ ಕಿತ್ತು ಗೊಂಡ ಹೊಗಿದ್ದಾರೆ. ಸಚಿವ ಆನಂದ್ ಸಿಂಗ್ ತಮ್ಮ ಖಾತೆ ವಿಚಾರವಾಗಿ ಖುಷಿ ಆಗಿದ್ದಾರೋ ಇಲ್ವೋ ಎಂಬುದು ನನಗೆ ಅನುಮಾನ. ಸರ್ಕಾರ ಇಷ್ಟು ದಿನ ಅಧಿಕಾರಕ್ಕಾಗಿ ನಡೆಸಿದ ಕಿತ್ತಾಟ ಸಾಕು ಇನ್ನಾದರೂ ಬಂದು ತಕ್ಷಣ ರಾಜ್ಯದ ಜನತೆಯ ಜನಪರ ಕಾರ್ಯದತ್ತ ಧಾವಿಸಬೇಕು ಎಂದು ಆಗ್ರಹಿಸಿದರು.

  ಇದನ್ನು ಓದಿ:  ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜೆಡಿಎಸ್​​ ಪಾದಯಾತ್ರೆ; ದೇವೇಗೌಡ

  ಇನ್ನು ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರ ಹೆಚ್ಚಿನ ಗಮನವಹಿಸಿ ಅಭಿವೃದ್ಧಿಗೆ ಮುಂದಾಗಬೇಕು. ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದ ಯೋಜನೆಗಳನ್ನ ಪೂರ್ಣಗೊಳಿಸಲು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬೇಕು ಅಂತ ಮನವಿ ಮಾಡಿ ಪತ್ರ ಬರೆದಿದ್ದೇನೆ ಉತ್ತರ ಕರ್ನಾಟಕ ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬ ಬಗ್ಗೆ ಗಮನ ಹರಿಸಬೇಕು. ಮಂತ್ರಿಗಳ ಆದಿಯಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರ ಮಾಡಬೇಕು. ಮೇಲಿಂದ ಮೇಲೆ ಇಲ್ಲಿ ಅಧಿವೇಶನ ನಡೆಸಬೇಕು. ಮುಂದಿನ ಅಧಿವೇಶನ ಇಲ್ಲೇ ನಡೆಸಬಹುದಿತ್ತು ಚಳಿಗಾಲ ಅಧಿವೇಶನ ಮಾತ್ರ ಸುವರ್ಣ ಸೌಧ ಸೀಮಿತ ಮಾಡುವುದು ಬೇಡ ಎಂದು ತಿಳಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: