Ajjamada B. Devaiah: ಕೊಡಗಿನಲ್ಲಿ ವೀರ ಯೋಧ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

ದೇವಯ್ಯ ಅವರ ಸಾಹಸ, ಕೊಡಗಿನ ವೀರ ಸೇನಾನಿಗಳ ಚರಿತ್ರೆಯನ್ನು ದೇಶ ವಿದೇಶಗಳಿಂದ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ತಿಳಿಸಲು ಮತ್ತು ವೀರಯೋಧನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ಕೊಡಗಿನಲ್ಲಿ ವೀರ ಯೋಧ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

ಕೊಡಗಿನಲ್ಲಿ ವೀರ ಯೋಧ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

  • Share this:
ಕೊಡಗು(ಸೆ.07): ಶತ್ರು ದೇಶಕ್ಕೆ ನುಗ್ಗಿ ಪರಮ ವೈರಿಗಳ ಸದೆ ಬಡಿಯುತ್ತಲೇ ಹುತಾತ್ಮರಾಗಿದ್ದ ಕೊಡಗಿನ ವೀರ ಸೇನಾನಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಖಂಚಿನ ಪ್ರತಿಮೆಯನ್ನು ಅನಾವರಣ ಮಾಡಲಾಯಿತು. ಮಡಿಕೇರಿಯ ಹಳೆಯ ಬಸ್ ನಿಲ್ದಾಣ ವೃತ್ತದಲ್ಲಿ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ 15 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿವೃತ ಜನರಲ್ ಕೆ ಸಿ ನಂದಾ ಅನಾವರಣಗೊಳಿಸಿದರು. ಸೇನಾನಿಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಿದರು. ಅಲ್ಲದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್ ಪಿ ಕ್ಷಮಾ ಮಿಶ್ರಾ ಸೇರಿದಂತೆ ನಿವೃತ ಯೋಧರು ಸೇನಾನಿ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು.

1965ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ದೇವಯ್ಯ ಹೊಡೆದುರುಳಿಸಿದ್ದರು. ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕವೇ ಹೊಡೆದುರುಳಿಸಿದ್ದರು. ಈ ವೇಳೆ ಅವರಿದ್ದ ಯುದ್ಧ ವಿಮಾನ ಎರಡು ರೆಕ್ಕೆಗಳಿಗೂ ಬೆಂಕಿ ಹೊತ್ತಿ ಉರಿಯುದ್ದರೂ ಅದೇ ವಿಮಾನದಲ್ಲಿ ಹೋರಾಡುತ್ತಲೇ ವೀರ ಮರಣವನ್ನಪ್ಪಿದರು. ಈ ವಿಚಾರವನ್ನು ಪಾಕ್ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್ ಹುಸೇನ್ ಆನಂತರದ ದಿನಗಳಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Drug Mafia: ‘ರಾಗಿಣಿ, ಜಮೀರ್​​ ಯಾರೇ ಆಗಲೀ ಡ್ರಗ್ಸ್ ಕೇಸಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ‘ - ಸಿದ್ದರಾಮಯ್ಯ ಆಗ್ರಹ

ದೇವಯ್ಯ ಅವರ ಸಾಹಸ, ಕೊಡಗಿನ ವೀರ ಸೇನಾನಿಗಳ ಚರಿತ್ರೆಯನ್ನು ದೇಶ ವಿದೇಶಗಳಿಂದ ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ತಿಳಿಸಲು ಮತ್ತು ವೀರಯೋಧನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮಾರಕ ಟ್ರಸ್ಟ್ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ಮಹಾನ್ ಯೋಧನ ವಿಗ್ರಹವನ್ನು ನಿರ್ಮಿಸಲಾಗಿದೆ.
Published by:Ganesh Nachikethu
First published: