• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: 5 ನಿಮಿಷದಲ್ಲಿ 1 ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ; ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನ ಬಳಕೆ

Yadagiri: 5 ನಿಮಿಷದಲ್ಲಿ 1 ಎಕರೆ ಬೆಳೆಗೆ ಕೀಟನಾಶಕ ಸಿಂಪಡಣೆ; ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನ ಬಳಕೆ

ಡ್ರೋಣ್ ತಂತ್ರಜ್ಞಾನ ಮೂಲಕ ಕೀಟನಾಶಕ ಸಿಂಪಡಣೆ

ಡ್ರೋಣ್ ತಂತ್ರಜ್ಞಾನ ಮೂಲಕ ಕೀಟನಾಶಕ ಸಿಂಪಡಣೆ

ಭತ್ತ ಬೆಳೆಯುವ ರೈತರು ಕಾರ್ಮಿಕರ ಕೊರತೆ ಹಿನ್ನಲೆ ಭತ್ತದ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಚಿಂತೆ ಮಾಡುವಂತಾಗಿತ್ತು. ಈಗ ರೈತರ ಚಿಂತೆ ದೂರ ಮಾಡಲು ಡ್ರೋಣ್ ಯಂತ್ರದ ಮೂಲಕ ಕೀಟನಾಶಕ ಸಿಂಪಡಣೆ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ.

  • Share this:

ಯಾದಗಿರಿ (ಸೆ,23): ಡ್ರೋಣ್ ತಂತ್ರಜ್ಞಾನ (Drone Technology) ಬಳಕೆ ಮಾಡಿ ರೈತರು ಈಗ ಕೃಷಿ ಮಾಡಬಹುದಾಗಿದೆ. ಕಾರ್ಮಿಕರ ಕೊರತೆ, ಸಮಯ ಉಳಿತಾಯ, ರೈತರು ಆರೋಗ್ಯವನ್ನು ಕಾಪಾಡಿಕೊಳ್ಳಲು ಡ್ರೋಣ್ ತಂತ್ರಜ್ಞಾನ ಮೂಲಕ ಔಷಧಿ ಸಿಂಪಡಣೆ ಮಾಡಬಹುದಾಗಿದೆ. ಯಾದಗಿರಿಯಲ್ಲಿ (Yadagiri) ಕೃಷ್ಣಾ ಹಾಗೂ ಭೀಮಾನದಿ ಎರಡು ನದಿಗಳು ಹರಿಯುತ್ತವೆ. ನೀರಾವರಿ ಬೆಳೆ ಕ್ಷೇತ್ರ ಹೆಚ್ಚಿದೆ. ಜಿಲ್ಲೆಯ ಸುರಪುರ, ಹುಣಸಗಿ, ಶಹಾಪುರ, ವಡಗೇರಾ, ಯಾದಗಿರಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು (Farmers) ಭತ್ತ ಬೆಳೆಯುತ್ತಾರೆ.


ಯಾದಗಿರಿಯಲ್ಲಿ ರೈತರಿಗೆ ಅರಿವು..!


ಈಗಾಗಲೇ ಜಿಲ್ಲೆಯಲ್ಲಿ  90 ಸಾವಿರ ಹೆಕ್ಟೇರ್ ರೈತರು ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಭತ್ತ ಬೆಳೆಯುವ ರೈತರು ಕಾರ್ಮಿಕರ ಕೊರತೆ ಹಿನ್ನಲೆ ಭತ್ತದ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಚಿಂತೆ ಮಾಡುವಂತಾಗಿತ್ತು. ಈಗ ರೈತರ ಚಿಂತೆ ದೂರ ಮಾಡಲು ಡ್ರೋಣ್ ಯಂತ್ರದ ಮೂಲಕ ಕೀಟನಾಶಕ ಸಿಂಪಡಣೆ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗಿದೆ.


ಡ್ರೋಣ್ ತಂತ್ರಜ್ಞಾನ ಮೂಲಕ ಕೀಟನಾಶಕ ಸಿಂಪಡಣೆ


ಯಾದಗಿರಿಯಲ್ಲಿ ಮೊಟ್ಟಮೊದಲ ಬಾರಿಗೆ ಡ್ರೋಣ್ ತಂತ್ರಜ್ಞಾನ ಮೂಲಕ ಕೀಟನಾಶಕ ಸಿಂಪಡಣೆ ಮಾಡಲಾಗಿದೆ. ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೊರಿಸಿಕೊಡಲಾಯಿತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಾಯಿನಗರದ ರೈತ ನಾಗೇಶ್ವರರಾವ್ ಅವರ ಜಮೀನಿನಲ್ಲಿ ಡ್ರೋಣ್ ತಂತ್ರಜ್ಞಾನ ಬಳಸಿ ಕೀಟನಾಶಕ ಸಿಂಪಡಣೆ ಮಾಡುವ ಬಗ್ಗೆ ತೋರಿಸಲಾಯಿತು. ಕೃಷಿ ಇಲಾಖೆ ಹಾಗೂ ಮಹೀಂದ್ರ ಸುಮಿತ್ ಅಗ್ರಿ ಕಂಪನಿ ವತಿಯಿಂದ ಭತ್ತದ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು.




ರೈತರು ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಬೆನ್ನ ಹಿಂದೆ ಕೀಟನಾಶಕ ಯಂತ್ರ ಬಳಕೆ ಮಾಡುತ್ತಾರೆ. 1 ಎಕರೆ ಸಿಂಪಡಣೆ ಮಾಡಲು ಎರಡು ಗಂಟೆ ಸಮಯ ತೆಗೆದುಕೊಳ್ಳುವ ಜೊತೆ,ಕೀಟನಾಶಕ ಸಿಂಪಡಣೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ.ಅದೆ ರೀತಿ ಕೀಟನಾಶಕ  ಹಾಗೂ ಹೆಚ್ಚು ನೀರು ಖರ್ಚಾಗುತ್ತದೆ. ಆದರೆ, ಡ್ರೋಣ್ ಸಿಂಪಡಣೆ ಯಂತ್ರ ಬಳಕೆ ಮಾಡಿದರೆ 16 ಲೀಟರ್ ನೀರಿನಲ್ಲಿ ಕೀಟನಾಶಕವನ್ನು ಎರಡುವರೆ ಎಕರೆ ಸಿಂಪಡಣೆ ಮಾಡಲಾಗುತ್ತದೆ‌. ಇದರಿಂದ ಕೀಟನಾಶಕ , ನೀರು ಉಳಿತಾಯ, ಸಮಯ ಉಳಿತಾಯ, ಕಾರ್ಮಿಕರ ಕೊರತೆ ನಿಗಲಿದೆ.


ಇದನ್ನೂ ಓದಿ: Electricity Rate Rise: ಕರ್ನಾಟಕದ ಜನರಿಗೆ 'ಕರೆಂಟ್'​ ಶಾಕ್; ವಿದ್ಯುತ್‌ ದರ ಮತ್ತೆ ಏರಿಕೆ!




ಆಧುನಿಕ ತಂತ್ರಜ್ಞಾನ ಬಳಕೆ


ಈ ಬಗ್ಗೆ ಮಹೀಂದ್ರಾ ಕಂಪನಿಯ ಅಧಿಕಾರಿ ಬಸವರಾಜ ರಾಂಪೂರೆ ಅವರು ಮಾತನಾಡಿ, ರೈತರು ಕಾಲಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕಿದೆ. ಭತ್ತ ಬೆಳೆಯುವ ರೈತರು ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಬೆನ್ನಿಗೆ ಯಂತ್ರ ಹಾಕಿಕೊಂಡು ಬೆಳೆಗೆ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಇದು 1 ಎಕರೆ ಭೂಮಿಗೆ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಕೀಟನಾಶಕ, ನೀರು ಪೋಲಾಗುತ್ತದೆ.


5 ನಿಮಿಷದಲ್ಲಿ 1 ಎಕರೆ ಬೆಳೆಯಲ್ಲಿ ಕೀಟನಾಶಕ ಸಿಂಪಡಣೆ


ಅದೆ ರೀತಿ ಸಿಂಪಡಣೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಡ್ರೋಣ್ ತಂತ್ರಜ್ಞಾನ ಬಳಕೆ ಮಾಡಿದರೆ 5 ನಿಮಿಷದಲ್ಲಿ ಒಂದು ಎಕರೆ ಬೆಳೆಯಲ್ಲಿ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ.ಸಮಯ ಉಳಿತಾಯ,ಕೀಟನಾಶಕ ಉಳಿತಾಯ, ಕಾರ್ಮಿಕರ ಕೊರತೆ ಸಮಸ್ಯೆ ಜೊತೆ ಆರೋಗ್ಯದ ಮೇಲೆ ಪರಿಣಾಮ ಬಿರುವದಿಲ್ಲ‌. ಹೀಗಾಗಿ, ಕೇಂದ್ರ ಸರಕಾರ ಈಗ ಡ್ರೋಣ್ ತಂತ್ರಜ್ಞಾನ ಕೃಷಿಗೆ ಅನುಮತಿ ನೀಡಿದ ಹಿನ್ನಲೆ, ರೈತರಿಗೆ ಈ ಬಗ್ಗೆ ಜಮೀನು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆಂದರು.


ಇದನ್ನೂ ಓದಿ: Kukke Subrahmanya Tample: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸರ್ಪ ಸಂಸ್ಕಾರ ಸೇವಾ ದರದಲ್ಲಿ ಭಾರೀ ಹೆಚ್ಚಳ!


ಕೇಂದ್ರ ಸರಕಾರ ಈಗಾಗಲೇ ಡ್ರೋಣ್ ಯಂತ್ರದ ಮೂಲಕ ಸಿಂಪಡಣೆ ಗೆ ಅನುಮತಿ ನೀಡಿದ್ದು, ಈಗ ಡ್ರೋಣ್ ಕಂಪನಿಗಳಿಂದ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಅರಿವು ಮೂಡಿಸಲಾಗಿದೆ.

First published: