HOME » NEWS » State » SPECULATIONS RIPE THAT CM BS YEDIYURAPPA MAY BE REPLACED AFTER JAN 16TH SNVS

ಸಂಕ್ರಾಂತಿ ನಂತರ ಅಧಿಕಾರ ಬದಲಾವಣೆ ಆಗುತ್ತಾ? ಸಿ.ಟಿ. ರವಿ, ಬೇಳೂರು ಹೇಳಿಕೆ ಮೂಡಿಸಿದೆ ಕುತೂಹಲ

ಯಡಿಯೂರಪ್ಪಗೆ ಸಿಗಂದೂರು ದೇವಿಯ ಶಾಪ ಇದ್ದು, ಅವರು ಜನವರಿ 16ರ ನಂತರ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದಿದ್ಧಾರೆ.

news18-kannada
Updated:December 28, 2020, 11:58 AM IST
ಸಂಕ್ರಾಂತಿ ನಂತರ ಅಧಿಕಾರ ಬದಲಾವಣೆ ಆಗುತ್ತಾ? ಸಿ.ಟಿ. ರವಿ, ಬೇಳೂರು ಹೇಳಿಕೆ ಮೂಡಿಸಿದೆ ಕುತೂಹಲ
ಸಿ.ಟಿ. ರವಿ.
  • Share this:
ಬೆಂಗಳೂರು(ಡಿ. 28): ಸಂಕ್ರಾಂತಿ ನಂತರ ಹೊಸ ಸಂಕ್ರಮಣ ಶುರುವಾಗುವಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಪರ್ವ ಶುರುವಾಗಲಿದೆ ಎಂದು ಹಿರಿಯ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ ನೀಡಿದ್ದ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿರುವುದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ನೀಡಿದ ಹೇಳಿಕೆ. ಯಡಿಯೂರಪ್ಪ ಅವರಿಗೆ ಸಿಗಂದೂರು ದೇವಿಯ ಶಾಪ ತಟ್ಟಿದೆ. ಹಾಗೆಯೇ ಬಿಜೆಪಿಯ ಕೆಲ ಶಾಸಕರ ಶಾಪವೂ ಇದೆ. ಈ ಕಾರಣಕ್ಕೆ ಸಂಕ್ರಾಂತಿ ನಂತರ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇರುವುದಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಮಾಜಿ ಬಿಜೆಪಿ ನಾಯಕರೂ ಆದ ಬೇಳೂರು ಗೋಪಾಲಕೃಷ್ಣ, ಸಿಎಂ ಸ್ಥಾನದಲ್ಲಿ ಬದಲಾವಣೆ ಆಗುತ್ತೆ ಎಂದು ತಾನು ಭವಿಷ್ಯ ಹೇಳುತ್ತಿಲ್ಲ. ಆದರೆ, ತನಗೆ ಬಂದ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರನ್ನ ಕೆಳಗಿಳಿಸಲು ಪ್ರಯತ್ನಗಳು ನಡೆಯುತ್ತಿವೆ. ಜನವರಿ 16ರ ನಂತರ ಅವರು ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂದಿದ್ದಾರೆ.

ಸಿಗಂದೂರು ಕ್ಷೇತ್ರದ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಯಡಿಯೂರಪ್ಪ ಅವರು ದೇವಿಯ ಶಾಪಕ್ಕೆ ತುತ್ತಾಗಿದ್ಧಾರೆ. ಹೀಗಾಗಿಯೇ ಅವರ ವಿರುದ್ಧ ಮತ್ತೊಂದು ಡೀನೋಟಿಫಿಕೇಶನ್ ಪ್ರಕರಣ ಬಂದಿದೆ. ಇದು ದೇವಿಯ ಶಾಪ ತಟ್ಟಿರುವುದಕ್ಕೆ ಸಾಕ್ಷಿ ನಾನು ಯಡಿಯೂರಪ್ಪ ಅವರ ರಾಜೀನಾಮೆ ಕೇಳುವುದಿಲ್ಲ. ಯಡಿಯೂರಪ್ಪ ಬಗ್ಗೆ ಅವರ ಪಕ್ಷದವರೇ ಮಾತನಾಡುತ್ತಿದ್ದಾರೆ. ಮಕರ ಸಂಕ್ರಮಣದ ನಂತರ ಹೊಸ ರಾಜಕೀಯ ತಿರುವು ಆಗಲಿದೆ ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಸಂಕ್ರಾಂತಿ ಗಿಫ್ಟ್; ಜ. 17ರಂದು ಪ್ರವಾಸ ಭಾಗ್ಯ

ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ ಹೇಳಿಕೆ ನೀಡಿ ನಾಯಕತ್ವ ಬದಲಾವಣೆ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ದತ್ತಮಾಲ ಜಯಂತಿ ಹಿನ್ನೆಲೆಯಲ್ಲಿ ಮಾಲಾಧಾರಿಯಾಗಿ ಭಿಕ್ಷಾಟನೆ ಹೊರಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿ.ಟಿ. ರವಿ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೂಡಾರ್ಥವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಜಕಾರಣದಲ್ಲಿ ಎಲ್ಲವೂ ಇರುತ್ತೆ. ಸದ್ದುಗದ್ದಲ ಇಲ್ಲದಿದ್ದರೆ ಜಾತ್ರೆ ಆಗಲ್ಲ ಎಂದು ಸಿ.ಟಿ. ರವಿ ಹೇಳಿದ್ಧಾರೆ. ಜನವರಿ 16ರ ನಂತರ ಏನಾದರೂ ಆಗಬಹುದು ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಸಿ.ಟಿ. ರವಿ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದ ಕುತೂಹಲ ಮೂಡಿಸಿದೆ.

ಆದರೆ, ರಾಜ್ಯ ಸರ್ಕಾರದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಬಿಜೆಪಿ ಹೈಕಮಾಂಡ್ ಬಾರಿ ಬಾರಿ ಸ್ಪಷ್ಟನೆ ನೀಡುತ್ತಿದೆಯಾದರೂ ಒಳಗಿಂದೊಳಗೆ ಸಿಎಂ ಪದಚ್ಯುತಿಗೆ ಪ್ರಯತ್ನಗಳು ನಡೆಯುತ್ತಲೇ ಇರುವುದು ನಿಜ. ಹೀಗಾಗಿ, ಯಡಿಯೂರಪ್ಪ ನಿರಂತರವಾಗಿ ಕತ್ತಿನ ಅಲುಗಿನ ಮೇಲೆ ನಡೆಯುವಂಥ ಪರಿಸ್ಥಿತಿ ಇದೆ.
Published by: Vijayasarthy SN
First published: December 28, 2020, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories