ಗಣೇಶ ಚತುರ್ಥಿಯಲ್ಲ ಸ್ವಾಮಿ, ಇದು ಮಾಘ ಪೂಜೆ! ಕಾರವಾರದಲ್ಲಿ ಗಣಪತಿ ಪ್ರತಿಷ್ಠಾಪನೆ

ಅಲ್ಲಿ ಬೃಹತ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಭಕ್ತರೆಲ್ಲ ಗಣಪತಿಯನ್ನು ಪೂಜಿಸುತ್ತಾ ಇದ್ದರು. ಅರೇ, ಇದೇನು ಗಣೇಶ ಚತುರ್ಥಿ ಆಚರಣೆ ಅಂದುಕೊಂಡ್ರಾ? ಇಲ್ಲ, ಇದು ಮಾಘ ಮಾಸದ ವಿಶೇಷ ಆಚರಣೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ ಓದಿ...

ಕಾರವಾರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿ

ಕಾರವಾರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿ

  • Share this:
ಕಾರವಾರ: ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿ (Ganesha Chaturthi) ಸಮಯದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ, ಹಬ್ಬ (Festival)  ಆಚರಿಸುವುದು ವಾಡಿಕೆ. ಹಬ್ಬ ಮುಗಿದು ಇಂದಿಗೆ ಐದಾರು ತಿಂಗಳು ಕಳೆದಿದೆ. ಆದರೆ ಕಾರವಾರದಲ್ಲಿ (Karwar) ಮನೆ ಮನೆಗಳಲ್ಲಿ, ಸಾರ್ವಜನಿಕವಾಗಿಯೂ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ (Worship) ಸಲ್ಲಿಸಲಾಯಿತು. ಮಾಘ‌ಮಾಸದ ಗಣೇಶ ಚತುರ್ಥಿಹಬ್ಬಕ್ಕೆ ಕಾರವಾರದಲ್ಲಿ ಭಾರಿ‌ವಿಶೇಷತೆ. ಭಕ್ತಿ ಪರಾಕಾಷ್ಠೆಯ ಜತೆ ಸಂಭ್ರಮದ ಗಣೇಶ ಜಯಂತಿ ಸಂಭ್ರಮ ಜೋರಾಗಿ ಹಮ್ಮಿಕೊಳ್ಳಲಾಗಿತ್ತು.  ಸಾರ್ವಜನಿಕವಾಗಿಯೂ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸಲಾಯಿತು...

ಮಾಘ ಚೌತಿ ಹಬ್ಬದಂದು ಕಾರವಾರದಲ್ಲಿ ವಿಶೇಷತೆ

ಹೌದು, ಮಾಘ ಚೌತಿ ಅಂದರೆ ಗಣೇಶನ ಹುಟ್ಟಿದ ದಿನವೆಂದು ನಂಬಲಾಗುವ ಈ ದಿನವನ್ನ ಉತ್ತರ ಕನ್ನಡ ಜಿಲ್ಲೆಯ  ಕಾರವಾರ‌ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಗಣೇಶ ಚತುರ್ಥಿಯಂತೆ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಭಾದ್ರಪದದ ಗಣೇಶ ಚತುರ್ಥಿ ಸಂದರ್ಭದಲ್ಲಿ ನಾನಾ ಕಾರಣಗಳಿಂದ ಹಬ್ಬ ಆಚರಿಸಲು ಸಾಧ್ಯವಾಗದವರು ಈ ಮಾಘ ಚೌತಿಯಂದು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ.

ಅದರಲ್ಲೂ ವಿಶೇಷವಾಗಿ ಹರಕೆ ಹೊತ್ತವರು ಈ ದಿನ ವಿಘ್ನ ನಿವಾರಕನನ್ನ ಪ್ರತಿಷ್ಠಾಪಿಸಿ ಹರಕೆ ತೀರಿಸುತ್ತಾರೆ. ಹೀಗೆ ಕಾರವಾರದಲ್ಲಿ ನೂರಾರು ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ನೆರವೇರಿಸಲಾಯಿತು... ಸಾರ್ವಜನಿಕವಾಗಿಯೂ ಕಾರವಾರದಲ್ಲಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ರು...

ರಂಗಭೂಮಿ ಕಲಾವಿದರಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳ ನಿವಾರಣೆಗೆ ಹರಕೆ ಹೊತ್ತು ಗಣಪತಿಯನ್ನ ಈ ಮಾಘ ಚೌತಿಯಂದು ಅನೇಕರು ಪ್ರತಿಷ್ಠಾಪಿಸುತ್ತಾರೆ. ಆದರೆ ಕಾರವಾರ ತಾಲೂಕಿನ ಗ್ರಾಮೀಣ ಭಾಗದ ಕೆಲವು ಕಡೆ  ಈ ಬಾರಿ ಕೋವಿಡ್ ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ರಂಗಭೂಮಿ ಕಲಾವಿದರ ಸಮಸ್ಯೆ ಪರಿಹಾರಕ್ಕಾಗಿ ಸಾರ್ವಜನಿಕವಾಗಿ ಹರಕೆ ಗಣಪತಿಯನ್ನ ಪ್ರತಿಷ್ಠಾಪಿಸಲಾಗಿದೆ.

ಇದನ್ನೂ ಓದಿ: Bengaluru: ಕಳ್ಳತನಕ್ಕೆ ಅಂತ ಹೋದ, ದೇವರಿಗೆ ಕೈಮುಗಿದು ವಾಪಸ್ ಬಂದ! ಈ ಕಳ್ಳನಿಗೆ ಅದೇನಾಯ್ತಪ್ಪಾ?

ಮಾಘ ಚೌತಿ ಉತ್ಸವ ಗಣೇಶ ಚತುರ್ಥಿಯಂತೆ ವಿಜ್ರಂಭಣೆಯಿಂದಲೇ ನಡೆಯಿತು. ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯನ್ನ ಒಂದೇ ದಿನ, ಅಂದರೆ ಇಂದು ರಾತ್ರಿಯೇ ವಿಸರ್ಜಿಸಿದರೆ, ಸಾರ್ವಜನಿಕ ಗಣೇಶನನ್ನ ಎರಡನೇ ದಿನ ಮಧ್ಯಾಹ್ನ ಮಹಾಪೂಜೆ ನಡೆಸಿ ವಿಸರ್ಜಿಸಲಾಗುತ್ತದೆ.

ಮಹಾಮಾರಿ ತೊಲಗಲಿ ಎಂದು ಗಣೇಶನ ವಿಗ್ರಹ ಪ್ರತಿಷ್ಠಾಪನೆ

ಕಾರವಾರದ ಹಳೆಕೋಟ ಗ್ರಾಮೀಣ ಭಾಗದಲ್ಲಿ ಕೊರೋನಾ ಸಂಕಷ್ಟ ದಿನ ತೊಲಗಲಿ ಮತ್ತು ಸಂಕಷ್ಟದ ಸ್ಥಿತಿಯಲ್ಲಿ ಇರುವ ಕಲಾವಿದರ ವೇದಿಕೆಗಳು ತಮ್ಮ ತಮ್ಮ ನಾಟಕ , ಯಕ್ಷಗಾನ ಸೇರಿ ವಿವಿಧ ಕಲಾ ಪ್ರದರ್ಶನ ಮಾಡಿ ಕಲಾವಿದರ ಸಂಕಷ್ಟದ ದಿನ‌ ತೊಲಗಲಿ‌ ಎಂದು ಗಣೇಶ ಪ್ರತಿಷ್ಟಾಪಿಸಿ ಪೂಜೆ ಪುನಸ್ಕಾರ ನೆರವೇರಿಸಿದರು.

ಇತ್ತೀಚೆಗೆ ಕೊರೋನಾ ಸಂಕಷ್ಟದಲ್ಲಿ ಜನ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ ಇಂತ ದಿನಗಳು ಮತ್ತೆ ಮರು‌ಕಳಿಸದಿರಲಿ ಎಂದು ಪ್ರಾರ್ಥಿಸಿ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಯಿತು... ಹೀಗೆ ಕಾರವಾರದಲ್ಲಿ ಅದ್ಧೂರಿ ಯಾಗಿ ಗಣೇಶನ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಯಿತು...


ಇದನ್ನೂ ಓದಿ: Statue Of Equality: ಹೈದ್ರಾಬಾದ್‌ನಲ್ಲಿಂದು ಶ್ರೀರಾಮಾನುಜರ ಪ್ರತಿಮೆ ಲೋಕಾರ್ಪಣೆ, ಏನಿದರ ವಿಶೇಷತೆ?

ಒಂದೇ ದಿನ ಮಾತ್ರ ಪೂಜೆ

ಭಾದ್ರಪದ ಮಾಸದಲ್ಲಿ ಗಣೇಶನನ್ನು ವಿಶೇಷ ಅಲಂಕರಿಸಲ್ಪಟ್ಟ ಮಂಟಪದಲ್ಲಿ ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಒಂದೂವರೆ ದಿನದಿಂದ 5, 7, 9, 11 ದಿನಗಳವರೆಗೆ ಬೆಸ ಸಂಖ್ಯೆಯಲ್ಲಿ ಇಟ್ಟು ಪೂಜಿಸಲಾಗುತ್ತದೆ. ಆದರೆ ಮಾಘ ಮಾಸದಲ್ಲಿ ಕೇವಲ ಒಂದೂವರೆ ದಿನ ಗಣೇಶನ ಮಣ್ಣಿನ ಮೂರ್ತಿಯನ್ನು ಪೂಜಿಸಲು ಅವಕಾಶ ಇದೆ. ಮಧ್ಯಾಹ್ನ ಪೂಜಿಸಿ ಸಂಜೆ ಸಮುದ್ರ, ನದಿ, ಕೆರೆ, ಬಾವಿಗಳಲ್ಲಿ ವಿಸರ್ಜಿಸಲಾಗುತ್ತದೆ.

ಒಟ್ಟಿನಲ್ಲಿ ಮಾಘ ಚೌತಿ ಹಬ್ಬದ ಹಿನ್ನಲೆ ಕಡಲನಗರಿ ಕಾರವಾರದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಜನರು ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನ ಮತ್ತೊಮ್ಮೆ ಆಚರಿಸಿದ್ದು ನಿಜಕ್ಕೂ ವಿಶೇಷವಾಗಿದೆ.
Published by:Annappa Achari
First published: