ಮಳೆಗಾಗಿ ಮೈತ್ರಿ ಸರ್ಕಾರದಿಂದ ಪರ್ಜನ್ಯ ಜಪ, ಹೋಮ; ರಾಜ್ಯದ ಮೇಲೆ ಕರುಣೆ ತೋರ್ತಾನಾ ಋಷ್ಯಶೃಂಗ ದೇವ?

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ಮಳೆದೇವ ಋಷ್ಯಶೃಂಗ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಹಾಗೂ ಜಪ ಮಾಡಿದರೆ ಮಳೆಯಾಗುತ್ತದೆ ಎಂಬ ಐತಿಹ್ಯವಿದೆ.

MAshok Kumar | news18
Updated:June 6, 2019, 8:21 AM IST
ಮಳೆಗಾಗಿ ಮೈತ್ರಿ ಸರ್ಕಾರದಿಂದ ಪರ್ಜನ್ಯ ಜಪ, ಹೋಮ; ರಾಜ್ಯದ ಮೇಲೆ ಕರುಣೆ ತೋರ್ತಾನಾ ಋಷ್ಯಶೃಂಗ ದೇವ?
ಪರ್ಜನ್ಯ ಹೋಮ ಸಾಂದರ್ಭಿಕ ಚಿತ್ರ.
MAshok Kumar | news18
Updated: June 6, 2019, 8:21 AM IST
ಚಿಕ್ಕಮಗಳೂರು (ಜೂನ್​.06); ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಪರಿಣಾಮ ಎಲ್ಲೆಡೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ವರ್ಷವೂ ಸಹ ರಾಜ್ಯದಲ್ಲಿ ಉತ್ತಮ ಮಳೆಯಾಗಲ್ಲ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ಉತ್ತಮ ಮಳೆಗಾಗಿ ಮೈತ್ರಿ ಸರ್ಕಾರ ದೇವರ ಮೊರೆಹೋಗಿದ್ದು, ಹೋಮ ಹವನ ಮಾಡಲು ಮುಂದಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿರುವ ಮಳೆದೇವ ಋಷ್ಯಶೃಂಗ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಹಾಗೂ ಜಪ ಮಾಡಿದರೆ ಮಳೆಯಾಗುತ್ತದೆ ಎಂಬ ಐತಿಹ್ಯವಿದೆ. ಈ ಹಿಂದೆಯೂ ಸಹ ರಾಜ್ಯದಲ್ಲಿ ಬರದ ಪರಿಸ್ಥಿತಿ ಉಂಟಾಗಿದ್ದಾಗ ಸಚಿವ ಡಿ.ಕೆ. ಶಿವಕುಮಾರ್ ಈ ದೇವಾಲಯದಲ್ಲಿ ಹರಕೆ ಹೊತ್ತಿದ್ದರು. ಉತ್ತಮ ಮಳೆಯಾದ ನಂತರ ಬಂದು ಹರಕೆ ತೀರಿಸಿದ್ದರು. ಇದೇ ಕಾರಣಕ್ಕಾಗಿ ಈ ವರ್ಷವೂ ಮಳೆಗಾಗಿ ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ಪಿ.ಟಿ. ಪರಮೇಶ್ವರ್ ನಾಯ್ಕ್ ಮುಂದಾಳತ್ವದಲ್ಲಿ ಹೋಮ ನಡೆಯುತ್ತಿದ್ದು ಇಬ್ಬರೂ ಋಷ್ಯಶೃಂಗ ದೇವಾಲಯದಲ್ಲೇ ಠಿಕಾಣಿ ಹೂಡಿದ್ದಾರೆ.

ಇದನ್ನೂ ಓದಿ : ಅಪಾಯದಲ್ಲಿ ಸಿಲಿಕಾನ್​ ಸಿಟಿ; ನಗರದ ಈ ಆರು ಪ್ರದೇಶಗಳಲ್ಲಿ ವಿಷವಾಗಿರುವ ಗಾಳಿ ಉಸಿರಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ಬ್ರಾಹ್ಮಿ ಮುಹೂರ್ತದಲ್ಲಿ ಪರ್ಜನ್ಯ ಹೋಮ

ಮೈತ್ರಿ ಸರ್ಕಾರ ಆಯೋಜಿಸಿರುವ ಪರ್ಜನ್ಯ ಹೋಮವನ್ನು ಇಂದು ಬೆಳಗ್ಗೆ 5.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಈಗಾಗಲೇ ಆರಂಭಿಸಲಾಗಿದೆ. 40 ಪುರೋಹಿತರಿಂದ ಪೂಜಾ ವಿಧಿವಿಧಾನ ಆರಂಭವಾಗಿದ್ದು, ಸತತವಾಗಿ ಹೋಮ ಹವನ ನಡೆಸಲಾಗುತ್ತಿದೆ. ಸಮೃದ್ಧ ಮಳೆಗಾಗಿ ಋಷ್ಯಶೃಂಗನಿಗೆ ರುದ್ರಾಭಿಷೇಕವನ್ನೂ ನಡೆಸಲಾಗುತ್ತಿದೆ.

ಅಲ್ಲದೆ, ಈ ವೇಳೆ ಪರ್ಜನ್ಯ ಹೋಮದ ಜೊತೆಗೆ ಪ್ರತಿಯೊಬ್ಬರು 10 ಸಾವಿರಕ್ಕೂ ಅಧಿಕ ಜಪ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಿದರು. ಆದರೆ, ಪೂಜೆಯ ಫಲವಾಗಿ ಈ ವರ್ಷವಾದರೂ ಉತ್ತಮ ಮಳೆಯಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಾಗಿದೆ.
Loading...

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...