ಮೈಸೂರು: ಇಂದು ಜೆಡಿಎಸ್ ಪಂಚರತ್ನ ರಥಯಾತ್ರೆ (Pancharatna Yatre) ಸಮಾರೋಪ ಸಮಾರಂಭ ನಡೆಯಲಿದ್ದು, ಮೈಸೂರಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಚಾಮುಂಡಿಬೆಟ್ಟ (Chamundi Hill) ತಪ್ಪಲಿನ ಉತ್ತನಹಳ್ಳಿಯಲ್ಲಿ (Uttanahalli) ಸಮಾವೇಶ ನಡೆಯಲಿದೆ. ಶನಿವಾರ ಶಾಸಕ ಜಿ.ಟಿ ದೇವೇಗೌಡ (MLA GT Deve Gowda), ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ಸಿದ್ಧತೆಯನ್ನ ಪರಿಶೀಲಿಸಿದ್ದರು. ಇನ್ನು, ಈ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ (Former PM HD Deve gowda) ವಿಶಿಷ್ಟ ಸ್ಮರಣಿಕೆ ನೀಡಲು ಜೆಡಿಎಸ್ ಕಾರ್ಯಕರ್ತ ಸತೀಶ್ಗೌಡ ಉಡುಗೊರೆ ಸಿದ್ದಪಡಿಸಿದ್ದಾರೆ.. ಕಲಾವಿದ ನಂದನ್ ಸಿಂಗ್ (Artist Nandan Singh) ತಯಾರಿಸಿರುವ ಸ್ವರ್ಣಲೇಪಿತ ನೇಗಿಲು, ಇಮ್ಮಡಿ ಪುಲಕೇಶಿ ಮಾದರಿಯ ಪೇಟ ನೀಡಲಿದ್ದಾರೆ.
ಇಮ್ಮಡಿ ಪುಲಿಕೇಶಿ ಧರಿಸುತ್ತಿದ್ದ ಮಾದರಿಯ ಪೇಟ ಇದಾಗಿದೆ. ಈ ಹಿಂದೆ ಕಲಾವಿದ ನಂದನ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಪ್ರಭು ಕೆಂಪೇಗೌಡ ಮಾದರಿಯ ಪೇಟ ತಯಾರಿಸಿದ್ದರು. ಅಭಿಮಾನಿಯೊಬ್ಬರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗಾಗಿ ಬೆಳ್ಳಿ ಪೆನ್ ನೀಡುತ್ತಿದ್ದಾರೆ.
ಅದೃಷ್ಟ ನೀಡುತ್ತಾ ಚಾಮುಂಡೇಶ್ವರಿ?
2018ರ ವಿಧಾನಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಸಮಾವೇಶ ಆರಂಭಿಸಿದ್ದರು. 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಈಗ ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಚಾಮುಂಡೇಶ್ವರಿಯಲ್ಲಿ ಆಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: Rohini Sindhuri Case: ಡಿ ರೂಪಾಗೆ ನ್ಯಾಯಾಲಯದಿಂದ ಸಮನ್ಸ್
ಬಗೆ ಬಗೆಯ ಹಾರಗಳು
ಕೋಲಾರದಿಂದ ಆರಂಭವಾದ ಜೆಡಿಎಸ್ ಪಂಚರತ್ನಯಾತ್ರೆಗೆ ಇಂದು ಮುಕ್ತಾಯಗೊಳ್ಳಲಿದೆ. ಕುಮಾಸ್ವಾಮಿ ಅವರು ತೆರಳಿದ ಕ್ಷೇತ್ರಗಳಲ್ಲಿ ಅಭಿಮಾನಿಗಳ ಮಾಜಿ ಮುಖ್ಯಮಂತ್ರಿಗಳನ್ನು ವಿಶೇಷ ಹಾರಗಳಿಂದ ಬರಮಾಡಿಕೊಂಡಿದ್ದರು. ಟೊಮ್ಯಾಟೋ, ಕಬ್ಬು, ಕೋತಂಬರಿ ಸೊಪ್ಪು ಸೇರಿದಂತೆ ಹೀಗೆ ಭಿನ್ನ ಭಿನ್ನ ಹಾರಗಳನ್ನು ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ