75 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಕೇಂದ್ರದಿಂದ ಸಮಿತಿ ರಚನೆ; ವಿರೇಂದ್ರ ಹೆಗ್ಡೆ, ಬಿಎಮ್​ ಹೆಗ್ಡೆ ಆಯ್ಕೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ, ಹೆಸರಾಂತ ವೈದ್ಯ ಪದ್ಮ ವಿಭೂಷಣ ಡಾ ಬಿ.ಎಂ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. 

ಡಾ ಬಿ.ಎಂ ಹೆಗ್ಡೆ- ಡಾ. ಡಿ.ವಿರೇಂದ್ರ ಹೆಗ್ಗಡೆ

ಡಾ ಬಿ.ಎಂ ಹೆಗ್ಡೆ- ಡಾ. ಡಿ.ವಿರೇಂದ್ರ ಹೆಗ್ಗಡೆ

  • Share this:
ಈ ಬಾರೀ ನಮಗೆಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಹೀಗಾಗಿ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರ್ಕಾರ  ಚಿಂತನೆ ನಡೆಸಿದೆ.ಈ ಹಿನ್ನಲೆಯಲ್ಲಿ ದೇಶದ ಪ್ರತಿಷ್ಠಿತ ಗಣ್ಯ ವ್ಯಕ್ತಿಗಳ ಒಟ್ಟುಗೂಡುವಿಕೆಯಲ್ಲಿ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಈ ಮೂಲಕ ದೇಶದ ಸ್ವಾತಂತ್ರ್ಯ ದ ಸಂಭ್ರಮವನ್ನು ಅವಿಸ್ಮರಣೀಯ ಗೊಳಿಸಲು ಸರ್ಕಾರ ಯೋಚಿಸಿದೆ. ಸ್ವಾತಂತ್ರ್ಯ ದಿನಾಚರಣೆಗೆ ಸದ್ಯ ಕೆಲ ತಿಂಗಳಷ್ಟೆ ಬಾಕಿಯಿದೆ. ಆದರೆ ಈ ಬಾರಿ ಎಂದಿಗಿಂತಲೂ ವಿಶಿಷ್ಟವಾಗಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ  ಸಮಿತಿಯೊಂದನ್ನು ರಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಲಿದ್ದು, ಕರ್ನಾಟಕದಿಂದಲೂ ಸಮಿತಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ, ಹೆಸರಾಂತ ವೈದ್ಯ ಪದ್ಮ ವಿಭೂಷಣ ಡಾ ಬಿ.ಎಂ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. 259 ಜನ ಈ ಸಮಿತಿಯಲ್ಲಿ ಇರಲಿದ್ದು, 28 ರಾಜ್ಯಗಳ ಮುಖ್ಯಮಂತ್ರಿಗಳು ಇರಲಿದ್ದಾರೆ.

ರಾಜ್ಯ ಕರಾವಳಿಯಿಂದಲೇ ಇಬ್ಬರು ಪ್ರಮುಖ ಗಣ್ಯರು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಬಗ್ಗೆ ಮಾತನಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ 75ನೇ ವರ್ಷಕ್ಕೆ ಸ್ವಾತಂತ್ರ್ಯ ಭಾರತವನ್ನು ತಲುಪಿದ್ದೇವೆ ಎಂಬುದು ಹೆಮ್ಮೆಯ ಸಂಗತಿ. ಈ ಅವಧಿಯಲ್ಲಿ ದೇಶ ಏನೆಲ್ಲಾ ಅಭಿವೃದ್ದಿ ಕಂಡಿದೆ ಎಂಬುದನ್ನು ನೋಡಿದ್ದೇನೆ. ಸಮಿತಿಗೆ ಆಯ್ಕೆಯಾಗಿರುವುದರಿಂದ ಕೆಲ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಸಲಹೆ ನೀಡುತ್ತೇನೆ. ಇದರ ಜೊತೆ ಕೇಂದ್ರ ಸರ್ಕಾರ ನೀಡುವ ಸಲಹೆಗಳನ್ನು ನಮ್ಮಲ್ಲಿ ಅನುಷ್ಟಾನಗೊಳಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.

ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರಿಗೆ ಸದ್ಯ 74 ವರ್ಷ ವಯಸ್ಸಾಗಿದ್ದು, ಹೀಗಾಗಿ ಸ್ವಾತಂತ್ರ್ಯ ಕಾಲದಿಂದ ಈವರೆಗೆ ಆಗಿರುವ ಬೆಳವಣಿಗೆಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿಯಿದೆ. ಒಟ್ಟಿನಲ್ಲಿ ಈ ಸಮಿತಿಗೆ ಕರ್ನಾಟಕದ ಗಣ್ಯರು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯೆ ಸರಿ.

250 ಮಂದಿ ಸದಸ್ಯರಿರುವ ಈ ಸಮಿತಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ,ಸುಪ್ರೀಂ ಕೋರ್ಟ್ ಸಿಜೆಐ ಎಸ್.ಎ  ಬೋಬ್ಡೆ,ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ,ಮಾಜಿ ಉಪ ರಾಷ್ಟ್ರ ಪತಿ ಪ್ರತಿಭಾ ಪಾಟೀಲ್, ಕೇಂದ್ರ ಸಚಿವ ಸದಾನಂದ ಗೌಡ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಡಾ.ಡಿ ವೀರೇಂದ್ರ ಹೆಗ್ಗಡೆ,ಪದ್ಮಶ್ರೀ ಪುರಸ್ಕೃತ ಡಾ.ಬಿ ಎಮ್ ಹೆಗ್ಡೆ, ಬ್ಯಾಂಕರ್ ಕೆವಿ ಕಾಮತ್,  ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಕಲಾವಿದರರಾದ  ಲತಾ ಮಂಗೇಶ್ಕರ್,ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಸೇರಿದಂತೆ28 ರಾಜ್ಯ ಗಳ ಮುಖ್ಯ ಮಂತ್ರಿಗಳು, ರಾಜ್ಯಪಾಲರು, ಹಲವು ವಿಪಕ್ಷ ನಾಯಕರು,ಕೇಂದ್ರ ಸಚಿವರುಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Published by:Seema R
First published: