ಹುಬ್ಬಳ್ಳಿ: ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammelana) ಹೋಗುವವರಿಗೆ ನೈಋತ್ವ ರೈಲ್ವೆ (South Western Railway zone) ಸಿಹಿ ಸುದ್ದಿ ಕೊಟ್ಟಿದೆ. ರಾಜ್ಯದ ವಿವಿಧೆಡೆಯಿಂದ ಹಾವೇರಿಗೆ ವಿಶೇಷ ರೈಲು ಓಡಿಸಲು ತೀರ್ಮಾನಿಸಿದೆ. ಜನವರಿ 6, 7 ಹಾಗೂ 8 ರಂದು ವಿಶೇಷ ರೈಲುಗಳ (Special Railway) ಓಡಾಟ ನಡೆಯಲಿದೆ. ಯಶವಂತಪುರ – ಹುಬ್ಬಳ್ಳಿ (Yeshwanthpur To Hubballi) ನಡುವೆ ಮೂರು ವಿಶೇಷ ರೈಲು, ಹುಬ್ಬಳ್ಳಿ – ಹಾವೇರಿ (Hubbali-Haveri) ನಡುವೆ ಮೂರು ವಿಶೇಷ ರೈಲು, ಹಾವೇರಿ ಯಶವಂತಪುರ, ಹುಬ್ಬಳ್ಳಿ – ಹರಿಹರ ನಡುವೆ ವಿಶೇಷ ರೈಲು ಓಡಿಸಲು ತೀರ್ಮಾನಿಸಲಾಗಿದೆ.
ಕೆಲ ಎಕ್ಸಪ್ರೆಸ್ ರೈಲುಗಳನ್ನು ಹಾವೇರಿಯಲ್ಲಿ ನಿಲುಗಡೆಗೂ ಮಾಡುವಂತೆಯೂ ಕ್ರಮ ಕೈಗೊಳ್ಳಲಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಇದೇ ಮೊದಲ ಬಾರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಸಾಹಿತ್ಯಾಭಿಮಾನಿಗಳಿಗಾಗಿ ವಿಶೇಷ ರೈಲು
ಸಾಹಿತ್ಯಾಸಕ್ತರಿಗೆ ಬಂದು – ಹೋಗಲು ಅನುಕೂಲವಾಗಲೆಂದು ವಿಶೇಷ ರೈಲು ಬಿಡಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾಹಿತ್ಯಾಸಕ್ತರು ಬರ್ತಾರೆ. ಅವರ ಪ್ರಯಾಣಕ್ಕೆ ಅನುಕೂಲವಾಗಲೆಂದು ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಸಿ.ಪಿ.ಆರ್.ಒ. ಅನೀಷ್ ಹೆಗಡೆ ಮನವಿ ಮಾಡಿಕೊಂಡಿದ್ದಾರೆ.
ಆದಾಯ ಗಳಿಕೆ, ಕಾಮಗಾರಿ ಪೂರ್ಣಗೊಳಿಸುವಲ್ಲಿಯೂ ಪ್ರಗತಿ
ಪ್ರಸಕ್ತ ಸಾಲಿನಲ್ಲಿ ನೈಋತ್ಯ ರೈಲ್ವೆ ಗಣನೀಯ ಸಾಧನೆ ಮಾಡಿದೆ. ಆದಾಯ ಗಳಿಕೆಯಲ್ಲಿ ದಾಖಲೆ ಬರೆಯೋ ಜೊತೆಗೆ, ಸಮಯ ನಿರ್ವಹಣೆಯಲ್ಲಿ, ಡಬ್ಲಿಂಗ್, ವಿದ್ಯುದೀಕರಣ ಮತ್ತಿತರ ವಲಯದಲ್ಲಿ ಗಣನೀಯ ಸಾಧನೆಗೈದು ದೇಶದ ಗಮನ ಸೆಳೆಯುತ್ತಿದೆ. ದೇಶದ 2ನೇ ಬೆಸ್ಟ್ ರೈಲ್ವೆ ಎಂಬ ಹೆಗ್ಗಳಿಕೆಗೆ ನೈಋತ್ಯ ರೈಲ್ವೆ ಪಾತ್ರವಾಗಿದೆ.
ಆದಾಯ ಗಳಿಕೆಯಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದೆ. ಸರಕು ಸಾಗಾಣಿಕೆಯಿಂದ 7,500 ಕೋಟಿ ರೂಪಾಯಿ ಆದಾಯ ಗಳಿಸಿದ್ದರೆ, ಪ್ರಯಾಣಿಕರ ರೈಲುಗಳಿಂದ 2,500 ಕೋಟಿ ರೂಪಾಯಿ ಆದಾಯ ಗಳಿಕೆ ಮಾಡಿದೆ. ಸರಕು ಸಾಗಾಣಿಕೆ, ಪ್ರಯಾಣಿಕರ ರೈಲುಗಳಲ್ಲಿ ಶೇ. 58 ರಷ್ಟು ಪ್ರಗತಿ ಸಾಧನೆ ಮಾಡಲಾಗಿದೆ.
ಹಳಿ ಡಬ್ಲಿಂಗ್ ಬಹುತೇಕ ಪೂರ್ಣ
2022 ರಲ್ಲಿ 1000 ಸಾವಿರ ಕಿಲೋ ಮೀಟರ್ ಹಳಿ ಮೇಲ್ದರ್ಜೆಗೆ ಏರಿಸಲಾಗಿದೆ. ಹುಬ್ಬಳ್ಳಿ – ಬೆಂಗಳೂರು ನಡುವಿನ ಹಳಿ ಡಬ್ಲಿಂಗ್ ಬಹುತೇಕ ಪೂರ್ಣಗೊಂಡಿದೆ. ಹುಬ್ಬಳ್ಳಿಯ ಸಂಶಿ ಹಾಗೂ ಹಾವೇರಿಯ ದೇವರಗುಡ್ಡದ ನಡುವಿನ ಡಬ್ಲಿಂಗ್ ಕಾರ್ಯ ಫೆಬ್ರವರಿ ಅಂತ್ಯಕ್ಕೆ ಕಾರ್ಯ ಪೂರ್ಣಗೊಳ್ಳಲಿದ್ದು, ಒಂದು ಕಿಲೋ ಮೀಟರ್ ಅಂತರದ ಡಬ್ಲಿಂಗ್ ಕೆಲಸ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಇದರ ಬೆನ್ನ ಹಿಂದೆಯೇ ವಿದ್ಯುದೀಕರಣ ಕಾಮಗಾರಿಯೂ ಪೂರ್ಣಗೊಳಿಸಲಾಗುವುದು ಎಂದು ನೈಋತ್ಯ ರೈಲ್ವೆ ಜಿ.ಎಂ. ಸಂಜೀವ್ ಕಿಶೋರ್ ತಿಳಿಸಿದ್ದಾರೆ.
ಇದನ್ನೂ ಓದಿ: Kannada Sahitya Sammelana: ಶುಕ್ರವಾರದಿಂದ ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ
ಶೇ. 60 ರಷ್ಟು ವಿದ್ಯುದೀಕರಣ ಕಾಮಗಾರಿ
ಲೋಂಡ – ಮೀರಜ್ ಡಬ್ಲಿಂಗ್ ಕಾರ್ಯವೂ ಪ್ರಗತಿಯಲ್ಲಿದೆ. ಈ ನಡುವೆ ಹಲವು ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೆ ಏರಿಸಲಾಗಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇ. 60 ರಷ್ಟು ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ.
ಮಾರ್ಚ್ ಅಂತ್ಯದೊಳಗೆ ಹೆಚ್ಚುವರಿ 500 ಕಿಲೋ ಮೀಟರ್ ವಿದ್ಯುದೀಕರಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಂಜೀವ್ ಕಿಶೋರ್ ತಿಳಿಸಿದ್ದಾರೆ.
ಬೃಹತ್ ವೇದಿಕೆ ನಿರ್ಮಾಣ
ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಪ್ರಧಾನ ವೇದಿಕೆಯನ್ನು ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಪುಸ್ತಕ ಮಳಿಗೆ ಸೇರಿದಂತೆ ವಸ್ತು ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾಡಳಿಯ ಜಂಟಿಯಾಗಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ